Advertisement
ಶಿಕ್ಷಣದಲ್ಲಿ ಸ್ಥಳೀಯ ಭಾಷೆಬಾಲ್ಯದಿಂದಲೇ ಸ್ಥಳೀಯ ಭಾಷೆಯಲ್ಲಿ ಪಠ್ಯಗಳನ್ನು ಕಲಿಯುವುದು ಬಹಳ ಮುಖ್ಯವಾದುದು. ಸ್ಥಳೀಯರ ಜನಪ್ರಿಯ ಸಂಸ್ಕೃತಿಯ ಹೊಳಹುಗಳನ್ನು ಕನ್ನಡ ಸಾಹಿತ್ಯ ದೊಳಗೆ ತರುವುದರ ಮೂಲಕ ಕನ್ನಡ ಸಾಹಿತ್ಯವನ್ನು ವಿಸ್ತರಿಸಬಹುದು. ಕನ್ನಡದ ಲಿಪಿಯಲ್ಲೇ ಬರೆಯುವ ತುಳುವರು, ಕೊಂಕಣಿಗರು, ಬ್ಯಾರಿ ಭಾಷಿಗರು ಸ್ವಂತದ ಅಭಿಮಾನವನ್ನೂ, ಕನ್ನಡದ ಪ್ರೀತಿಯನ್ನೂ ಏಕ ಕಾಲದಲ್ಲಿ ನಿಭಾಯಿಸುತ್ತಿದ್ದಾರೆ ಎಂದರು.
Related Articles
Advertisement
ಆಧುನಿಕತೆಯ ವ್ರಣಆಧುನಿಕತೆ ಭೂತಾಯಿಯ ಮೈಮೇಲೆ ವ್ರಣಗಳೆದ್ದ ಹಾಗೆ ನಮ್ಮ ಕಲ್ಪನೆಗಳನ್ನು ಬುಡಮೇಲು ಮಾಡುವಷ್ಟು ಬೆಳೆದಿವೆ. ಇರಾ ಗ್ರಾಮದ ಗೋಮಾಳದಲ್ಲಿ ಕೇಂದ್ರ ಕಾರಾಗೃಹ ನಿರ್ಮಾಣ ಆಗುತ್ತಿದೆ. ಸುಡುಗಾಡು ಪ್ರದೇಶ ಮತ್ತು ಕಂಚಿನಡ್ಕ ಪದವಿನ ಸಮೃದ್ಧ ಕೆಂಪು ಕಲ್ಲುಗಳ ಗಣಿಗಳು ಎಂ-ಸ್ಯಾಂಡ್ ಆಗಿವೆ. ಬಾವಿಗಳು, ಸಣ್ಣ ಸಣ್ಣ ಕೆರೆಗಳು ಮುಚ್ಚಿ ಹೋಗಿ ಕೊಳವೆ ಬಾವಿಯಾಗಿ ಮಳೆ ನೀರಿಂಗಿಸುವ ವಿಧಾನ ನಿಂತು ಹೋಗಿ ಅಂತರ್ಜಲ ಬತ್ತಿದೆ. ಹೊಸ ತಲೆಮಾರಿಗೆ
ಈ ವಿಷಯ ಹೇಗೆ ಕೇಳಿಸೀತು? ಎಂದು ಅವರು ಪ್ರಶ್ನಿಸಿದರು. ಡಾ| ಪ್ರಭಾಕರ ಶಿಶಿಲ ಉದ್ಘಾಟಕರಾಗಿದ್ದು ಅಭಿಮಾನದ ಸಂಗತಿ. ಅವರಿಗೆ ನನ್ನ ತಂದೆ ಪಿ. ದೂಮಣ್ಣ ರೈ ಗುರುಗಳಾಗಿದ್ದರಂತೆ. ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಸಾಹಿತ್ಯೇತರ ಶಿಸ್ತಿನಿಂದ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ಕೊಟ್ಟವರು ಶಿಶಿಲರು ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಮ್ಮೇಳನದ ಅಧ್ಯಕ್ಷೆಯಾಗಿ ನನ್ನನ್ನು ಆಯ್ಕೆ ಮಾಡುವುದರ ಹಿಂದಿರುವ ಪ್ರೀತಿ, ವಿಶ್ವಾಸ, ಆದರಾಭಿ ಮಾನ ಬಹಳ ದೊಡ್ಡದು ಎಂದು ಭಾವಿಸುತ್ತೇನೆ. ಮಹಿಳೆಯರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸು ವುದು ಬಹಳ ಅಪೂರ್ವವಾದ ಸಂದರ್ಭಗಳೇ ಆಗಿವೆ. ಅಳಿಯ ಸಂತಾನ ಇಡೀ ದೇಶದ ಲಿಂಗಾನುಪಾತಕ್ಕೆ ತದ್ವಿರುದ್ಧವೆಂಬಂತೆ ದ.