Advertisement
ಅರಮನೆಯ ಬಲರಾಮ ದ್ವಾರದಲ್ಲಿ ಮೈಸೂರಿನ ಬಿ.ಬಿ.ಮೊಹಲ್ಲದ ಶ್ರೀಗುರುಮಲ್ಲೇಶ್ವರ ನಂದಿಧ್ವಜ ಸಂಘ ಹಾಗೂ ಶ್ರೀಗೌರಿಶಂಕರ ನಂದಿಧ್ವಜ ಸಂಘದವರ ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೂಜೆ ಸಲ್ಲಿಸಿದರು. ಅದರೊಂದಿಗೆ ಜಂಬೂಸವಾರಿ ಮೆರವಣಿಗೆ ಆರಂಭವಾಯಿತು. ಮೊದಲಿಗೆ ಬಲರಾಮ ಆನೆ ನಿಶಾನೆ ಆನೆಯಾಗಿ ಸಾಗಿದರೆ, ಅದರ ಹಿಂದೆ ಅಭಿಮನ್ಯು, ಗೋಪಾಲಸ್ವಾಮಿ, ಧನಂಜಯ, ವಿಕ್ರಮ ಆನೆಗಳು ಸಾಗಿದವು.
Related Articles
Advertisement
ಧಾರವಾಡ ಜಿಲ್ಲೆ ಕೆಲಗೇರಿಯ ನಾಗೇಶ ಬಿ.ಮಾಳಗಿ ತಂಡದಿಂದ ಹೆಜ್ಜೆಮೇಳ, ಚಿಂತಾಮಣಿಯ ಆರ್.ಡಿ.ಮಂಜುನಾಥ್ ಅವರಿಂದ ಕರಗನೃತ್ಯ, ವಾರ್ತಾ ಇಲಾಖೆಯಿಂದ ಸರ್ಕಾರದ ಸೌಲಭ್ಯಗಳ ಮಾಹಿತಿ ಒದಗಿಸುವ ಸ್ತಬ್ಧಚಿತ್ರ, ಚಾಮರಾಜ ನಗರ ಜಿಲ್ಲೆ ರಾಮಸಮುದ್ರದ ಚೇತನ್‌ರಾಜ್ ಎಂ. ಅವರ ತಂಡದಿಂದ ಸುಗ್ಗಿ ಕುಣಿತ, ಸಕಲೇಶಪುರ ತಾಲೂಕು ಹೆತ್ತೂರಿನ ಆದರ್ಶ ಎಚ್.ಕೆ.ತಂಡದಿಂದ ಮಲೆನಾಡ ಸುಗ್ಗಿ ಕುಣಿತ, ಚಾಮರಾಜ ನಗರ ಜಿಲ್ಲೆಯಿಂದ ಸಮೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ ವಿಷಯ ಕುರಿತ ಸ್ತಬ್ಧಚಿತ್ರ ಸಾಗಿತು.
