ಮೈಸೂರು: ದೈತ್ಯ ದೇಹದ ಜತೆಗೆ ಆಕರ್ಷಕ ಸೌಂದರ್ಯ, ತುಂಟತನಗಳಿಂದ ನೋಡುಗರ ಕಣ್ಣುಕುಕ್ಕುವಂತೆ ಮಾಡಿದ ನೂರಾರು ಮುದ್ದಾದ ಶ್ವಾನಗಳು ಎಲ್ಲರನ್ನು ಆಕರ್ಷಿಸಿದವು. ಇದಕ್ಕೆಲ್ಲಾ ವೇದಿಕೆಯಾಗಿದ್ದು ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದ ಆವರಣ.
ನಗರದ ಕೆನೈನ್ ಕ್ಲಬ್ ಆಫ್ ಮೈಸೂರು ವತಿಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಶ್ವಾನ ಪ್ರದರ್ಶನ ಸ್ಪರ್ಧೆದಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ವಿವಿಧ ತಳಿಗಳ ನೂರಾರು ಶ್ವಾನಗಳು ಪ್ರದರ್ಶನದ ಮೆರಗನ್ನು ಹೆಚ್ಚಿಸಿದವು. ನಿರೀಕ್ಷೆಗೂ ಮೀರಿ ಆಗಮಿಸಿದ್ದ ಶ್ವಾನಪ್ರಿಯರು ಆಕರ್ಷಕ ದೇಹ, ತುಂಟಾಗಳಿಂದ ಎಲ್ಲರನ್ನು ಸೆಳೆಯುತ್ತಿದ್ದ ಶ್ವಾನಗಳ ಆಕರ್ಷಣೆಗೆ ಮನಸೋತು ಅವುಗಳ ಅಂದ-ಚಂದವನ್ನು ಕಂಡು ಖುಷಿಪಟ್ಟರು.
ಯಾವ ಶ್ವಾನಗಳಿದ್ದವು: ಈ ಬಾರಿಯ ಪ್ರದರ್ಶನದಲ್ಲಿ 3 ಕೆಜಿ ತೂಕದ ಮಿನಿಯೇಚರ್ ಪಿಂಚರ್‌ನಿಂದ 120 ಕೆಜಿ ತೂಕದ ಸೇಂಟ್ ಬರ್ನಾಡ್‌ವರೆಗಿನ ಹಲವು ಶ್ವಾನಗಳು ಕಾಣಿಸಿತು. ಪ್ರಮುಖವಾಗಿ ಗೋಲ್ಡನ್ ರಿಟ್ರೀವರ್, ಕಾರವಾನ್ ಹೌಂಡ್, ಮುದೋಳ್, ರಾಜಪಾಳ್ಯ, ವಿಪೆಟ್, ಪಗ್, ಶಿಚ್ ತಜ್Õ, ಲ್ಯಾಬ್ರಾಡಾರ್ ಬೀಗಲ್, ಅಕಿಟಾ, ಚೌಚೌ, ಗ್ರೇಡ್‌ಡೇನ್, ಸೇಂಟ್ ಬರ್ನಾಡ್, ಜರ್ಮನ್ ಷೆಪರ್ಡ್, ಬುಲ್‌ಡಾಗ್, ಬಾಕ್ಸರ್, ಡಾಬರ್‌ವೆುನ್, ಪೊಮೆರಿಯನ್, ಸೈಬೀರಿಯನ್ ಅಸ್ಕಿ ಶ್ವಾನಗಳು ಗಮನ ಸೆಳೆದವು.
ಒಟ್ಟಾರೆ ಸ್ಪರ್ಧೆಯಲ್ಲಿ 24 ಜಾತಿಯ 286 ಶ್ವಾನಗಳು ಪಾಲ್ಗೊಂಡಿದ್ದವು. ಪ್ರದರ್ಶನ ನೋಡಲು ಬಂದಿದ್ದ ಯುವಕ, ಯುವತಿಯರು ಆಕರ್ಷಣೀಯ ಪಗ್, ಮಿನಿಯೇಚರ್ ಪಿಂಚರ್ ಮುಂತಾದ ಶ್ವಾನಗಳೊಂದಿಗೆ ಸೆಲ್ಫಿà ತೆಗೆದುಕೊಂಡು ಸಂಭ್ರಮಿಸಿದರು.
ಅಚ್ಚುಕಟ್ಟಾದ ವ್ಯವಸ್ಥೆ: ಶ್ವಾನ ಪ್ರದರ್ಶನವನ್ನು ವೀಕ್ಷಿಸಲು ಕ್ಲಬ್ ವತಿಯಿಂದ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇನ್ನೂ ದುಬಾರಿ ಶ್ವಾನಗಳಾದ ಅಫ್ಘಾನ್ ಹೌಲ್, ಸೈಬೀರಿಯನ್ ಅಸ್ಕಿ, ಚೌ ಚೌ, ಸೇಂಟ್ ಬರ್ನಾಡ್ ಇನ್ನಿತರ ಶ್ವಾನಗಳು ಬಿಸಿಲಿನ ಬೇಗೆ ತಾಳಲಾರದೆ ಹವಾ ನಿಯಂತ್ರಿತ ವಾಹನದಲ್ಲೇ ಕಾಲ ಕಳೆದವು. ಈ ಶ್ವಾನಗಳಿಗಾಗಿ ಅದರ ಮಾಲೀಕರು ಹವಾನಿಯಂತ್ರಣ ಹೊಂದಿರುವ ವಾಹನಗಳನ್ನು ತಂದಿದ್ದರು.
ಕ್ಲಬ್‌ನಿಂದಲೂ ಶ್ವಾನಗಳ ದಣಿವಾರಿಸಲು ಐಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ದೆಹಲಿ, ಪುಣೆ, ಕೊಚ್ಚಿ ಭಾಗಗಳಿಂದ ಶ್ವಾನಗಳು ಆಗಮಿಸಿದ್ದವು. ಸ್ಪರ್ಧೆಯ ತೀಪುìಗಾರರಾಗಿ ದೆಹಲಿಯ ಶ್ಯಾಮ್ ಮೆಹ್ತಾ, ಬೆಂಗಳೂರಿನ ಟಿ.ಜೆ.ಪ್ರೀತಮ್ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಕೆನೈನ್ ಕ್ಲಬ್ ಆಫ್ ಮೈಸೂರು ಅಧ್ಯಕ್ಷ ಬಿ.ಪಿ.ಮಂಜುನಾಥ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಪ್ರಸಾದ್‌ಮೂರ್ತಿ ಹಾಜರಿದ್ದರು.