Advertisement

ದಸರೆಯಲ್ಲಿ ಗಮನಸೆಳೆದ ಸ್ತಬ್ಧಚಿತ್ರಗಳು

09:57 PM Oct 08, 2019 | Lakshmi GovindaRaju |

ಕೊಳ್ಳೇಗಾಲ: ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಗ್ರಾಮೀಣ ದಸರಾದಲ್ಲಿ ವಿವಿಧ ಇಲಾಖೆಯ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಶಾಸಕ ಎನ್‌.ಮಹೇಶ್‌ ಚಾಲನೆ ನೀಡಿದರು. ಪಟ್ಟಣದ ಎಂಜಿಎಸ್‌ವಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ವಿವಿಧ ಇಲಾಖೆಯ ಸುಮಾರು 15 ಸ್ತಬ್ಧ ಚಿತ್ರಗಳು ಮತ್ತು 17 ವಿವಿಧ ಕಲಾತಂಡಗಳಿಗೆ ಚಾಲನೆ ನೀಡಿದ ಶಾಸಕರು, ಮೊದಲು ನಂದಿಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಿದರು.

Advertisement

ಉತ್ತಮ ನಿರ್ವಹಣೆ: ಬಳಿಕ ಮಾತನಾಡಿದ ಅವರು, ತಾಲೂಕು ಆಡಳಿತದ ವತಿಯಿಂದ ಆಯೋಜಿಸಿರುವ ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ವತಿಯಿಂದ ಭಾಗವಹಿಸಿರುವ ಸ್ತಬ್ಧ ಚಿತ್ರಗಳು ಮತ್ತು ಕಲಾತಂಡಗಳ ಮೆರವಣಿಗೆ ಮತ್ತು ಕುಂಭಮೇಳ ಆಯೋಜನೆ ಅಭೂತವಾಗಿದೆ ಎಂದರು. ತಾಲೂಕಿನ ಉಪ ವಿಭಾಗದ ಎಲ್ಲಾ ಇಲಾಖೆಯ ಅಧಿಕಾರಿಗಳ ಪರಿಶ್ರಮದಿಂದ ಉತ್ತಮ ಸ್ತಬ್ಧ ಚಿತ್ರಗಳು ನಿರ್ಮಾಣ ವಾಗಿದ್ದು, ಎಲ್ಲಾ ಅಧಿಕಾರಿಗಳ ಶ್ರಮಕ್ಕೆ ಅಭಿನಂದನೆ ಸಲ್ಲಿಸಿದರು.

ಸ್ಥಳೀಯ ಕಲಾ ತಂಡಕ್ಕೆ ಆದ್ಯತೆ: ಕಳೆದ ಮೂರು ವರ್ಷಗಳಿಂದ ಗ್ರಾಮೀಣ ದಸರಾ ಆಯೋಜನೆ ಸ್ಥಗಿತಗೊಂಡಿತ್ತು. ಈ ಬಾರಿ ಸರ್ಕಾರ ತಾಲೂಕು ಆಡಳಿತದ ವತಿಯಿಂದ ಗ್ರಾಮೀಣ ದಸರಾ ಆಚರಣೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅತ್ತುತ್ಯುಮ ಸ್ಥಳೀಯ ಕಲಾ ತಂಡಗಳಿಗೆ ಆದ್ಯತೆ ನೀಡಲಾಗಿದ್ದು, ಗ್ರಾಮೀಣ ದಸರಾಕ್ಕೆ ಕಳೆಬಂದಿದೆ ಎಂದರು.

ಕಾರ್ಯಕ್ರಮ ಯಶಸ್ವಿಗೆ ಮನವಿ: ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರ ಸಂಘಟನೆಯ ಮುಖಂಡರು, ವಿವಿಧ ಇಲಾಖೇಯ ಅಧಿಕಾರಿಗಳು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಮನವಿ ಮಾಡಿದರು.