ಅತಿವೃಷ್ಟಿ ಸ್ತಬ್ಧಚಿತ್ರ: ಅದರ ಹಿಂದೆ ತಮಟೆ ವಾದನ, ಚಿತ್ರದುರ್ಗ ಜಿಲ್ಲೆಯಿಂದ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಅರಿವು ಮೂಡಿಸುವ ಸ್ತಬ್ಧಚಿತ್ರ, ಗಾರುಡಿ ಗೊಂಬೆ, ಬಾಗಲಕೋಟೆ ಜಿಲ್ಲೆಯಿಂದ ಅತಿವೃಷ್ಟಿ ಕುರಿತ ಸ್ತಬ್ಧಚಿತ್ರ, ಚಿಕ್ಕಬಳ್ಳಾಪುರ ಜಿಲ್ಲೆಯ ರೇಷ್ಮೆ ಮತ್ತು ಎಚ್.ನರಸಿಂಹಯ್ಯ ಕುರಿತ ಸ್ತಬ್ಧಚಿತ್ರ, ಪೂಜಾ ಕುಣಿತ, ದಾವಣಗೆರೆ ಜಿಲ್ಲೆಯಿಂದ ಏರ್‌ಸ್ಟ್ರೈಕ್ ಕುರಿತ ಸ್ತಬ್ಧಚಿತ್ರ, ಕೋಲಾಟ, ದಕ್ಷಿಣ ಕನ್ನಡ ಜಿಲ್ಲೆಯಿಂದ ಮಂಗಳಾದೇವಿ ಮತ್ತು ಭಾರತದ ಅತಿದೊಡ್ಡ ಪೆಟ್ರೋಲಿಯಂ ಘಟಕದ ಸ್ತಬ್ಧಚಿತ್ರ, ಹಗಲು ವೇಷ, ಧಾರವಾಡ ಜಿಲ್ಲೆಯಿಂದ ಸಾಂಸ್ಕೃತಿಕ ವೈಭವ ಕುರಿತ ಸ್ತಬ್ಧಚಿತ್ರ, ಹರಿಯಾಣ ರಾಜ್ಯದ ತಂಡದಿಂದ ಗೂಮರ್ ನೃತ್ಯ, ಜಾರ್ಖಂಡ್ ರಾಜ್ಯದ ತಂಡದಿಂದ ಚಾವ್ ನೃತ್ಯ, ಜೆಎಸ್‌ಎಸ್ ಮಠ ಸಮಾಜಕ್ಕೆ ನೀಡಿರುವ ಕೊಡುಗೆಗಳ ಕುರಿತು ಸ್ತಬ್ಧಚಿತ್ರ.
ಚಂದ್ರಯಾನ-2 ಸ್ತಬ್ಧಚಿತ್ರ: ಬೆಂಗಳೂರು ನಗರ ಜಿಲ್ಲೆಯಿಂದ ಇಸ್ರೋ ಚಂದ್ರಯಾನ-2 ಸ್ತಬ್ಧಚಿತ್ರ, ದಕ್ಷಿಣ ಕನ್ನಡ ಜಿಲ್ಲೆ ಭಟ್ಕಳದ ಗೊಂಡರ ಡಕ್ಕೆ, ಬಿಳಿಗಿರಿರಂಗನಬೆಟ್ಟದ ಗೋರಾಕನ ನೃತ್ಯ, ಗದಗ ಜಿಲ್ಲೆಯಿಂದ ಬೇಟಿ ಪಡಾವೊ -ಬೇಟಿ ಬಚಾವೋ ಸ್ತಬ್ಧಚಿತ್ರ, ಚಂಡೆಮೇಳ, ಹೂವಿನ ನೃತ್ಯ, ಹಾಸನ ಜಿಲ್ಲೆಯಿಂದ ಎತ್ತಿನ ಹೊಳೆ ಯೋಜನೆ ಕುರಿತ ಸ್ತಬ್ಧಚಿತ್ರ, ಮರಗಾಲು ಕುಣಿತ, ದೊಣ್ಣೆವರಸೆ, ಹಾವೇರಿ ಜಿಲ್ಲೆಯಿಂದ ಶಂಖನಾದ ಮೊಳಗಿಸುತ್ತಿರುವ ಕನಕದಾಸರು ಸ್ತಬ್ಧಚಿತ್ರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಜಗ್ಗಲಗೆ ಮೇಳ, ಬೆಳಗಾವಿ ಜಿಲ್ಲೆಯ ಅತಿವೃದ್ಧ-ಪ್ರವಾಹದಿಂದ ನಲುಗಿದ ಬೆಳಗಾವಿ ಕುರಿತ ಸ್ತಬ್ಧಚಿತ್ರ,
