Advertisement

ಆಸ್ತಿ ತೆರಿಗೆಯಲ್ಲೇ 6 ಸಾವಿರ ಕೋಟಿ ಆದಾಯವಿದೆ

01:34 AM Jun 11, 2019 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದರೆ ಪಾಲಿಕೆಗೆ ವಾರ್ಷಿಕ ಆರು ಸಾವಿರ ಕೋಟಿ ರೂ. ಆದಾಯ ಸಂಗ್ರಹವಾಗುತ್ತದೆ ಎಂದು ಬಿಜೆಪಿ ನಗರ ವಕ್ತಾರ ಎನ್‌.ಆರ್‌.ರಮೇಶ್‌ ತಿಳಿಸಿದ್ದಾರೆ.

Advertisement

ನಗರದಲ್ಲಿರುವ ಆಸ್ತಿಗಳ ಸಮಗ್ರ ಮಾಹಿತಿಯನ್ನು ಕಲೆಹಾಕಿ ಅವುಗಳಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹಿಸುವದರಿಂದ ಆಸ್ತಿ ತೆರಿಗೆ ಹೆಚ್ಚಿಸುವ ಅಗತ್ಯವಿರುವುದಿಲ್ಲ. ಹೀಗಾಗಿ ಕೂಡಲೇ ಎಲ್ಲ ಆಸಿಗಳನ್ನು ತೆರಿಗೆ ವ್ಯಾಪ್ತಿಗೆ ತರುವಂತೆ ಆಯುಕ್ತರಿಗೆ ಪತ್ರ ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಅಧಿಕಾರಿಗಳೇ ಸಂಗ್ರಹ ಮಾಡಿರುವಂತೆ ಪಾಲಿಕೆ ವ್ಯಾಪ್ತಿಯಲ್ಲಿ 16 ಲಕ್ಷ ವಸತಿ ಕಟ್ಟಡ, 6 ಲಕ್ಷ ವಾಣಿಜ್ಯ ಕಟ್ಟಡ, 1.10 ಲಕ್ಷ ಕೈಗಾರಿಕಾ ಕಟ್ಟಡ, 3,800 ಶಾಲಾ ಕಟ್ಟಡ, 50ಕ್ಕಿಂತ ಹೆಚ್ಚು ಯುನಿಟ್‌ ಹೊಂದಿರುವ 22 ಸಾವಿರ ವಸತಿ ಸಮುತ್ಛಯ, 12,860 ಪಿಜಿ ಹಾಸ್ಟೆಲ್‌,

3,758 ಐಟಿ ಕಂಪೆನಿಗಳು, 94 ಬಿಟಿ ಕಂಪೆನಿಗಳು, 79 ಟೆಕ್‌ಪಾರ್ಕ್‌, 157 ಮಾಲ್‌ಗ‌ಳು, 2,446 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, 3,350 ಲಾಡ್ಜ್, 684 ಸ್ಟಾರ್‌ ಹೊಟೇಲ್‌, 1,300 ಕಲ್ಯಾಣ ಮಂಟಪಗಳು, 1600 ಪಾರ್ಟಿ ಹಾಲ್‌ಗ‌ಳು ಹಾಗೂ 13,860 ಟೆಲಿಕಾಂ ಟವರ್‌ಗಳಿವೆ ಎಂದರು.

ಈ ಎಲ್ಲ ಆಸ್ತಿಗಳಿಂದ ನ್ಯಾಯಯುತವಾಗಿ ಆಸ್ತಿ ತೆರಿಗೆ ಸಂಗ್ರಹಿಸಿದರೆ ಪ್ರತಿ ವರ್ಷ ಕನಿಷ್ಠ 6 ಸಾವಿರ ಕೋಟಿಗೂ ಹೆಚ್ಚಿನ ಆದಾಯ ಬರಲಿದೆ. ಅಲ್ಲದೆ, ಕೆಲವು ಅಪಾರ್ಟ್‌ಮೆಂಟ್‌ಗಳು, ಟೆಕ್‌ಪಾರ್ಕ್‌ಗಳು ತಮ್ಮ ಕಟ್ಟಡಗಳ ವಿಸ್ತೀರ್ಣದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ.

Advertisement

ಈ ಕಟ್ಟಡಗಳನ್ನು ಟೋಟಲ್‌ ಸ್ಟೇಷನ್‌ ಸರ್ವೆಗೆ ಒಳಪಡಿಸಿದರೆ ಅವುಗಳಿಂದಲೂ ಕನಿಷ್ಠ 6 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹ ಮಾಡಬಹುದಾಗಿದೆ ಎಂದು ಹೇಳಿದರು. 2014-15ನೆ ಸಾಲಿನಲ್ಲಿ ಮೂರು ಕಟ್ಟಡಗಳನ್ನು ಟೋಟಲ್‌ ಸ್ಟೇಷನ್‌ ಸರ್ವೆಗೆ ಒಳಪಡಿಸಿದಾಗ ಸುಮಾರು 8 ಕೋಟಿಯಷ್ಟು ತೆರಿಗೆ ವಂಚನೆ ಮಾಡಿರುವುದು ಬಹಿರಂಗಗೊಂಡಿತ್ತು.

ಹೀಗಾಗಿ ನಗರದ ನಾಗರಿಕರ ಮೇಲೆ ಆಸ್ತಿ ತೆರಿಗೆ ಹೆಚ್ಚಳದ ಚಾಟಿ ಬೀಸುವ ಬದಲಿಗೆ, ಎಲ್ಲ ಆಸ್ತಿಗಳಿಂದ ಕಾನೂನು ರೀತಿ ತೆರಿಗೆ ಸಂಗ್ರಹಿಸಲು ದಿಟ್ಟ ಹೆಜ್ಜೆ ಇಡಬೇಕು. ಜತೆಗೆ ಕಂದಾಯ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳ ಚಿತಾವಣೆಯಿಂದ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ 3 ಲಕ್ಷ ಹೆಚ್ಚು ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಗಮನ ಹರಿಸಬೇಕೆಂದು ಆಯುಕ್ತರಲ್ಲಿ ಮನವಿ ಮಾಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next