Advertisement
ಭಾರತಕ್ಕೆ ಬರುವ ಅವರ ಉದ್ದೇಶದ ಕಥೆಯೂ ಅಷ್ಟೇ ಭಯಾನಕವಾಗಿದೆ.
ಮುಖ್ಯವಾಗಿ ಗಡಿಭಾಗದಿಂದ, ಜಲಮಾರ್ಗದ ಮೂಲಕ ಸುಲಭದಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಆಗಮಿಸುವ ಇವರು, ಬಳಿಕ ವಿವಿಧ ರಾಜ್ಯಗಳಿಗೆ ತೆರಳಿ ಸಣ್ಣಪುಟ್ಟ ನೌಕರಿ ಹುಡುಕಿಕೊಳ್ಳುತ್ತಾರೆ. ಒಂದೆರಡು ವರ್ಷ ಕೆಲಸ ಮಾಡಿ ಸ್ಥಳೀಯರ ವಿಶ್ವಾಸ ಗಿಟ್ಟಿಸಿಕೊಳ್ಳುವ ಅವರು, ಹಂತಹಂತವಾಗಿ ಹೆಚ್ಚಿನ ವೇತನದೊಂದಿಗೆ ಇತರ ಉದ್ಯೋಗ ವನ್ನೂ ಕಲಿಯ ತೊಡಗುತ್ತಾರೆ. ಬಳಿಕ ಭಾರತೀಯ ಪ್ರಜೆಗಳಂತೆಯೇ ಬಿಂಬಿಸಿಕೊಳ್ಳುತ್ತಾರೆ. ಚುನಾವಣೆ ಸಂದರ್ಭದಲ್ಲಿ ನಕಲಿ ವೋಟರ್ ಐಡಿಗಳನ್ನು ತಮ್ಮ ಏಜೆಂಟರಿಂದ ಮಾಡಿಸಿಕೊಳ್ಳುವ ಪ್ರಯತ್ನವೂ ನಡೆಯುತ್ತದೆ ಎನ್ನಲಾಗಿದೆ.
Related Articles
Advertisement
ಸಕ್ರಿಯ ನಕಲಿ ತಯಾರಿ ಜಾಲನಕಲಿ ಪಾಸ್‌ಪೋರ್ಟ್, ಅಂಕಪಟ್ಟಿ, ಆಧಾರ್‌ಕಾರ್ಡ್ ಹೀಗೆ ವಿವಿಧ ರೀತಿಯ ದಾಖಲೆಗಳನ್ನು ತಯಾರಿಸಿ ಕೊಡುವ ಜಾಲವೂ ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಎಂಬ ಬಗ್ಗೆ ಸಂಶಯವನ್ನು ಈ ಪ್ರಕ ರಣ ಬಿತ್ತಿದೆ. ಮಂಗಳೂರಿನಲ್ಲಿ ಸಿಕ್ಕ ಓರ್ವ ಆರೋಪಿ ಈ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರ ವಿಚಾರಣೆಯಿಂದ ಮಾಹಿತಿ ಸಿಗಬೇಕಿದೆ. ಜಿಲ್ಲೆಯಲ್ಲಿ ಇದುವರೆಗೆ ಇಂತಹ ಪ್ರಕರಣಗಳು ನಡೆದಿದೆಯೇ ಎಂಬ ಬಗ್ಗೆ ಪರಿಶೀಲಿಸಿ ಈ ಪ್ರಕರಣಕ್ಕೂ ಆ ಪ್ರಕರಣಗಳಿಗೂ ಸಾಮತ್ಯೆ ಇದೆಯೇ ಎಂಬ ನಿಟ್ಟಿನಲ್ಲೂ ತನಿಖೆ ಮುಂದು ವರಿಯುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದುಬಾೖಗೆ ಹೋಗಲು ಯತ್ನ
ದುಬಾೖಯಲ್ಲಿ ಭಾರತೀಯರು ಎಂದರೆ ಸ್ವಲ್ಪ ಗೌರವ ಹೆಚ್ಚು. ಬಾಂಗ್ಲಾ ದೇಶದವರು ಎಂದರೆ ಅಷ್ಟಕಷ್ಟೇ. ಹೀಗೆ ಅಲ್ಲಿ ಹೆಚ್ಚಿನ ವೇತನಕ್ಕೆಂದು ತೆರಳು ತ್ತಾರೆ. ಒಂದು ವೇಳೆ ಅಲ್ಲಿ ಸಿಕ್ಕಿಹಾಕಿಕೊಂಡಲ್ಲಿ ಕಳಂಕ ಮಾತ್ರ ಭಾರತಕ್ಕೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳ ಮೂಲ ಸ್ಥಳೀಯ ಪ್ರಾಂತ್ಯದ್ದಾಗಿರುತ್ತದೆ. ಆದರೆ ಅಲ್ಲಿನ ಸ್ಥಳೀಯರಿಗೆ ಆತ ಯಾರೆಂಬುದೇ ತಿಳಿದಿರದು. ಜಿಲ್ಲೆಯಲ್ಲೂ ಈ ಹಿಂದೆ ಇಂತಹ ಕೆಲವು ಪ್ರಕರಣಗಳು ನಡೆದಿವೆ. ಇದಕ್ಕೆ ನಕಲಿ ದಾಖಲೆಗಳು ಕಾರಣ. ಬಂಧಿತರೂ ಇದೇ ಉದ್ದೇಶದಿಂದ ದುಬಾೖಗೆ ತೆರಳಲು ಉದ್ದೇಶಿಸಿದ್ದರು ಎಂಬ ಅಂಶ ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಇಂದು ಪೊಲೀಸ್ ಕಸ್ಟಡಿಗೆ
ಆರೋಪಿಗಳನ್ನು ಈಗಾಗಲೇ ನ್ಯಾಯಾಂಗಬಂಧನಕ್ಕೆ ಒಳಪಡಿಸಿದ್ದು, ಸೋಮವಾರ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವರು. ಆರೋಪಿ ಗಳು ಆಧಾರ್‌ಕಾರ್ಡ್‌ಗಳನ್ನು ಫೋರ್ಜರಿ ಮಾಡಿದ್ದಾರೆಯೇ ಅಥವಾ ನಕಲಿ ಕಾರ್ಡ್ ಸೃಷ್ಟಿ ಆಗಿದೆಯೇ ಎಂಬ ಬಗ್ಗೆ ವಿಚಾರಣೆಯಿಂದ ತಿಳಿದುಬರಬೇಕಿದೆ.
-ಡಾ| ಕೆ.ಅರುಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