Advertisement

ಆಧಾರ್‌ಗಾಗಿ ಸಾರ್ವಜನಿಕರ ನಿತ್ಯ ಅಲೆದಾಟ

12:50 PM Jul 22, 2019 | Team Udayavani |

ಕೆ.ಆರ್‌.ಪೇಟೆ: ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಶಾಲೆಗೆ ದಾಖಲಾತಿ ಪಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಿರುವುದರಿಂದ ಹೊಸದಾಗಿ ಕಾರ್ಡ್‌ ಮಾಡಿಕೊಳ್ಳಲು ಹಾಗೂ ತಿದ್ದುಪಡಿ ಮಾಡಿಸಿ ಕೊಳ್ಳಲು ಪ್ರತಿದಿನ ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ ತಾಲೂಕು ಕೇಂದ್ರದಲ್ಲಿ ದಿನಕ್ಕೆ 100 ಜನರಿಗೂ ಆಧಾರ್‌ ಮಾಡಿಕೊಡುವ ವ್ಯವಸ್ಥೆ ಕೂಡಾ ಇಲ್ಲದೆ ನಿರಾಸೆಯಿಂದ ಸ್ವ ಗ್ರಾಮಕ್ಕೆ ಹಿಂತಿರುಗವ ಸ್ಥಿತಿ ಎದುರಾಗಿದೆ.

Advertisement

ದೇಶದ ಪ್ರತಿಯೊಬ್ಬರಿಗೂ ಆಧಾರ್‌ ಕಡ್ಡಾಯ ಎಂಬ ಸರ್ಕಾರದ ನೀತಿ ಮಗುವನ್ನು ಶಾಲೆಗೆ ಸೇರಿಸುವುದರಿಂದ ಆರಂಭವಾಗಿ, ಬ್ಯಾಂಕ್‌ ಖಾತೆ ತೆರೆಯಲು, ಪಾನ್‌ಕಾರ್ಡ್‌ ಸೀಡ್‌, ಚಾಲನಾ ಪರವಾನಿಗೆ ಪಡೆಯಲು, ಪಡಿತರ ಚೀಟಿ ಮಾಡಿಸಲು, ಸಾಲ ಪಡೆಯಲು, ತೆರಿಗೆ ಪಾವತಿಸಲು ಹಾಗೂ ಮರಣದ ನಂತರವೂ ಮೃತನ ಆಧಾರ್‌ ಕಾರ್ಡ್‌ ನೀಡಿ ಕುಟುಂಬ ಸದಸ್ಯರು ಆಸ್ತಿಯನ್ನು ವರ್ಗಾವಣೆ ಮಾಡಿಸಿಕೊಳ್ಳುವ ಹಂತದ ವರೆಗೂ ಅನಿರ್ವಾಯವಾಗಿದೆ.

ಆದರೆ, ಶಾಲಾ ದಾಖಲಾತಿ, ಬ್ಯಾಂಕ್‌ ಖಾತೆ ಸೇರಿದಂತೆ ಇತರ ಕಡೆಗಳಲ್ಲಿ ಇರುವ ಹೆಸರು, ಜನ್ಮ ದಿನಾಂಕ ಅಷ್ಟೆ ಅಲ್ಲದೆ ಒಂದು ಸಣ್ಣ ಅಕ್ಷರ ತಪ್ಪಾಗಿದ್ದರೂ ಕಂಪ್ಯೂಟರ್‌ಗಳು ಆಧಾರ್‌ ಕಾರ್ಡ್‌ ಸ್ವೀಕಾರ ಮಾಡುವುದಿಲ್ಲ. ಆದ್ದರಿಂದ ಪ್ರತಿದಿನ ನೂರಾರು ಜನರು ತಿದ್ದುಪಡಿ ಮಾಡಿಸಿಕೊಳ್ಳಲು ದಿನಗಟ್ಟಲೆ ಕಾಯುವಂತಾ ಗಿದೆ. ಜೊತೆಗೆ ಹೊಸದಾಗಿ ಮಾಡಿಸುವವರಿಗೂ ಇದೇ ನಿಯಮ ಅನ್ವಯವಾಗಲಿದೆ.

ಜಾಗರಣೆ ಯೋಗ: ಪಟ್ಟಣಕ್ಕೆ ಪ್ರತಿದಿನ ಪಟ್ಟಣಕ್ಕೆ ಆಧಾರ್‌ ಕಾರ್ಡ್‌ಗಾಗಿ ಬರುತ್ತಾರೆ. ಜನರು ತಾಲೂಕು ಕೇಂದ್ರದಲ್ಲಿ ದಿನಕ್ಕೆ 100 ಜನರಿಗೂ ಕೆಲಸ ಆಗುವುದಿಲ್ಲ. ಮೊದಲು ಕಂಪ್ಯೂಟರ್‌ ಸೆಂಟರ್‌ಗಳಿಗೂ ಆಧಾರ್‌ ಮಾಡುವ ಅನುಮತಿಯನ್ನು ಸರ್ಕಾರ ನೀಡಿದ್ದರೂ ಆಗ ಜನರು ಸುಗಮವಾಗಿ ಕೆಲಸ ಮಾಡಿಸಿಕೊಳ್ಳುತ್ತಿ ದ್ದರು. ಈಗ ಕೇವಲ ಸರ್ಕಾರ ಕಚೇರಿಗಳು, ಬ್ಯಾಂಕ್‌ಗಳಿಗೆ ಮಾತ್ರ ಅನುಮತಿ ನೀಡಿದ್ದಾರೆ. ಎಸ್‌ಬಿಐ ಬ್ಯಾಂಕ್‌ನಲ್ಲಿ ದಿನಕ್ಕೆ 30, ಕೆನರಾ ಬ್ಯಾಂಕ್‌ನಲ್ಲಿ 20 ತಾಲೂಕು ಕಚೇರಿಯಲ್ಲಿರುವ ಕೇಂದ್ರದಲ್ಲಿ 25 ಒಟ್ಟಾರೆ ಪ್ರತಿದಿನ 75 ರಿಂದ 100 ಜನರಿಗೆ ಮಾತ್ರ ಸೇವೆ ಸಿಗುತ್ತದೆ. ಆದುದರಿಂದ ಹೆಚ್ಚುವರಿಯಾಗಿ ಬರುವ ಜನ ರಿಗೆ ಟೋಕನ್‌ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಟೋಕನ್‌ ಪಡೆಯಲು ನೂರಾರು ಜನರು ಸರತಿಯಲ್ಲಿ ನಿಂತರೂ ತಾಲೂಕು ಕಚೇರಿಯಲ್ಲಿ ದಿನಕ್ಕೆ 25 ಜನರಿಗೆ ಮಾತ್ರ ಟೋಕನ್‌ ನೀಡುತ್ತಾರೆ. ಆದುದರಿಂದ ಜನರು ಕೋಟನ್‌ ಪಡೆಯಲು ರಾತ್ರಿಯಿಂದಲೇ ಸರತಿಯಲ್ಲಿ ಮಲಗಿರುವ ನಿದರ್ಶನ ಗಳಿವೆ. ತಾಲೂಕು ಕಚೇರಿಯಲ್ಲಿರುವ ಕೇಂದ್ರದಲಿ ಒಂದುವಾರ ಅಥವಾ ಅದಕ್ಕೂ ಹೆಚ್ಚು ಮುಂದಿನ ದಿನಾಂಕವನ್ನು ನಮೂದಿಸಿ ಟೋಕನ್‌ ನೀಲಾಗುತ್ತಿದೆ.

Advertisement

ಕಡತದಲ್ಲಿಯೇ ಉಳಿದ ಆದೇಶ ಜನರು ಸರಳ ರೀತಿಯಲ್ಲಿ ಆಧಾರ್‌ ಕಾರ್ಡ್‌ ಮಾಡಿಸಿಕೊಳ್ಳಲು ಅನುಕೂಲವಾಗಲೆಂದು ಪ್ರತಿಯೊಂದು ಗ್ರಾಪಂನ ಲ್ಲಿಯೂ ಹಾಗೂ ನಾಡಕಚೇರಿಯಲ್ಲಿಯೂ ಆಧಾರ್‌ ಸೇವಾ ಕೇಂದ್ರವನ್ನು ತೆರೆಯುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ತಾಲೂಕಿನಲ್ಲಿರುವ 5 ನಾಡ ಕಚೇರಿ ಹಾಗೂ 34 ಗ್ರಾಪಂಗಳ ಪೈಕಿ ಒಂದು ಕಚೇರಿ ಯಲ್ಲಿಯೂ ಆಧಾರ್‌ ಕೇಂದ್ರ ಆರಂಭವಾಗಿಲ್ಲ. ಸರ್ಕಾರದ ಆದೇಶ ಕಡತದಲ್ಲಿಯೇ ಉಳಿದಿದೆ. ಪ್ರತಿ ನಾಡಕಚೇರಿ ಹಾಗೂ ಗ್ರಾ.ಪಂ ದಿನಕ್ಕೆ ಕನಿಷ್ಠ 10 ಜನರಿಗೆ ಆಧಾರ್‌ ಮಾಡಿಕೊಟ್ಟರೆ ಸಾಕು ಕೇವಲ ಐದು ತಿಂಗಳ ಅವಧಿಯಲ್ಲಿ ತಾಲೂಕಿನ ಬಾಕಿ ಇರುವ ಎಲ್ಲರೂ ಕಾರ್ಡ್‌ ಮಾಡಿಸಿಕೊಳ್ಳಬಹುದಾಗಿದೆ. ಆದರೆ ಅಧಿಕಾರಿ ಗಳು ಆಸಕ್ತಿಯಿಂದ ಕೆಲಸ ಮಾಡಬೇಕು ಎಂಬುದು ಜನರ ಆರೋಪವಾಗಿದೆ.