ಕ. ಜಿಲ್ಲೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿರುವುದು ಮಹಿಳಾ ಪ್ರಾತಿನಿಧ್ಯದ ಗುಣವನ್ನು ಎತ್ತಿ ತೋರಿಸುತ್ತದೆ. ವಿಶಿಷ್ಟವಾದ ಸಾಂಸ್ಕೃತಿಕ ಹಿನ್ನೆಲೆಯುಳ್ಳ, ಬಹುತ್ವ ಸೌಹಾರ್ದದ ನೆಲೆಯಾಗಿರುವ ಈ ಪ್ರದೇಶದ ಬಗ್ಗೆ ಅಭಿಮಾನ ಪಡುತ್ತೇನೆ ಎಂದರು. ಮಕ್ಕಳ ಕತೆ, ಪದ್ಯ, ಸಣ್ಣ ಕತೆ, ಉಪನ್ಯಾಸಗಳ ಪಿತಾಮಹಾ ಪಂಜೆ ಮಂಗೇಶರಾಯರಿಗೆ, ಬಂಟ್ವಾಳ ತಾಲೂಕಿನ ಮೊದಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಡಾರು ಮಹಾಬಲೇಶ್ವರ ಭಟ್ಟರಿಗೆ, ಬಂಟ್ವಾಳ ತಾಲೂಕಿನ ಮೊದಲ ಮಹಾಕವಿ ಹರಿದಾಸ ಐತಪ್ಪ ಯಾನೆ ರಾಮಯ ನಾಯ್ಕರಿಗೆ, ಕೀರ್ತಿಶೇಷ ಏರ್ಯ ಲಕ್ಷ್ಮೀನಾರಾಯಣ ಆಳ್ವರಿಗೆ, ಇತಿಹಾಸದ ವಿದ್ವಾಂಸ ಭಾಸ್ಕರಾನಂದ ಸಾಲೆತ್ತೂರು, ಅಮ್ಮುಂಜೆ ಗುತ್ತು ಶೀನಪ್ಪ ಹೆಗ್ಗಡೆ, ಸ್ವಾತಂತ್ರ್ಯ ಹೋರಾಟಗಾರ ಬಂಟವಾಳದ ಗಾಂಧಿ ಪಾಂಡುರಂಗ ಬಾಳಿಗ, ಬಸ್ತಿ ಪುಂಡಲೀಕ ಶೆಣಾಯಿ, ಹೊಸಪೇಟೆ ಮಂಜುನಾಥ ಪೈ, ಯು.ಪಿ. ಮಲ್ಯ, ನಾರಾಯಣ ಕಿಲ್ಲೆ, ಪಾಣೆಮಂಗಳೂರು ಎನ್. ಕೇಶವ ಕುಡ್ವ, ಸಾಲೆತ್ತೂರು ಕುಳಾಲು ಅಣ್ಣಪ್ಪ ಭಂಡಾರಿ, ಪತ್ತುಮುಡಿ ಸುಬ್ಬರಾಯರು ಮೊದಲಾದವರನ್ನು ಸ್ಮರಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ನಾಡಿನೆಲ್ಲೆಡೆ ಆಗಿರುವ ಸ್ಥಿತ್ಯಂತರಗಳು ಬಂಟ್ವಾಳದಲ್ಲೂ ಆಗಿವೆ. ಕನ್ನಡದ ಪದಗಳು ಇಂಗ್ಲಿಷಿನ ಮೊರೆತದ ನಡುವೆ ಮರೆಯಾಗುತ್ತಿವೆ. ತುಳು ಭಾಷೆಯಲ್ಲೂ ಯಥೇತ್ಛ ಇಂಗ್ಲಿಷ್ ಪದಗಳು ಬಳಕೆಯಾಗುತ್ತಿವೆ. ಒಂದು ಭಾಷೆಯ ಉತ್ಥಾನ ಇನ್ನೊಂದು ಭಾಷೆಯ ಅವನತಿಯ ಜತೆಗೇ ಆಗಬೇಕಿಲ್ಲ. ಇಬ್ಬರೂ ಗೆಲ್ಲುವ ಒಂದು ಸ್ಥಿತಿಯಿದೆ. ನಾವು ದಕ್ಷಿಣ ಕನ್ನಡದವರು ಹಲವು ಭಾಷೆಗಳನ್ನು ಒಟ್ಟಿಗೆ ಗೆಲ್ಲಿಸಿದವರು. ಇಂಗ್ಲಿಷ್ ಒಂದು ಹೆಚ್ಚಲ್ಲ, ತುಳು, ಬ್ಯಾರಿ, ಕೊಂಕಣಿ, ಕನ್ನಡಗಳ ಜೊತೆಗೆ ಇಂಗ್ಲಿಷ್, ಹಿಂದಿಗಳೂ ಸಹ. ಸಮ್ಮೇಳನವನ್ನು ಡಾ| ಪ್ರಭಾಕರ ಶಿಶಿಲ ಉದ್ಘಾಟಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಬಂಟ್ವಾಳ ಕಸಾಪ ಅಧ್ಯಕ್ಷ ಕೆ. ಮೋಹನ ರಾವ್, ಸ್ವಾಗತ ಸಮಿತಿ ಅಧ್ಯಕ್ಷ ಜಡ್ತಿಲ ಪ್ರಹ್ಲಾದ ಶೆಟ್ಟಿ, ಸಂಚಾಲಕ ಕೆ.