ಉಡುಪಿ ಜಿಲ್ಲೆಯಿಂದ ಶ್ರೀಕೃಷ್ಣ ಮಠದ ಗೋಪುರ ಸ್ತಬ್ಧಚಿತ್ರ, ಮಹಾರಾಷ್ಟ್ರ ರಾಜ್ಯದ ತಂಡದಿಂದ ಡಾಂಗ್ರಿಗಜ ನೃತ್ಯ, ನಾಸಿಕ್ ಡೋಲು, ಕೊಡಗು ಜಿಲ್ಲೆಯಿಂದ ಗುಡ್ಡ ಕುಸಿತ ಜನ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ,ವಿಜಯಪುರ ಜಿಲ್ಲೆಯ ಸತ್ತಿಗೆ ಕುಣಿತ, ಸುಳ್ಯದ ಕಂಗಿಲು ನೃತ್ಯ, ಮಂಡ್ಯಜಿಲ್ಲೆಯಿಂದ ಆದಿಚುಂಚನಗಿರಿ ಮಠ ಕುರಿತ ಸ್ತಬ್ಧಚಿತ್ರ, ತಮಟೆ ನಗಾರಿ, ಕೋಲಾರ ಜಿಲ್ಲೆಯಿಂದ ಅಂತರಗಂಗೆ ಕುರಿತ ಸ್ತಬ್ಧಚಿತ್ರ, ಮಂಡ್ಯ ಜಿಲ್ಲೆ ಮತ್ತು ಬೀದರ್ ಜಿಲ್ಲೆ ತಂಡದಿಂದ ನಂದೀಕೋಲು, ಕೊಪ್ಪಳ ಜಿಲ್ಲೆಯಿಂದ ಗವಿ ಸಿದ್ಧೇಶ್ವರ ಬೆಟ್ಟದ ಸ್ತಬ್ಧಚಿತ್ರ, ಕಾರವಾರ ಜಿಲ್ಲೆಯ ಗುಮಟೆ ಕುಣಿತ, ಕೋಲಾರ ಜಿಲ್ಲೆಯ ಕಾವಡಿ ಕುಣಿತ,
ಸ್ತಬ್ಧಚಿತ್ರ ಉಪ ಸಮಿತಿಯಿಂದೂರು ವಿಮಾನ ನಿಲ್ದಾಣ, ದಶಪಥದ ರಸ್ತೆ, ಮೆಮೊ ರೈಲು ಯೋಜನೆಗಳ ಬಗ್ಗೆ ಪ್ರಚುರಪಡಿಸುವ ಸ್ತಬ್ಧಚಿತ್ರ, ಬಾಗಲಕೋಟೆ ಜಿಲ್ಲೆಯ ಸಮ್ಮಾಳ ಮೇಳ, ಕಲಬುರ್ಗಿ ಜಿಲ್ಲೆಯ ಲಂಬಾಣಿ ಕುಣಿತ, ಕೊಪ್ಪಳ ಜಿಲ್ಲೆಯ ಕರಡಿ ಮಜಲು, ಕಾವೇರಿ ನೀರಾವರಿ ನಿಗದ ಸ್ತಬ್ಧಚಿತ್ರ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಚಿತ್ರದುರ್ಗ ಜಿಲ್ಲೆಯ ಅರೆ ವಾದ್ಯ, ರಾಯಚೂರು ಜಿಲ್ಲೆಯಿಂದ ಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಿರುವ ಗೂಗಲ್ ಬ್ರಿಡ್ಜ್, ಪ್ರಧಾನಮಂತ್ರಿ ಪಿಂಚಣಿ ಯೋಜನೆ, ನರೇಗಾ ಯೋಜನೆ ಪ್ರಚುರಪಡಿಸುವ ಸ್ತಬ್ಧಚಿತ್ರ, ವಿಜಯಪುರ ಜಿಲ್ಲೆ ತಮಟೆವಾದನ, ಬಾಗಲಕೋಟೆ ಜಿಲ್ಲೆಯ ಮಲಕಿನಕೋಲು,
ರಾಮನಗರ ಜಿಲ್ಲೆಯಿಂದ ಮಳೂರು ಅಂಬೇಗಾಲು ಕೃಷ್ಣ ದೇವಾಲಯದ ಸ್ತಬ್ಧಚಿತ್ರ, ಜಿಲ್ಲಾಡಳಿತದಿಂದ ಸಾಮಾಜಿಕ ನ್ಯಾಯ ಕುರಿತ ಸ್ತಬ್ಧಚಿತ್ರ, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ನಾಸಿಕ್ ಬ್ಯಾಂಡ್ ಮತ್ತು ಹುಲಿವೇಷ, ಶಿವಮೊಗ್ಗ ಜಿಲ್ಲೆಯಿಂದ ಫಿಟ್ ಇಂಡಿಯಾ ಕುರಿತ ಸ್ತಬ್ಧಚಿತ್ರ, ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಗೊಂಬೆ ಕುಣಿತ, ದಾಲಪಟ, ತುಮಕೂರು ಜಿಲ್ಲೆಯಿಂದ ಸಮಗ್ರ ಕೃಷಿ ಪದ್ಧತಿ ಹಾಗೂ ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಯವರ ಸ್ತಬ್ಧಚಿತ್ರ, ಉತ್ತರಕನ್ನಡ ಜಿಲ್ಲೆಯಿಂದ ಕದಂಬ ಬನವಾಸಿ, ಮಧುಕೇಶ್ವರ ದೇವಸ್ಥಾನ, ಮರುಡೇಶ್ವರ ದೇವಸ್ಥಾನ, ಮಾಗೋಡು ಜಲಪಾತ ಕುರಿತ ಸ್ತಬ್ಧಚಿತ್ರ,
ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ತಂಡದಿಂದ ಝಾಂಜ್ ಫಥಕ್, ವಿಜಯಪುರ ಜಿಲ್ಲೆಯಿಂದ ವಚನ ಪಿತಾಮಹ ಘ.ಗು.ಹಳಕಟ್ಟಿ ಕುರಿತ ಸ್ತಬ್ಧಚಿತ್ರ, ಕೇರಳ ರಾಜ್ಯ ತಂಡದಿಂದ ಸಿಂಗಾರಿ ಮೇಳಂ, ಆಂಧ್ರಪ್ರದೇಶ ರಾಜ್ಯತಂಡದಿಂದ ತಪ್ಪಾಟಗಲ್ಲು, ಚಾಮರಾಜ ನಗರ ಜಿಲ್ಲೆಯ ತಂಡದಿಂದ ಗೊರವರ ಕುಣಿತ, ಮೈಸೂರು ವಿಶ್ವವಿದ್ಯಾನಿಲಯದಿಂದ ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳ ಕುರಿತ ಸ್ತಬ್ಧಚಿತ್ರ, ದಾವಣಗೆರೆ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಗಳ ತಂಡದಿಂದ ಡೊಳ್ಳು ಕುಣಿತ, ಕಲಬುರ್ಗಿ ಜಿಲ್ಲೆಯಿಂದ ಆಯುಷ್ಮಾನ್ ಯೋಜನೆ ಪ್ರಚುರಪಡಿಸುವ ಸ್ತಬ್ಧಚಿತ್ರ,
ಮಂಡ್ಯ ಮತ್ತು ಹಾಸನ ಜಿಲ್ಲೆಗಳ ತಂಡದಿಂದ ಸೋಮನಕುಣಿತ, ಕರ್ನಾಟಕ ಬ್ಯಾಂಡ್ ತಂಡ, ಮಹಾರಾಷ್ಟ್ರ ತಂಡದಿಂದ ಪುಣೇರಿ ಡೋಲ್, ಹಾವೇರಿ-ಗದಗ ಜಿಲ್ಲೆಗಳ ತಂಡದಿಂದ ಪುರವಂತಿಕೆ, ಮೈಸೂರಿನ ವಿ.ನಟರಾಜು ತಂಡದಿಂದ ನಾದಸ್ವರ, ಕೆಎಆರ್‌ಪಿ ಮೌಂಟೆಡ್ ಕಂಪನಿಯಿಂದ ಇಂಗ್ಲಿಷ್ ಬ್‌ಂಡ್, ಮೈಸೂರು ಅರಮನೆವತಿಯಿಂದ ಫಿರಂಗಿ ಗಾಡಿಗಳು,ಪೊಲೀಸ್ ಅಶ್ವದಳ, ಅರಣ್ಯ ಇಲಾಖೆ ವೈದ್ಯರ ತಂಡ, ಅಗ್ನಿಶಾಮಕ ತಂಡ ಹಾಗೂ ತುರ್ತು ಚಿಕಿತ್ಸಾ ವಾಹನಗಳು ಮೆರವಣಿಗೆ ಜೊತೆಗೆ ಸಾಗಿದವು.