ಕಾರ್ಯನಿರ್ವಹಿಸಲು ಪ್ರತ್ಯೇಕ ಕೋಡ್‌ ನೀಡಿಲ್ಲ:

ಗ್ರಾಪಂಗಳಲ್ಲಿ ಆಧಾರ್‌ ಕೇಂದ್ರ ತೆರೆದು ಗ್ರಾಮೀಣ ಭಾಗದ ಜನರಿಗೆ ಸೇವೆ ಸಲ್ಲಿಸಲು ಸಿದ್ಧರಿದ್ದೇವೆ. ಆದರೆ, ನಮ್ಮ ಸಿಬ್ಬಂದಿಗಳಿಗೆ ಸರ್ಕಾರದಿಂದ ಕೋಡ್‌ ಅಥವಾ ಪ್ರತ್ಯೇಕ ಮೇಲ್ ಐಡಿ ನೀಡಿಲ್ಲ ಆದುದರಿಂದ ತಾಲೂಕಿನ ಯಾವುದೇ ಗ್ರಾಪಂ ಕೇಂದ್ರಗಳಲ್ಲಿ ಆಧಾರ್‌ ಸೇವಾ ಕೇಂದ್ರವನ್ನು ಇದುವರೆವಿಗೂ ತೆರೆದಿಲ್ಲ. ಮಾನ್ಯ ಹಿರಿಯ ಅಧಿಕಾರಿಗಳು ನಮಗೆ ಸೂಕ್ತ ಸೌಲಭ್ಯ ಹಾಗೂ ಅನುಮತಿ ನೀಡಿದರೆ ನಾವುಗಳು ನಮ್ಮ ಸಿಬ್ಬಂದಿಗಳಿಗೆ ಮತ್ತೂಮ್ಮೆ ತರಬೇತಿಕೊಡಿಸಿ ಸೇವೆಸಲ್ಲಿಸಲು ಕ್ರಮ ವಹಿಸುತ್ತೇವೆ ಎಂದು ಕೆ.ಆರ್‌.ಪೇಟೆ ತಾಪಂ ಸಿಇಓ ವೈ.ಎನ್‌.ಚಂದ್ರಮೌಳಿ ತಿಳಿಸಿದರು.
ಬ್ಯಾಂಕ್‌ ಬಾಗಿಲಲ್ಲಿ ರಾತ್ರಿ ಕಳೆದಿರುವೆ:

ನಾನು ಮುಂಬೈನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವೆ ಆದರೆ ನನ್ನ ಕುಟುಂಬ ಪಟ್ಟಣ ದಲ್ಲಿಯೇ ವಾಸವಿದೆ. ನನ್ನ ಮಗಳು ನಯನಾಳನ್ನು ಶಾಲೆಗೆ ಸೇರಿಸಲು ಹಾಗೂ ಆಕೆಗೆ ಬ್ಯಾಂಕ್‌ ಖಾತೆ ತರೆಯಲು ಆಧಾರ್‌ ಬೇಕಾಗಿದ್ದು, ಆಧಾರ್‌ ಕಾರ್ಡ್‌ ಮಾಡಿಸಲು ಕಳೆದ ಒಂದು ತಿಂಗಳಿಂದ ಓಡಾಡುತ್ತಿದ್ದೆ. ಆದರೆ ನನಗೆ ಟೋಕನ್‌ಗಳು ಸಿಗುತ್ತಿರಲಿಲ್ಲ. ಆದರೆ ನಾನು ಜೀವನ ನಡೆಸಲು ಮುಂಬೈಗೆ ಹೋಗಲೇ ಬೇಕಾಗಿದ್ದರಿಂದ ಶುಕ್ರವಾರ ರಾತ್ರಿ 8.45 ಕ್ಕೆ ಬ್ಯಾಂಕ್‌ ಬಾಗಿಲಿಗೆ ಬಂದು ಮಲಗಿದೆ, ನನ್ನೊಂದಿಗೆ ಹತಾರು ಗ್ರಾಮೀಣ ಭಾಗದ ಜನರು ಚಳಿಯಲ್ಲಿ ಮಲಗಿ ದ್ದರು. ನಂತರ ಶನಿವಾರ ಮಧ್ಯಾಹ್ನ 12.30 ಕ್ಕೆ ನನ್ನ ಮಗಳಿಗೆ ಆಧಾರ್‌ ಕಾರ್ಡ್‌ಗೆ ಫೋಟೊ ತೆಗೆದರು. ಸರ್ಕಾರ ತಕ್ಷಣ ಸೂಕ್ತ ಕ್ರಮವಹಿಸಬೇಕು ಇಲ್ಲವಾದರೆ ಎಲ್ಲರಿಗೂ ಆಧಾರ್‌ ಕಾರ್ಡ್‌ ಸಿಗುವವರೆವಿಗೂ ನಿಯಮವನ್ನು ಸಡಿಲಮಾಡ ಬೇಕು ಎಂದು ಕೆ.ಆರ್‌.ಪೇಟೆ ನಿವಾಸಿ ರವಿ ಆಳಲು ತೋಡಿಕೊಂಡರು.
•ಎಚ್.ಬಿ.ಮಂಜುನಾಥ
Advertisement

Udayavani is now on Telegram. Click here to join our channel and stay updated with the latest news.

Next