Advertisement
ಹಿಂದಿನ ಆದರ್ಶ ಗುಣಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಆಗಬೇಕಾಗಿದೆ ಎಂದು ಪುತ್ತೂರಿನ ಪ್ರಗತಿ ಆಸ್ಪತ್ರೆಯ ಡಾ| ಎಸ್.ಸುಧಾ ರಾವ್ ಅವರು ಹೇಳಿದರು.ಅವರು ಉಪ್ಪಿನಂಗಡಿಯ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಸೌಹಾರ್ದ ಯಕ್ಷಗಾನ ಸಮಿತಿ ಮತ್ತು ಶ್ರೀಶಾರದೋತ್ಸವ ಸಮಿತಿ ಮತ್ತು ಬಾರ್ಯ ವಿಷ್ಣುಮೂರ್ತಿ ನೂರಿ ತ್ತಾಯ ಪ್ರತಿಷ್ಠಾನವು ಆಯೊಜಿಸಿದ ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯರ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕೀರ್ತಿಶೇಷ ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯರ ಸಂಸ್ಮರಣೆಯನ್ನು ಅಂಕಣಕಾರ, ಕಲಾವಿದ ನಾ| ಕಾರಂತ ಪೆರಾಜೆ ಮಾಡಿದರು. ಪ್ರತಿಷ್ಠಾನದ ಹತ್ತೂಂಭನೇ ವರುಷದ ಪ್ರಶಸ್ತಿ ಯನ್ನು ನಿವೃತ್ತ ಶಿಕ್ಷಕಿ ಫಿಲೋಮಿನಾ ಇ. ಬ್ರೆಗ್ಸ್ ಅವರಿಗೆ ಪ್ರದಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಭಾಸ್ಕರ ಬಾರ್ಯ ಅವರು ಅಭಿನಂದನಾ ಭಾಷಣ ಮಾಡಿದರು. ರಂಗನಾಥ ಟಿ. ರಾವ್ ಅವರು ಗುಣಕಥನ ಫಲಕವನ್ನು ವಾಚಿಸಿದರು. ಫಿಲೋಮಿನಾ ಅವರು ಶಿಕ್ಷಣ ಕ್ಷೇತ್ರದಲ್ಲಿ ತಾನು ನಡೆದು ಬಂದ ಹಾದಿಯನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಿದರು. ಸೌಹಾರ್ದ ಯಕ್ಷಗಾನ ಸಮಿತಿಯ ಹದಿನಾಲ್ಕನೇ ವರುಷದ ಪ್ರಶಸ್ತಿಯನ್ನು ಉಪನ್ಯಾಸಕ, ಕಲಾವಿದ ಪೊ›| ದಂಬೆ ಈಶ್ವರ ಶಾಸ್ತ್ರಿಯವರಿಗೆ ಪ್ರದಾನಿಸಲಾಯಿತು. ಉಪ್ಪಿನಂಗಡಿ ಜಿ.ಪಂ. ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ಸಂಪನ್ನಗೊಂಡಿತು. ಸೌಹಾರ್ದ ಯಕ್ಷಗಾನ ಸಮಿತಿಯ ಅಧ್ಯಕ್ಷ ಎನ್.ಉಮೇಶ ಶೆಣೈ ಸಮಾರಂಭವನ್ನು ಸಂಘಟಿಸಿದ್ದರು. ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸಂಘ, ಗೇರುಕಟ್ಟೆಯ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನವು ಸಹಕಾರ ನೀಡಿತ್ತು. ಪಿ. ಹರಿಶ್ಚಂದ್ರ ಆಚಾರ್ಯ, ಗುಡ್ಡಪ್ಪ ಬಲ್ಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಹರೀಶ ಆಚಾರ್ಯ ನಿರೂಪಣೆ ಮಾಡಿದರು.ಕಾರ್ಯಕ್ರಮದ ಕೊನೆಯಲ್ಲಿ ರಾಮಾಂಜ ನೇಯ ಮತ್ತು ಗಂಗಾ ಸಾರಥ್ಯ ಪ್ರಸಂಗಗಳ ತಾಳಮದ್ದಳೆ ಜರುಗಿತು.
Related Articles
ಈ ಸಂದರ್ಭ ಉಪ್ಪಿನಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ದಿ| ಖ. ಪುಷ್ಪಾವತಿ ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ ನುಡಿನಮನ ಸಲ್ಲಿಸಿದರು.
Advertisement