ಚೆನ್ನೈ/ಭೋಪಾಲ: ರಾಜ್ಯಸಭೆಯ ಕೆಲವು ಸ್ಥಾನಗಳಿಗೆ ಅ.4ರಂದು ಉಪ-ಚುನಾವಣೆ ನಡೆಯಲಿರುವಂತೆಯೇ, ಕೆಲವೆಡೆ ಅವಿರೋಧ ಆಯ್ಕೆ ನಡೆದಿದೆ.
ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ಸಹಾಯಕ ಸಚಿವ ಡಾ| ಎಲ್. ಮುರುಗನ್ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಅವಿರೋಧ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನವಾಗಿದ್ದರೂ, ಕಾಂಗ್ರೆಸ್ ವತಿಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ. ಹೀಗಾಗಿ ಕೇಂದ್ರ ಸಚಿವರನ್ನೇ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ ಎಂದು ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.
ಮುರುಗನ್ ಆಯ್ಕೆಯಿಂದ ಮಧ್ಯಪ್ರದೇಶದಿಂದ ಬಿಜೆಪಿಯ ರಾಜ್ಯಸಭಾ ಸದಸ್ಯರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು
ಇದೇ ವೇಳೆ, ತಮಿಳುನಾಡಿನಿಂದಲೂ ಡಿಎಂಕೆಯ ಇಬ್ಬರು ಮುಖಂಡರಾಗಿರುವ ಕನಿಮೋಳಿ ಎನ್.ವಿ.ಎನ್. ಸೋಮು ಮತ್ತು ಕೆ.ಆರ್.ಎನ್. ರಾಜೇಶ್ ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ. ಹೀಗಾಗಿ ರಾಜ್ಯಸಭೆಯಲ್ಲಿ ಡಿಎಂಕೆ ಸದಸ್ಯ ಬಲ 10ಕ್ಕೆ ಏರಿಕೆಯಾಗಿದೆ.