Advertisement

ಪರಿಹಾರಕ್ಕಾಗಿ ಕೋರ್ಟ್‌ಗೆ ವಕೀಲನ ಅರ್ಜಿ

11:31 AM Feb 08, 2017 | Team Udayavani |

ಬೆಂಗಳೂರು: ನಗರದ ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ 2012ರ ಮಾರ್ಚ್‌ 2ರಂದು ನಡೆದ ಪೊಲೀಸರು, ಮಾಧ್ಯಮ ಪ್ರತಿನಿಧಿಗಳು ಮತ್ತು ವಕೀಲರ ನಡುವಿನ ಸಂಘರ್ಷದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನೋಟರಿ ವಕೀಲರೊಬ್ಬರು ಇದೀಗ ಒಂದು ಕೋಟಿ ರೂ. ಪರಿಹಾರ ಕೊಡಿಸುವಂತೆ ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

Advertisement

ಜಯನಗರದ 4ನೇ ಬ್ಲಾಕ್‌ ನಿವಾಸಿಯಾದ ನೋಟರಿ ವಕೀಲ ಅರುಣ್‌ ಆರ್‌. ನಾಯಕ್‌ ಅವರು ಈ ಸಂಬಂಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿದ್ದಾರೆ.  ಘಟನೆ ನಡೆದು ಐದು ವರ್ಷ ಸಮೀಪಿಸುತ್ತಿರುವ ಸಂರ್ಭದಲ್ಲಿ ಹೈಕೋರ್ಟ್‌ ಮೆಟ್ಟಿಲೇರಿರುವ ಅರುಣ್‌ ನಾಯಕ್‌, 2012ರ ಮಾರ್ಚ್‌ 2ರಂದು ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ನಡೆದ ಸಂಘರ್ಷದ ವೇಳೆ ತಮ್ಮ ನೋಟರಿ ಕಚೇರಿಯನ್ನು ಧ್ವಂಸ ಮಾಡಲಾಗಿತ್ತು.

ಹಾಗೆಯೇ, ತಮ್ಮ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿತ್ತು. ಘಟನೆಯಿಂದ ತೀವ್ರ ಸ್ವರೂಪದಲ್ಲಿ ಗಾಯಗೊಂಡ ನಾನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಾಯಿತು. ಇದರಿಂದ ನನ್ನ ಬದುಕು ದುಸ್ತರವಾಗಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ. ಅಲ್ಲದೆ, ಸರ್ಕಾರ ನನಗೆ ಈವರೆಗೂ ಪರಿಹಾರ ನೀಡಿಲ್ಲ. ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸಲು ಮತ್ತು ಜೀವನ ನಡೆಸಲು ನನಗೆ ಕಷ್ಟವಾಗಿದೆ.

ಹೀಗಾಗಿ, ಒಂದು ಕೋಟಿ ರೂ. ಶಾಶ್ವತ ಪರಿಹಾರ ಕೊಡಲು ಸರ್ಕಾರಕ್ಕೆ ಆದೇಶಿಸಬೇಕು. ಜತೆಗೆ, ಮಧ್ಯಂತರ ಪರಿಹಾರವಾಗಿ ಹತ್ತು ಲಕ್ಷ ರೂ. ನೀಡಲು ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. ಮಂಗಳವಾರ ಈ ಅರ್ಜಿ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠವು ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಸಂಘರ್ಷ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ವಿಶೇಷ ತನಿಖಾ ತಂಡಕ್ಕೆ ನೋಟಿಸ್‌ ಜಾರಿ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next