Advertisement
ದಾವಣಗೆರೆ: ಕೋವಿಡ್ ಲಸಿಕೆಗಳಕೊರತೆಯಿಂದ ಸಾರ್ವಜನಿಕರು ಅಕ್ಷರಶಃಕಂಗಾಲಾಗಿದ್ದಾರೆ. ಜಿಲ್ಲಾ ಚಿಗಟೇಟರಿಆಸ್ಪತ್ರೆ ಒಳಗೊಂಡಂತೆ ಲಸಿಕಾ ಕೇಂದ್ರಗಳಲ್ಲಿಲಸಿಕೆ ಖಾಲಿಯಾದ ಪರಿಣಾಮ ಶುಕ್ರವಾರಲಸಿಕೆ ಹಾಕಿಸಿಕೊಳ್ಳಲಿಕ್ಕೆ ಬಂದಂತಹವರುನಿರಾಸೆಯಿಂದ ವಾಪಸ್ ಆಗಿದ್ದಾರೆ.
Related Articles
Advertisement
ಅಧಿಕಾರಿಗಳ ಜತೆಗೆ ಸಂಸದಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ಎಸ್.ವಿ. ರಾಮಚಂದ್ರಪ್ಪ,ಪ್ರೊ. ಎನ್. ಲಿಂಗಣ್ಣ, ಮೇಯರ್ ಎಸ್.ಟಿ.ವೀರೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿಶಿವಕುಮಾರ್ ಇತರೆ ಜನಪ್ರತಿನಿಧಿಗಳುಮೇಲ್ಪಂಕ್ತಿಯಂತೆ ಲಸಿಕೆ ಪಡೆದುಕೊಳ್ಳುವಮೂಲಕ ಸಾರ್ವಜನಿಕರಲ್ಲಿ ಲಸಿಕೆ ಬಗ್ಗೆವಿಶ್ವಾಸ.
ನಂಬಿಕೆ ಮೂಡಿಸುವ ಕೆಲಸಪ್ರಾರಂಭಿಸಿದರು.ಕೊರೊನಾ ವಿರುದ್ಧದ ಹೋರಾಟದಲ್ಲಿಮುಂಚೂಣಿಯಲ್ಲಿದ್ದ ಆರೋಗ್ಯಕಾರ್ಯಕರ್ತರು, ಫ್ರಂಟೈಲೈನ್ ವರ್ಕರ್‌ನಂತರ ಮೊದಲ ಬಾರಿಗೆ 60 ವರ್ಷಮೇಲ್ಪಟ್ಟವರಿಗೆ ಲಸಿಕೆ ಪಡೆದುಕೊಳ್ಳುವಅವಕಾಶ ಕಲ್ಪಿಸಿದ ನಂತರವೂಲಸಿಕಾಕರಣ ನಿರೀಕ್ಷಿತ ಮಟ್ಟದ ವೇಗಪಡೆದುಕೊಳ್ಳಲಿಲ್ಲ.ಏ.1 ರಿಂದ 45 ವರ್ಷ ಮೇಲ್ಪಟ್ಟವರು,ಮಧುಮೇಹ, ರಕ್ತದೊತ್ತಡ ಒಳಗೊಂಡಂತೆಇತರೆ ಆರೋಗ್ಯ ಸಮಸ್ಯೆ ಹೊಂದಿದವರಿಗೂಲಸಿಕೆ ನೀಡುವ ಕಾರ್ಯಕ್ರಮಪ್ರಾರಂಭಿಸಿದ್ದು, ಏ.23 ಅಂತ್ಯಕ್ಕೆ4,17,428 ಅರ್ಹ ಫಲಾನುಭವಿಗಳಲ್ಲಿ1,77,893 ಜನರು ಮಾತ್ರ ಲಸಿಕೆಪಡೆದುಕೊಂಡಿದ್ದರು.
ಒಟ್ಟಾರೆಯಾಗಿಶೇ.31 ಜನ ಫಲಾನುಭವಿಗಳು ಮಾತ್ರಲಸಿಕೆ ಪಡೆದುಕೊಂಡಿದ್ದಾರೆ.ಏತನ್ಮಧ್ಯೆ ಮಹಾನಗರ ಪಾಲಿಕೆಸದಸ್ಯರು, ಸ್ವಯಂ ಸೇವಾ ಸಂಸ್ಥೆಗಳುಕೆಲವಾರು ಕಡೆ ಲಸಿಕೆ ಶಿಬಿರ ನಡೆಸಿದನಂತರ ಲಸಿಕೆ ಪಡೆಯುವರ ಪ್ರಮಾಣಹೆಚ್ಚಾಗತೊಡಗಿತು.ಮಹಾಮಾರಿ ಕೊರೊನಾದ 2ನೇಅಲೆಯ ಅಬ್ಬರ ಜೋರಾಗುತ್ತಿದ್ದಂತೆಯೇಲಸಿಕೆ ಪಡೆದುಕೊಳ್ಳುವರ ಪ್ರಮಾಣವೂನಿರೀಕ್ಷೆಗೂ ಮೀರಿ ಹೆಚ್ಚಾಗತೊಡಗಿದೆ.ಪ್ರಾರಂಭಿಕ ಹಂತದಲ್ಲಿ ವಿರಳ ಸಂಖ್ಯೆಯಲ್ಲಿಕಂಡು ಬರುತ್ತಿದ್ದಂತಹ ದೃಶ್ಯ ಅಕ್ಷರಶಃಬದಲಾಗಿದೆ.ಜಿಲ್ಲಾಸ್ಪತ್ರೆ ಒಳಗೊಂಡಂತೆ ಲಸಿಕಾಕೇಂದ್ರಗಳ ಮುಂದೆ ಉದ್ದನೆಯ ಸರತಿಸಾಲು ಸಾಮಾನ್ಯ ಎನ್ನುವಂತಾಗಿದೆ.ಬೇಡಿಕೆ ಅನುಗುಣವಾಗಿ ಆದರೆ, ಈಗಲಸಿಕೆಯೇ ಇಲ್ಲದ ಕಾರಣ ಜನರುಅತ್ತಿಂದಿತ್ತ ಓಡಾಡುವಂತಾಗಿದೆ.
ಶುಕ್ರವಾರಕೆಲವಾರು ಫಲಾನುಭವಿಗಳು ಲಸಿಕೆಗಾಗಿಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂಪ್ರಯೋಜನವಾಗಿಲ್ಲ. ಸಂಜೆ ವೇಳೆಗೆಲಸಿಕೆ ಬರುತ್ತದೆ ಎಂದು ಅಧಿಕಾರಿಗಳುತಿಳಿಸಿದ್ದರಿಂದ ಕೆಲವರು ವಾಪಸ್‌ತೆರಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯಇಲಾಖೆ ಸಮರ್ಪಕ ಪ್ರಮಾಣದಲ್ಲಿ ಲಸಿಕೆಒದಗಿಸಬೇಕು ಎಂಬುದು ಸಾರ್ವಜನಿಕರಒತ್ತಾಯ.