ಉಡುಪಿ: ಜೀವಜಾಲದ ಕೊಂಡಿಯ ಅವಿಭಾಜ್ಯ ಅಂಗವಾಗಿರುವ ಹಾವುಗಳ ಸಂತತಿ ಇಂದು ಸತತ ಅರಣ್ಯ ನಾಶ, ನಗರೀಕರಣದಿಂದಾಗಿ ಅಳಿವಿನಂಚಿನಲ್ಲಿದ್ದು ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಉರಗತಜ್ಞ ಗುರುರಾಜ್ ಸನಿಲ್ ಅಭಿಪ್ರಾಯಪಟ್ಟರು.
ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಕಾಲೇಜಿನ ನೇಚರ್ ಕ್ಲಬ್ ಚಟುವಟಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ಮೂಢನಂಬಿಕೆಗೆ ದಾಸರಾಗಿ ತಮ್ಮ ತನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಾವುಗಳ ವಿಷಯದಲ್ಲಿ ಭೀತಿ ತೊಡೆದು ಪ್ರೀತಿ ಬೆಳೆಸಿಕೊಂಡು ಉರಗ ಸಂತತಿ, ಪ್ರಕೃತಿ ಸಿರಿಯನ್ನು ರಕ್ಷಿಸಬೇಕೆಂದರು.
ಪ್ರಾಂಶುಪಾಲ ಪ್ರೊ| ಪ್ರಕಾಶ್ ಕಣಿವೆ, ನೇಚರ್ ಕ್ಲಬ್‌ನ ಪ್ರಭಾರಿ ರೋಹಿತ್ ಎಸ್. ಅಮೀನ್, ಕಾರ್ಯದರ್ಶಿಗಳಾದ ಪ್ರವೀಣ್ ಕುಮಾರ್, ಗೌತಮ್ ಪಿ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೆಟ್ರಿಸಿಯಾ ಡೇ’ಸಾ ಸ್ವಾಗತಿಸಿ, ನಾರಾಯಣ ಮಯ್ನಾರ್ ಅತಿಥಿಗಳನ್ನು ಪರಿಚಯಿಸಿದರು. ಅಶ್ವಿನಿ ನಿರೂಪಿಸಿ, ರಶ್ಮಿತಾ ವಂದಿಸಿದರು. ವಿವಿಧ ಜಾತಿಯ ಹಾವುಗಳ ಪ್ರಾತ್ಯಕ್ಷಿಕೆ ನಡೆಯಿತು.