ಎನ್. ಗಂಗಾಧರ ಆಳ್ವ, ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಟಾಸ್ ಅಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ., ಪ್ರಮುಖರಾದ ಗಂಗಾಧರ ರೈ ತುಂಗೆರೆಕೋಡಿ, ಲಕ್ಷ್ಮೀನಾರಾಯಣ ರಾವ್ ಪುಣಚ, ಬಿ. ನರೇಂದ್ರ ರೈ ನೆಲೊ¤ಟ್ಟು, ಡಾ| ಬಿ.ಎಸ್. ನಾಯ್ಕ, ಸಂತೋಷ್ ಶೆಟ್ಟಿ ಅರೆಬೆಟ್ಟು ನುಳಿಯಾಲಗುತ್ತು, ರಮಾನಂದ ನೂಜಿಪ್ಪಾಡಿ ಉಪಸ್ಥಿತರಿದ್ದರು. ರಾಷ್ಟ್ರ ಧ್ವಜಾರೋಹಣ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ಕಲ್ಲಡ್ಕ: ಕನ್ನಡ ಅಪೂರ್ವ ಶಬ್ದ, ವಾಕ್ಯ, ವ್ಯಾಕರಣಗಳಿಂದ ಪಂಚ ದ್ರಾವಿಡ ಭಾಷೆ ಗಳಲ್ಲಿ ಶ್ರೀಮಂತವಾಗಿದೆ. ಭಾಷೆಯಲ್ಲಿ ನಾಡಿನ ವಾತಾವರಣಕ್ಕೆ ಮಿಳಿತವಾದ ರೂಢಿಗತ ಹಿತವಿದೆ. ಓದು ಬರೆಯುವ ಮೂಲಕ ಕನ್ನಡ ಭಾಷೆಯನ್ನು ಶಾಲೆಯಲ್ಲಿ ಮಾತ್ರ ಕಲಿಸುವುದಲ್ಲ. ಪ್ರತಿಯೊಬ್ಬರು ಹೃದಯದಲ್ಲಿ ಅಳವಡಿಸಿಕೊಳ್ಳಬೇಕು. ಅದರರ್ಥ ಅನ್ಯ ಭಾಷೆಗಳನ್ನು ದ್ವೇಷಿಸು ವುದಲ್ಲ. ಕನ್ನಡ ಮಣ್ಣಿನ ಭಾಷೆಯ ಸೊಗಸು, ಸರಳತೆ, ನುಡಿಗಟ್ಟುಗಳು ಪರಭಾಷೆಯಿಂದ ದೊರೆಯುವುದಿಲ್ಲ. ನಮ್ಮ ನಾಡ ಭಾಷೆಯ ಸಮ್ಮೇಳನಕ್ಕೆ ಚಾಲನೆ ನೀಡುವುದಕ್ಕೆ ಸಂತಸ ವಾಗಿದೆ ಎಂದು ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ ಹೇಳಿದರು. ಅವರು ಡಿ. 28ರಂದು ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದರು. ಎರಡು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನ ಅದರ ಉದ್ದೇಶ ಸಾಧಿಸುವಲ್ಲಿ ನಿಜಾರ್ಥದಿಂದ ಯಶಸ್ವಿ ಯಾಗಬೇಕು. ನಾವು ನಮ್ಮೆಲ್ಲ ಬಳಗ ದೊಂದಿಗೆ ಕನ್ನಡದ ಕೆಲಸದಲ್ಲಿ ತೊಡಗುವ ಎಂದು ಸಂದೇಶ ನೀಡಿದರು. ಮಾಣಿ ಗ್ರಾ.ಪಂ. ಅಧ್ಯಕ್ಷೆ ಮಮತಾ ಎಸ್. ಶೆಟ್ಟಿ ಅವರು ಕನ್ನಡ ಧ್ವಜಾರೋಹಣ ಮಾಡಿದರು. ಬಂಟ್ವಾಳ ಕಸಾಪ ಅಧ್ಯಕ್ಷ ಕೆ. ಮೋಹನ ರಾವ್ ಪರಿಷತ್ ಧ್ವಜಾರೋಹಣ ಮಾಡಿದರು. ಸ್ವಾಗತ ಸಮಿತಿ ಸಂಚಾಲಕ ಕೆ.