ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮ ಮಂದಿರ ಕಾಮಗಾರಿಯು 2023ರ ಡಿಸೆಂಬರ್‌ನೊಳಗೆ ಪೂರ್ಣವಾಗಲಿದೆ.
ಹೀಗೆಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ಶುಕ್ರವಾರ ರಕ್ಷಾಬಂಧನದ ಪ್ರಯುಕ್ತ ಸುಲ್ತಾನ್‌ಪುರದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಈ ಮಾತನ್ನಾಡಿದ್ದಾರೆ.
“ರಾಮ ಮಂದಿರ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಭಕ್ತರು 2023ರ ಡಿಸೆಂಬರ್‌ನಲ್ಲಿ ದೇಗುಲದಲ್ಲಿ ರಾಮ್ ಲಲ್ಲಾ ದರ್ಶನ ಪಡೆಯಬಹುದು’ ಎಂದಿದ್ದಾರೆ.
ರಾಮ ಮಂದಿರುವು ಅದ್ಭುತವಾದ ವಿನ್ಯಾಸದಿಂದ ಕೂಡಿರಲಿದ್ದು, ಭಕ್ತರನ್ನು ಬೆರಗು ಮೂಡಿಸುವಂತೆ ಇರಲಿದೆ ಎಂದೂ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ನಿರ್ಮಿಸಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಗುಲ ನಿರ್ಮಾಣದ ಮೇಲ್ವಿಚಾರಣೆ ನಡೆಸುತ್ತಿದೆ.