Advertisement
ಲಾಕ್‌ಡೌನ್ ಆರಂಭವಾದ ಅನಂತರ ಮೀನಿನ ಅಲಭ್ಯತೆ ಯಿಂದಾಗಿ ಏರುಗತಿಯಲ್ಲಿದ್ದ ಮೀನಿನ ಬೆಲೆ ಈಗಲೂ ಅದೇ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಲಾಕ್‌ಡೌನ್ ತೆರವಾದ ಅನಂತರ ಹೊಟೇಲ್‌ಗಳು ತೆರೆಯಲ್ಪಟ್ಟಿವೆ. ಇದರಿಂದ ಮೀನಿಗೆ ಬೇಡಿಕೆ ಹೆಚ್ಚುತ್ತಿದೆ. ಜತೆಗೆ ಸದ್ಯ ಕರ್ನಾಟಕ ಕರಾವಳಿಯಲ್ಲಿ ಚಂಡಮಾರುತದಿಂದಾಗಿ ನಾಡ ದೋಣಿ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ತಮಿಳು ನಾಡು, ಕೇರಳ, ಆಂಧ್ರ ಪ್ರದೇಶ ಗಳ ಮೀನು ಕರ್ನಾಟಕ ಕರಾವಳಿಗೆ ಸರಬ ರಾಜಾ ಗುತ್ತಿದೆ. ಅಲ್ಲಿನ ಮೀನನ್ನೇ ಖರೀದಿಸಬೇಕಾದ ಅನಿವಾ ರ್ಯದಿಂದಾಗಿ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ.
“ಮೀನಿನ ಕೊರತೆ ಇರುವುದರಿಂದ ಬೆಲೆ ಸಹಜ ವಾಗಿಯೇ ಹೆಚ್ಚಾಗಿದೆ. ಆದರೆ, ಒಂದೇ ಸಮನೆ ಏರಿಕೆಯಾಗಿಲ್ಲ. ಕೆಲವು ಕಡೆ ಮೀನು ಇದ್ದರೂ ಜನರ ಕೈಯಲ್ಲಿ ಹಣವಿಲ್ಲದೆ ವ್ಯಾಪಾರವಾಗುತ್ತಿಲ್ಲ. ಈಗ ಚಂಡಮಾರುತದಿಂದಾಗಿ ಸಮುದ್ರದಲ್ಲಿ ಯಾವ ಮೀನುಗಾರಿಕೆಯೂ ನಡೆಯುತ್ತಿಲ್ಲ. ಹೊಳೆಯ ಮೀನು ಹಾಗೂ ತಮಿಳುನಾಡಿನ ಮೀನು ಮಾತ್ರ ದೊರೆಯುತ್ತಿವೆ’ ಎನ್ನುತ್ತಾರೆ ಮೀನು ವ್ಯಾಪಾರಿ ನಿತಿನ್. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಮೀನುಗಳ ಬೆಲೆ ಕೆ.ಜಿ.ಯೊಂದಕ್ಕೆ 40ರಿಂದ 50ರೂ.ಗಳಷ್ಟು ಹೆಚ್ಚಾಗಿತ್ತು. ಅಲ್ಲದೆ ಲಾಕ್‌ಡೌನ್ ಸಂದರ್ಭದಲ್ಲಿ 50-60 ರೂ.ಗಳಷ್ಟು ಹೆಚ್ಚಳವಾಗಿತ್ತು. ಸದ್ಯ ಅದು ಇನ್ನೂ ಹೆಚ್ಚ ಳವಾಗಿದೆ.