ಎನ್. ಗಂಗಾಧರ ಆಳ್ವ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಸಿ., ಕೋಶಾಧಿಕಾರಿ ಜಗನ್ನಾಥ ಚೌಟ ಬದಿಗುಡ್ಡೆ, ಜತೆ ಕಾರ್ಯದರ್ಶಿ ಬಾಲಕೃಷ್ಣ ಆಳ್ವ ಕೊಡಾಜೆ, ವಿಜಯಲಕ್ಷ್ಮೀ ವಿ. ಶೆಟ್ಟಿ, ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ನಾರಾಯಣ ಶೆಟ್ಟಿ ಕೊಂಬಿಲ, ಉಪಾಧ್ಯಕ್ಷ ಅಪ್ಪುರಾಯ ಪೈ, ಸ್ವಯಂಸೇವಾ ಸಮಿತಿ ಸಂಚಾಲಕ ಹಾಜಿ ಇಬ್ರಾಹಿಂ ಕೆ. ಮಾಣಿ ಸಹಿತ ಇತರರು ಉಪಸ್ಥಿತರಿದ್ದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಜಡ್ತಿಲ ಪ್ರಹ್ಲಾದ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ದಿನಕರ ಪೂಜಾರಿ ಮತ್ತು ವಿಶಾಲಾಕ್ಷಿ ಆಳ್ವ ನಿರ್ವಹಿಸಿದರು. ಪುಸ್ತಕ ತಾಂಬೂಲ
ಕನ್ನಡ ಕಲಿಕೆಗೆ ಅವಶ್ಯವಿರುವ ಪುಸ್ತಕಗಳು ಕನ್ನಡೇತರರಿಗೆ ಅದನ್ನು ಪುಸ್ತಕ ತಾಂಬೂಲವಾಗಿ ನೀಡುವ ಪದ್ಧತಿ ಆರಂಭಿಸಬೇಕಿದೆ. ಯುವಜನತೆಯಲ್ಲಿ ಬರೆಯುವ ಉತ್ಸಾಹವಿದೆ. ಸಾಮಾಜಿಕ ಮಾಧ್ಯಮಗಳ ಭರಾಟೆಯಲ್ಲೂ ಸಾಹಿತ್ಯಾಸಕ್ತಿ ಕುಂದಿಲ್ಲ. ಕವಿತೆಗಳು ಮೂಡುತ್ತಿವೆ, ವಿಮರ್ಶೆಯಾಗುತ್ತಿವೆ, ಚರ್ಚೆಗೊಳಗಾಗುತ್ತಿವೆ. ಆಧುನಿಕ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು ಮತ್ತು ಹದವರಿತು ಉಪಯೋಗಿಸುವ ಎಚ್ಚರವೂ ಬೇಕು. ಪುಸ್ತಕಗಳನ್ನು ಬರೆಯಬೇಕು, ಪ್ರಕಟಿಸಬೇಕು. ಅವು ಸರ್ವಾಂಗ ಸುಂದರ ಕೃತಿಗಳಾಗಬೇಕು. ಜನಗಳಿಗೆ ಹೃದ್ಯವಾಗಬೇಕು. ವಿವೇಕ ನೀಡುವಂತಿರಬೇಕು ಎಂದು ಕಿವಿಮಾತು ಹೇಳಿದರು. ಸರ್ವಾಂಗ ಸುಂದರವಾಗಲಿ
ಬಹುತ್ವ ಸಂಸ್ಕೃತಿ ಉಳಿಯಲಿ. ಸಮತೆಯ ಗುಣವೂ ತಾಲೂಕಿನ ಆತ್ಮಶಕ್ತಿಯನ್ನು ವರ್ಧಿಸಲಿ. ಒಳಿತನ್ನು ತರುವ ಸಾಹಿತ್ಯದ ಉದ್ದೇಶ ಸರ್ವಜನಕ್ಕೂ ಹಿತಕರ, ಸುಖಕರವಾದ ಸಾಮಾಜಿಕ ಒಗ್ಗಟ್ಟಾಗಿ ಸರ್ವಾಂಗ ಸುಂದರವಾಗಲಿ.
– ಡಾ| ಧರಣಿದೇವಿ ಮಾಲಗತ್ತಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