ಹೆಜ್ಜೆ ಹಾಕಿದ ಶಾಸಕ: ವಿವಿಧ ಕಲಾತಂಡಗಳಿಗೆ ಮತ್ತು ಸ್ತಬ್ಧ ಚಿತ್ರಗಳಿಗೆ ಚಾಲನೆ ನೀಡಿದ ಶಾಸಕ ಎನ್‌.ಮಹೇಶ್‌, ಡೋಲು ಶಬ್ಧಕ್ಕೆ ಹೆಜ್ಜೆ ಶಾಸಕರನ್ನು ಕಂಡ ಸಾರ್ವಜನಿಕರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ದೃಶ್ಯ ಆಕರ್ಷಣೆಯಾಗಿತು.

Advertisement

ಸ್ತಬ್ಧಚಿತ್ರ ಮೆರವಣಿಗೆ: ತಾಲೂಕು ಪಂಚಾಯಿತಿ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕು ಕಚೇರಿ, ತೋಟಗಾರಿಕೆ, ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆ, ರೇಷ್ಮೆ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಸೇರಿದಂತೆ ಸುಮಾರು 15 ಸ್ತಬ್ಧ ಚಿತ್ರಗಳನ್ನು ಸಾರ್ವಜನಿಕರನ್ನು ಆಕರ್ಷಣೆ ಮಾಡಿತು.

ಗಮನ ಸೆಳೆದ ಕಲಾತಂಡ: ಈ ಬಾರಿಯ ಗ್ರಾಮೀಣ ದಸರಾ ಮೆರವಣಿಗೆಯಲ್ಲಿ ನಂದಿಕಂಬ, ವೀರಗಾಸೆ, ಡೋಲು, ತಮಟೆ, ಕುಂಭ ಮೇಳ, ಪೊಲೀಸ್‌ ಬ್ಯಾಂಡ್‌, ಪಂಚವಾದ್ಯ, ಎತ್ತಿನಗಾಡಿ ಸೇರಿದಂತೆ ವಿವಿಧ 17 ಕಲಾತಂಡಗಳು ಭಾಗವಹಿಸಿ ಪಟ್ಟಣದ ರಾಜ್‌ಕುಮಾರ್‌ ರಸ್ತೆ, ಡಾ. ಬಿ.ಆರ್‌. ಅಂಬೇಡ್ಕರ್‌ ರಸ್ತೆ, ಐ.ಬಿ. ರಸ್ತೆ ಮಾರ್ಗವಾಗಿ ಎಂಜಿಎಸ್‌ವಿ ಜೂನಿಯರ್‌ ಕಾಲೇಜು ಮೈದಾನಕ್ಕೆ ಬಂದು ಸೇರಿತು.

ಕಲಾತಂಡ ಮತ್ತು ಸ್ತಬ್ಧ ಚಿತ್ರ ಉದ್ಘಾಟನೆ ಸಂದರ್ಭದಲ್ಲಿ ಹನೂರು ಶಾಸಕ ಆರ್‌.ನರೇಂದ್ರ, ನ್ಯಾಯಾಧೀಶ ಎಸ್‌.ಜೆ.ಕೃಷ್ಣ, ಜಿಪಂ ಅಧ್ಯಕ್ಷೆ ಶಿವಮ್ಮ, ತಾಪಂ ಉಪಾಧ್ಯಕ್ಷೆ ಲತಾ, ಉಪ ವಿಭಾಗಾಧಿಕಾರಿ ನಿಖೀತ ಎಂ.ಚಿನ್ನಸ್ವಾಮಿ, ತಹಶೀಲ್ದಾರ್‌ ಕುನಾಲ್‌, ಡಿವೈಎಸ್ಪಿ ನವೀನ್‌ಕುಮಾರ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಶ್ರೀಕಾಂತ್‌, ಎಸ್‌ಐಗಳಾದ ಅಶೋಕ್‌, ರಾಜೇಂದ್ರ, ನಗರಸಭೆ ಪೌರಾಯುಕ ನಾಗಶೆಟ್ಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next