Advertisement
ಬಾಲಕಿ ಮೇಲೆ ಮನೋಜ್ ಅತ್ಯಾಚಾರ ಎಸಗಿರುವುದು ಸಾಬೀತುಪಡಿಸಲು ಪ್ರಾಸಿಕ್ಯೂಶನ್ ಸಫಲವಾಗಿದ್ದರಿಂದ ಗುರುವಾರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವನಮಾಲಾ ಯಾದವ್, ಅಪರಾಧಿ ಮನೋಜ್‌ಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ಎರಡೂವರೆ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು. ಅಲ್ಲದೆ ಸಂತ್ರಸ್ಥ ಬಾಲಕಿಯ ಸದ್ಯದ ಸ್ಥಿತಿಗತಿಯ ಬಗ್ಗೆ ವರದಿ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿದೆ.
14 ವರ್ಷದ ಬಾಲಕಿ 2014ರ ಡಿಸೆಂಬರ್ 9ರಂದು ಸಂಜೆ 7 -30ರ ಸುಮಾರಿಗೆ ತಾನು ಕೆಲಸ ಮಾಡುತ್ತಿದ್ದ ಜೀರಿಗೆ ಪ್ಯಾಂಕಿಂಗ್ ಘಟಕದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದಳು . ಈ ವೇಳೆ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿದ್ದ ಆರೋಪಿಗಳಾದ ಮನೋಜ್ ಹಾಗೂ ಲೋಕೇಶ್, ಬಾಲಕಿಯ ವ್ಯಾನಿಟಿ ಬ್ಯಾಗ್ ಕಿತ್ತುಕೊಂಡು ವಾಪಾಸ್ ಕೊಡದೇ ಸತಾಯಿಸಿದ್ದರು. ಬಳಿಕ ಚಾಕು ತೋರಿಸಿದ ಆರೋಪಿಗಳು, ಬಾಲಕಿಯನ್ನು ರಾಜೀವ್‌ಗಾಂಧಿ ಪಾರ್ಕ್‌ಗೆ ಎಳೆದೊಯ್ದು ಕೈ ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ್ದರು.
Related Articles
Advertisement
ಈ ಸಂಬಂಧ ಬಾಲಕಿಯ ಪೋಷಕರು ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿದ್ದ ನಂದಿನಿಲೇಔಟ್ ಠಾಣೆ ಪೊಲೀಸರು, ಬಾಲಕಿ ನೀಡಿದ ಮಾಹಿತಿ ಹಾಗೂ ಗುರುತಿನ ಆಧಾರದ ಮೇಲೆ ಆರ್‌ಎಂಸಿ ಯಾರ್ಡ್‌ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಲೋಕೇಶ್ ಹಾಗೂ ಮನೋಜ್‌ನನ್ನು ಬಂಧಿಸಿ, ಇಬ್ಬರ ವಿರುದ್ಧವೂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.