ಅಧ್ಯಕ್ಷತೆಯಲ್ಲಿ ಭಕ್ತಿಭಾವದಿಂದ ಜರುಗಿ ಭಾವೈಕ್ಯತೆಗೆ ಸಾಕ್ಷಿಯಾಯಿತು.
Advertisement
ಬೆಳಗ್ಗೆ 8ಗಂಟೆಗೆ ಖಾಸ್ಗತ ಮಠದಿಂದ ಆನೆ ಅಂಬಾರಿ ಮೇಲೆ ಖಾಸ್ಗತರ ಬೆಳ್ಳಿಯ ಮಹಾಮೂರ್ತಿಯ ಮಹಾ ಮೆರವಣಿಗೆ,ವಿರಕ್ತಮಹಾಸ್ವಾಮಿಗಳ ಭಾವಚಿತ್ರ ಭವ್ಯ ಮೆರವಣಿಗೆ ನಡೆಯಿತು. ಅಲ್ಲದೇ ಅಶ್ವಮೇಧ ಬೆಳ್ಳಿಯ ರಥದಲ್ಲಿ ಕುಳಿತ ಶ್ರೀ ಮಠದ ನೂತನ ಪೀಠಾಧಿಪತಿ ಸಿದ್ದಲಿಂಗದೇವರು ಅಲ್ಲದೇ ಪಲ್ಲಕ್ಕಿ ಹಾಗೂ ರಥದ ಕಳಸದ ಮಹಾಮೆರವಣಿಗೆ ಪಟ್ಟಣದ ಪ್ರಮುಖ ಬಡಾವಣೆಯಲ್ಲಿ ಸಂಚರಿಸಿ ಪುರಾತನ ಭೀಮನಭಾವಿಯಲ್ಲಿ ಗಂಗಾಸ್ಥಳ ಮಹಾಕಾರ್ಯಕ್ರಮ ಮುಗಿಸಿಕೊಂಡು ಮಠ ತಲುಪಿತು.
ವಾಧ್ಯ ವೈಭವಗಳು ಅಲ್ಲದೇ ಗೊಂಬೆ ಕುಣಿತ, ಕರಡಿ ಮಜಲು, ಸನಾದಿಯ ನಾದ, ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಸ್ಥಳೀಯ ಯುವಕರ ಲೇಜಿಮ್ ಕುಣಿತ ತಾಳಿಕೋಟೆ ಪಟ್ಟಣದ ರಾಜವೈಭವ ಮರುಕಳಿಸುವಂತ್ತಿತ್ತು. ಮಹಾವೈಭವದ ಗಂಗಾಸ್ಥಳ ಕಾರ್ಯಕ್ರಮದಲ್ಲಿ ನಡೆದ ಓಂ ನಮಃ ಶಿವಾಯ ಶಿವಭಜನೆ ರಾಜವೈಭವದ ಮೆರಗು ನೀಡಿತು. ಮೆರವಣಿಗೆಯಲ್ಲಿ ರಾಜವಾಡೆ ಕಿಂಗ್ಸ್ ಗೆಳೆಯರ ಬಳಗ, ನಮ್ಮ ಗೆಳೆಯರ ಬಳಗ, ಮತ್ತು ರಾಮಸಿಂಗ್ ಗೆಳೆಯರ ಬಳಗ, ಪ್ರಶಾಂತ ಹಾವರಗಿ ಅಭಿಮಾನಿ ಬಳಗ
ಒಳಗೊಂಡು ಅನೇಕ ಯುವಕ ಸಂಘದವರು ದಾರಿಯುದ್ದಕ್ಕೂ ಪ್ರಸಾದದ ಸೇವೆ ನಡೆಸಿದರು. ಕೆಲವರು ತಂಪು ಪಾನಿಯ, ಕುಡಿಯುವ ನೀರಿನ ವ್ಯವಸ್ಥೆ ಏರ್ಪಡಿಸಿದ್ದರು. ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮೆರವಣಿಗೆ ವಿವಿಧ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಖಾಸ್ಗತೇಶ್ವರ ಮಠಕ್ಕೆ ಮಧ್ಯಾಹ್ನ 2:30ಕ್ಕೆ ತಲುಪಿತು. ಮಹಾ ಕಾರ್ಯಕ್ರಮದಲ್ಲಿ ಮುಂಬೈ, ಪುಣೆ, ಹೈದ್ರಾಬಾದ, ಹುಬ್ಬಳ್ಳಿ, ಧಾರವಾಡ, ಬೆಂಗಳೂರ, ಕಲಬುರಗಿ ಮಹಾನಗರಗಳಿಂದಲೂ ಸಾವಿರಾರೂ ಸಂಖ್ಯೆಯಲ್ಲಿ ಭಕ್ತ ಸಮೂಹ ಪಾಲ್ಗೊಂಡು ಭಕ್ತಿಭಾವ ಮೆರೆದರು.
Related Articles
ಶರಭಯ್ಯ ಪುರಾಣಿಕಮಠ, ಹಿರೂರದ ವಿಜಯಕುಮಾರ ಹಿರೇಮಠ, ಮುರಗನವರ ಶಿರೂರ, ಶ್ರೀಧರ ಕಾಗನೂರಮಠ ಭಾಗವಹಿಸಿದ್ದರು.
Advertisement
ಸಂಭ್ರಮದ ಶ್ರೀ ಖಾಸ್ಗತೇಶ್ವರ ರಥೋತ್ಸವ ಸಂಭ್ರಮದ ಶ್ರೀ ಖಾಸ್ಗತೇಶ್ವರ ರಥೋತ್ಸವತಾಳಿಕೋಟೆ: ಸ್ಥಳೀಯ ಶ್ರೀ ಖಾಸ್ಗತೇಶ್ವರ ಮಹಾಮಠದ ಶ್ರೀ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಜಾತ್ರೋತ್ಸವ ಪ್ರಯುಕ್ತ
ಗುರುವಾರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಜಾತ್ರೋತ್ಸವ ಅಂಗವಾಗಿ ದಿನನಿತ್ಯ ಖಾಸ್ಗತೇಶ್ವರ ಗದ್ದುಗೆಗೆ ಮಹಾಭಿಷೇಕ,
ಬಿಲ್ವಾರ್ಚನೆ, ಪುಷ್ಪಾರ್ಚನೆ, ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ಜರುಗಿತು. ಖಾಸ್ಗತೇಶ್ವರ ರಥೋತ್ಸವವು ಮಠದಿಂದ
ಆರಂಭಗೊಂಡು ಬಸವೇಶ್ವರ ದೇವಸ್ಥಾನದವರೆಗೆ ಜರುಗಿ ಮರಳಿ ಶ್ರೀಮಠಕ್ಕೆ ತಲುಪಿತು. ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರ
ಅಧ್ಯಕ್ಷತೆಯಲ್ಲಿ ಜರುಗಿದ ಜಾತ್ರಾ ಉತ್ಸವದಲ್ಲಿ ಮಠದ ಉಸ್ತುವಾರಿ ಮುರುಘೇಶ ವಿರಕ್ತಮಠ, ಸಂಗಯ್ಯ ವಿರಕ್ತಮಠ, ವಿಶ್ವನಾಥ ವಿರಕ್ತಮಠ, ಶರಬಯ್ಯ ಪುರಾಣಿಕಮಠ ನೇತೃತ್ವ ವಹಿಸಿದ್ದರು. ವಿಶ್ವನಾಥ ವಿರಕ್ತಮಠ ಕಾರ್ಯಕ್ರಮ ನಡೆಸಿಕೊಟ್ಟರು.