ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ಮತಾಂತರ ನಿಷೇಧ ಕಾಯಿದೆ ಈ ಬಾರಿ ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗಲಿದೆ.
ವಿಧಾನ ಪರಿಷತ್ತಿನಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಇರಲಿಲ್ಲ. ಈ ವಿಚಾರದಲ್ಲಿ ಜೆಡಿಎಸ್ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿತ್ತು. ಹೀಗಾಗಿ ಸಂಖ್ಯಾ ಬಲ ಕೊರತೆಯಿಂದ ಮೇಲ್ಮನೆಯಲ್ಲಿ ವಿಧೇಯಕ ಬಿದ್ದು ಹೋಗಬಹುದೆಂಬ ಕಾರಣಕ್ಕೆ ಮಂಡನೆಯಾಗಿರಲಿಲ್ಲ.
ಆದರೆ ಇದೀಗ ಪರಿಷತ್ತಿನಲ್ಲಿ ಬಿಜೆಪಿಗೆ ಬಹುಮತ ಲಭಿಸಿದೆ. ಹೀಗಾಗಿ ತನ್ನ ಮಹತ್ವಾಕಾಂಕ್ಷೆಯ ಮತಾಂತರ ನಿಷೇಧ ಕಾಯಿದೆಯನ್ನು ಮಂಡಿಸಲು ನಿರ್ಧರಿಸಿದೆ.
ಇದನ್ನೂ ಓದಿ:2013ರಲ್ಲಿ ಪಾಕ್ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್ ಸಿಂಗ್ ಪತ್ನಿ ರಸ್ತೆ ಅಪಘಾತದಲ್ಲಿ ಸಾವು
ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರಗೊಂಡಿದ್ದರೂ, ಮೇಲ್ಮನೆಯಲ್ಲಿ ಒಪ್ಪಿಗೆ ದೊರಕದ ಕಾರಣಕ್ಕೆ ಸುಗ್ರೀವಾಜ್ಞೆಯ ಮೂಲಕ ಸರಕಾರ ಕಾಯಿದೆ ಜಾರಿ ಮಾಡಿತ್ತು.