Advertisement
ಕುಂದಾಪುರ: ಬಂದದ್ದಿಲ್ಲಿ ಇನ್ನೂ ಸಣ್ಣಗಿನ ಎರಡು ಮಳೆ. ಅಷ್ಟಕ್ಕೆ ಹೆದ್ದಾರಿಯಲ್ಲಿ ಸಮಸ್ಯೆಗಳ ಸಾಲು ಕಾಣಿಸತೊಡಗಿದೆ. ನೀರು ಹೋಗುವ ವ್ಯವಸ್ಥೆಗಳಿಲ್ಲದೇ ಹೆದ್ದಾರಿಹೋಕರು ಕಂಗಾಲಾಗಿದ್ದಾರೆ. ಸರಣಿ ಅಪಘಾತಗಳು ದಾಖಲಾಗತೊಡಗಿವೆ.
ನಾವುಂದ, ಉಪ್ಪುಂದ, ಕಿರಿಮಂಜೇಶ್ವರ ಮೊದಲಾದೆಡೆ ರಸ್ತೆ ಬದಿಯಲ್ಲಿ ನೀರು ನಿಂತಿದ್ದು ನೀರಿನ ಹರಿವಿಗೆ ಅನುವು ಮಾಡಿಕೊಡದಿದ್ದಲ್ಲಿ ರಸ್ತೆ ಬದಿಯ ಮನೆಗಳ ಅಂಗಳಕ್ಕೆ ನೀರು ಹರಿಯಲಿದೆ. ಕಳೆದ ವರ್ಷ ಇಂತಹುದೇ ದುರ್ಘಟನೆಗಳು ನಡೆದಿದ್ದವು. ಶಾಸಿŒ ಸರ್ಕಲ್
ಫ್ಲೈಓವರ್ ಕಾಮಗಾರಿಯಂತೂ ಆಗಿಲ್ಲ. ಇತ್ತ ಚರಂಡಿಯೂ ಆಗಿಲ್ಲ. ಸರ್ವಿಸ್ ರಸ್ತೆಯೂ ಗೊಂದಲದಲ್ಲಿದೆ. ಆದ್ದರಿಂದ ಇಲ್ಲಿ ಚರಂಡಿಯಿಲ್ಲದೇ ಮಳೆನೀರು ರಸ್ತೆಯಲ್ಲೇ ಹರಿಯುತ್ತದೆ. ತಾಲೂಕು ಪಂಚಾಯತ್ ಕಚೇರಿ, ಭಂಡಾರ್‌ಕಾರ್ಸ್ ಕಾಲೇಜಿಗೆ ಹೋಗುವ ರಸ್ತೆಗಳೂ ನೀರಿನಿಂದ ಆವೃತವಾಗಿವೆ. ಮಳೆ ನೀರು ಆವಿಯಾಗುವವರೆಗೆ ಕಾಯುವುದೇ ಕೆಲಸವಾಗಿದೆ ವಿನಾ ಸಂಬಂಧಪಟ್ಟ ಇಲಾಖೆಯವರಾಗಲೀ, ಪುರಸಭೆಯಾಗಲೀ ಈ ಕುರಿತು ಗಮನ ಹರಿಸಿದಂತಿಲ್ಲ.
Related Articles
ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್‌ವರೆಗೆ ಫ್ಲೈ ಓವರ್‌ನ ಕಾಮಗಾರಿ ಜಾಗದಲ್ಲಿ ನೀರು ಅಲ್ಲಲ್ಲಿ ನಿಲ್ಲುತ್ತದೆ. ಕೆಎಸ್‌ಆರ್‌ಟಿಸಿ ಸಮೀಪ, ಸಂಗಂವರೆಗೂ ಅಲ್ಲಲ್ಲಿ ನೀರು ರಸ್ತೆ ಬದಿ ನಿಲ್ಲುತ್ತದೆ. ಸಂಗಂನಲ್ಲಿ ಎಪಿಎಂಸಿ ಸಮೀಪ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಸಂಸ್ಥೆ ಚರಂಡಿ ಮಾಡಿದೆ. ಇತರೆಡೆ ಇನ್ನಷ್ಟೇ ಆಗಬೇಕಿದೆ.
Advertisement
– ಲಕ್ಷ್ಮೀ ಮಚ್ಚಿನ