Advertisement
ಕೊರೊನಾ ಸೋಂಕಿನಿಂದಾಗಿ ಯಲಹಂಕ ವಲಯದಲ್ಲಿ ಕಂಟೈನ್ಮೆಂಟ್ ಝೋನ್ ಮಾಡಲಾಗಿದ್ದ ಸಂದರ್ಭದಲ್ಲಿಆಹಾರದ ಕಿಟ್‌ಗಳನ್ನು ಹಂಚಿಕೆ ಮಾಡಲು ಪಾಲಿಕೆ ಮುಂದಾಗಿತ್ತು. ಈ ಹಂತದಲ್ಲಿ ಕಂಟೈನ್ಮೆಂಟ್ ಝೋನ್ ನಲ್ಲಿ 4,300 ಆಹಾರದ ಕಿಟ್‌ಗಳನ್ನು ನೀಡುವ ಗುರಿ ಇತ್ತು. ಇದರಲ್ಲಿ 1100 ಆಹಾರದ ಕಿಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದ 3,200 ಆಹಾರದ ಕಿಟ್‌ಗಳಲ್ಲಿ 750 ಕಿಟ್‌ಗಳು ಇಲಿ ಮತ್ತು ಹೆಗ್ಗಣದ ಪಾಲಾಗಿವೆ. ಈ ಕಿಟ್‌ಗಳನ್ನು ಯಲಹಂಕ ವಲಯದಲ್ಲಿರುವ ಬಡವರಿಗೆ ಹಂಚಿಕೆ ಮಾಡುವಂತೆ ಕಳೆದ ಮೂರು ತಿಂಗಳ ಹಿಂದೆಯೇ ಆಯುಕ್ತರು ಆದೇಶ ಮಾಡಿದ್ದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ. ಹೀಗಾಗಿ, ಈ ಪ್ರಕರಣವನ್ನು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎಂದು ಪರಿಗಣಿಸಲಾಗಿದ್ದು, ಅಧಿಕಾರಿಗಳ ವೇತನದಿಂದ ವಸೂಲಿ ಮಾಡಲು ಆಯುಕ್ತರು ಆದೇಶ ಮಾಡಿದ್ದಾರೆ. ತಲಾ ಒಂದು ಆಹಾರದ ಕಿಟ್‌ಗೆ 500 ರೂ. ನಿಗದಿ ಮಾಡಲಾಗಿದ್ದು, ಹಾಳಾಗಿರುವ 750 ಆಹಾರದ ಕಿಟ್‌ಗಳಿಗೆ ತಲಾ 500 ರೂ. ನಂತೆ ಒಟ್ಟು 3.75 ಲಕ್ಷ ರೂ. ಮೊತ್ತವನ್ನು 9ಜನ ಸಹಾಯಕ ಎಂಜಿನಿಯರ್‌ಗಳಿಂದ ವಸೂಲಿ ಮಾಡುವಂತೆ ಆದೇಶ ಮಾಡಿದ್ದಾರೆ.