Related Articles
ಲಾಕ್‌ಡೌನ್ ಆರಂಭದಿಂದಲೇ ಏರಿಕೆಯಾಗಿರುವ ಕೋಳಿ ಮಾಂಸದ ದರವೂ ಇನ್ನೂ ಕಡಿಮೆಯಾಗಿಲ್ಲ. ಸದ್ಯ ಮಂಗಳೂರು ಮತ್ತು ಸುತ್ತಲಿನ ಪ್ರದೇಶದಲ್ಲಿ ಕೆ.ಜಿ.ಯೊಂದಕ್ಕೆ (ಲೈವ್ ಚಿಕನ್) 175ರಿಂದ 180 ರೂ. ದರವಿದೆ. ಕೋಳಿಯ ಮಾಂಸಕ್ಕೆ (ಸ್ಕಿನ್ ಔಟ್/ ಫೆದರ್ ಔಟ್) 250-290 ರೂ.ಗಳಿವೆ. ಕೋಳಿ ಫಾರಂಗಳಿಗೆ ಫೀಡ್ಸ್, ಕೆಲಸದಾಳುಗಳು ಹಾಗೂ ನೀರಿನ ಕೊರತೆಯಿಂದಾಗಿ ಬೆಲೆ ಇಳಿಕೆಯಾಗಿಲ್ಲ. ಸದ್ಯ ಕೋಳಿಗಳ ಕೊರತೆಯೂ ಇದೆ. ಜು. 15ರ ಅನಂತರ ಬೆಲೆ ಇಳಿಕೆ ನಿರೀಕ್ಷಿಸಬಹುದು ಎಂದು ಮಂಗಳೂರಿನ ಪ್ರಮುಖ ಕೋಳಿ ವ್ಯಾಪಾರಿಯೋರ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ತೀರ್ಮಾನವಾಗಿಲ್ಲಸಾಮಾನ್ಯವಾಗಿ ಮೀನಿನ ಲಭ್ಯತೆಗೆ ತಕ್ಕಂತೆ ಮೀನಿನ ದರ ನಿಗದಿಯಾಗುತ್ತದೆ. ಇದರ ಮೇಲೆ ಇಲಾಖೆಗೆ ನಿಯಂತ್ರಣವಿರುವುದಿಲ್ಲ. ಕೋವಿಡ್-19 ಲಾಕ್‌ಡೌನ್ ಆರಂಭದಲ್ಲೇ ಕರ್ನಾಟಕ ಕರಾವಳಿಯಲ್ಲಿ ನಿಷೇಧಿಸಲ್ಪಟ್ಟ ಆಳಸಮುದ್ರ ಮೀನುಗಾರಿಕೆಗೆ ಅನುಮತಿ ನೀಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.
-ಪಾರ್ಶ್ವನಾಥ್ ದ.ಕ. ಜಿಲ್ಲಾ ಉಪನಿರ್ದೇಶಕ, ಮೀನುಗಾರಿಕಾ ಇಲಾಖೆ. ಪ್ರಸ್ತುತ ಮಂಗಳೂರು ಮಹಾನಗರ ಮತ್ತು ಸುತ್ತಮುತ್ತ ಹಾಗೂ ಜಿಲ್ಲೆಯ ವಿವಿಧೆಡೆ ಇರುವ ಮೀನಿನ ದರ ಈ ಕೆಳಗಿನಂತಿದೆ. ಆದರೆ ಮೀನಿನ ದರದಲ್ಲಿ ಜಿಲ್ಲೆಯಲ್ಲಿಯೇ ಒಂದು ಭಾಗದಿಂದ ಇನ್ನೊಂದು ಭಾಗದಲ್ಲಿ ಸ್ವಲ್ಪ ಪ್ರಮಾಣದ ವ್ಯತ್ಯಾಸವಿರುತ್ತದೆ. ಮೀನು ದರ (ಕೆ.ಜಿ.ಗೆ ರೂ.ಗಳಲ್ಲಿ)
ಬಂಗುಡೆ 300-350
ಬೈಗೆ (ಬೂತಾಯಿ) 250-260
ಪಾಂಪ್ಲೆಟ್ 400-500
ನಂಗ್ (ಸಣ್ಣದು) 200-220
ನಂಗ್ (ದೊಡ್ಡದು) 300-350
ಮಾಂಜಿ (ಸಣ್ಣದು) 400-420
ಬೊಳಿಂಜಿರ್ 200
ಮಿಕ್ಸ್ ಮೀನು 100
ಸಿಗಡಿ 180
ಸಮುದ್ರದ ಸಿಗಡಿ 350
ಕಾಣೆ (ಸಣ್ಣದು) 800-900
ಕಾಣೆ (ದೊಡ್ಡದು) 1,000-1,100 ಹೊಳೆ ಮೀನು
ಕಾಣೆ (ದೊಡ್ಡದು) 1,100
ನಂಗ್ (ದೊಡ್ಡದು) 300
ಪಯ 500
ಕಲ್‌ದೆಂಜಿ 800-900