Advertisement

ಸಿಎಂ ಹೇಳಿಕೆ ಖಂಡಿಸಿ ಪ್ರತಿಭಟನೆ

12:19 PM May 27, 2018 | |

ಹರಿಹರ: ಮುಖ್ಯಮಂತ್ರಿ ಕುಮಾರಸ್ವಾಮಿ ನಾಡಿನ ಮಠಾಧಿಧೀಶರ ವಿರುದ್ಧ ನೀಡಿರುವ ಹೇಳಿಕೆ ಖಂಡಿಸಿ ಸಾಧು ವೀರಶೈವ ಲಿಂಗಾಯತ ಸಮಾಜದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಗೆ ಮನವಿ ಸಲ್ಲಿಸಲಾಯಿತು.

Advertisement

ನಗರದ ಶಿವಮೊಗ್ಗ ರಸ್ತೆ ಪಕ್ಕೀರಸ್ವಾಮಿ ಮಠದಿಂದ ಮೆರವಣಿಗೆ ಮೂಲಕ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆಯಿಂದ ಗಾಂಧಿ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು, ಅಲ್ಲಿ ಮಾನವ ಸರಪಳಿ ರಚಿಸಿ, ಸಿಎಂ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು. ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಮುಖಂಡರು, ನಾಡಿನ ಪೂಜ್ಯರಿಗೆ ಕುಮಾರಸ್ವಾಮಿ ರಾಜಕೀಯ ಹೇಳಿಕೆ ಕೊಡುವುದನ್ನು ನಿಲ್ಲಿಸಿ. ಸಂಕುಚಿತ ಮನೋಭಾವ ಬಿಡಿ ಎಂದೆಲ್ಲಾ ಹೇಳಿರುವುದು, ಜಾತಿ ರಾಜಕೀಯ ಮಾಡುವುದಾದರೆ ನೇರವಾಗಿ ರಾಜಕೀಯಕ್ಕೆ ಬಂದು ಬಿಡಿ ಎಂದು ಸವಾಲು ಹಾಕಿರುವುದು ನಮಗೆ ನೋವುಂಟಾಗಿದೆ.

ಸಿಎಂ ಕೂಡಲೆ ತಮ್ಮ ಹೇಳಿಕೆ ಹಿಂಪಡೆದು, ಮಠಾಧೀಶರಲ್ಲಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು. ಮಧ್ಯ ಕರ್ನಾಟಕದಲ್ಲಿ ಅವರ ಕಾರ್ಯಕ್ರಮಗಳು ನಡೆಯುವ ವೇಳೆ ನಮ್ಮ ಸಮಾಜದಿಂದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. 

ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತರ ಸಾಲ ಮನ್ನಾ ಮಾಡಿ ನೀಡಿದ ಮಾತನ್ನು ಉಳಿಸಿಕೊಳ್ಳಿ. ಮಠಾಧಿಧೀಶರ ವಿರುದ್ಧ ನೀಡಿರುವ ಹೇಳಿಕೆಯನ್ನು ಹಿಂಪಡೆದು, ರಾಜ್ಯದ ಉತ್ತಮ ಸಿಎಂ ಆಗಿ ಸೇವೆ ಸಲ್ಲಿಸಿ ಎಂದು ಮನವಿ ಮಾಡುತ್ತೇವೆ ಎಂದರು. 

Advertisement

ಎಚ್‌.ಕೆ. ಶಿವಣ್ಣ, ಎಚ್‌.ಎಂ. ಶಿವಾನಂದಪ್ಪ, ರುದ್ರಪ್ಪ, ಸಿದ್ದಪ್ಪ, ಬೆಳ್ಳೂಡಿ ರಾಮಚಂದ್ರಪ್ಪ, ಜಿಪಂ ಮಾಜಿ ಅಧ್ಯಕ್ಷ ಎಸ್‌.ಎಂ ವೀರೇಶ್‌, ತಾಪಂ ಮಾಜಿ ಸದಸ್ಯ ಡಿ.ಕುಮಾರ್‌, ಚಂದ್ರಶೇಖರ್‌ ಪಿ, ಮಂಜುನಾಥ್‌ ಸಾರಥಿ, ಸಿದ್ದೇಶ್‌ ಬೆಳೆಕೆರೆ, ಹರಗನಹಳ್ಳಿ ಮಂಜಪ್ಪ, ವಿಶ್ವನಾಥ್‌ ಚೇರ್ಮಾನ್‌, ಹಲಸಬಾಳು ಬಸವರಾಜಪ್ಪ, ಮಂಜುನಾಥ್‌ ಆರ್‌.ಇ, ಜಿ.ವಿ. ಪ್ರಶಾಂತ್‌, ನಾಗರಾಜ್‌, ಮಂಜಣ್ಣ ಬೇನಳ್ಳಿ, ಮಂಜುನಾಥ್‌ ಎಚ್‌, ರಾವಿ. ಕೆ, ಈರಣ್ಣ ಎ, ಶಿವು, ರೇವಣಸಿದ್ದಪ್ಪ ಕೆ., ಸಿರಿಗೆರೆ ಕುಮಾರ್‌, ಕುಂಬಳೂರು ತೀರ್ಥಪ್ಪ, ಪ್ರಭು, ಕುಮಾರ್‌ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next