Advertisement

ಮೂಲಸೌಕರ್ಯವಿಲ್ಲದೆ ಸಂಚಾರ ದಟ್ಟಣೆ ಸಮಸ್ಯೆ

11:43 AM Mar 24, 2017 | |

ವಿಧಾನಪರಿಷತ್ತು: ರಾಜಧಾನಿಯ ಟ್ರಾಫಿಕ್‌ ಸಮಸ್ಯೆಗೆ ಮೂಲಸೌಕರ್ಯಗಳ ಕೊರತೆಯೇ ಪ್ರಮುಖ ಕಾರಣ. ಈಗಿರುವ ಮೂಲಸೌಕರ್ಯಗಳ ಜೊತೆಗೆ ನಗರದ ವಾಹನಗಳು ಹಾಗೂ ಸಂಚಾರ ದಟ್ಟಣೆಯನ್ನು ನಿಭಾಯಿಸುವುದು ಕಷ್ಟಸಾಧ್ಯ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

Advertisement

ಪ್ರಶ್ನೋತ್ತರ ಅವಯಲ್ಲಿ ಕಾಂಗ್ರೆಸ್‌ನ ಡಾ. ಜಯಾಮಾಲ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಜಗತ್ತಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರ, ವಿಶ್ವದ ಡೈನಾಮಿಕ ನಗರ ಎಂಬ ಖ್ಯಾತಿ ಬೆಂಗಳೂರಿಗಿದ್ದರೂ, ಟ್ರಾಫಿಕ್‌ ಸಮಸ್ಯೆ, ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ,” ಎಂದು ಹೇಳಿದರು. 

“ನಗರದಲ್ಲಿ 2003ರಲ್ಲಿ 19 ಲಕ್ಷ ನೊಂದಾಯಿತ ವಾಹನಗಳಿದ್ದವು. ಈಗ 66 ಲಕ್ಷ ವಾಹನಗಳಿವೆ. ವಾಹನಗಳ ಹೆಚ್ಚಳಕ್ಕೆ ಅನುಗುಣವಾಗಿ ಸಂಚಾರ ಮೂಲಸೌಕರ್ಯಗಳು ಹೆಚ್ಚಾಗಿಲ್ಲ. ಅದು ಎಷ್ಟಿತ್ತೋ, ಅಷ್ಟೇ ಇದೆ. ಒಂದು ವೇಳೆ ಹೆಚ್ಚಾಗಿದ್ದರೂ ಆದು ಸುಮಾರು ಶೇ.20ರಷ್ಟು ಮಾತ್ರ. ಈಗಿರುವ ಮೂಲಸೌಕರ್ಯವಿಟ್ಟುಕೊಂಡು 66 ಲಕ್ಷ ವಾಹನಗಳು ಮತ್ತು ಸಂಚಾರ ದಟ್ಟಣೆ ನಿಭಾಯಿಸುವುದು ಕಷ್ಟ,” ಎಂದರು. 

ನಿಯಮ ಉಲ್ಲಂ ಸಿದವರಿಂದ 61 ಕೋಟಿ ವಸೂಲಿ: ನಗರಕ್ಕೆ ಒಟ್ಟು ಮಂಜೂರಾದ 5,500 ಸಂಚಾರ ಪೊಲೀಸ್‌ ಹುದ್ದೆಗಳ ಪೈಕಿ 3,400 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.ಖಾಲಿ ಇರುವ 2,100 ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಆದೇಶ ನೀಡಲಾಗುವುದು. ಈ ವರ್ಷ ಸಂಚಾರ ನಿಯಮಗಳ ಉಲ್ಲಂಘನೆಯ 91 ಲಕ್ಷ ಕೇಸ್‌ಗಳನ್ನು ದಾಖಲಿಸಿದ್ದು, 61 ಕೋಟಿ ರೂ. ದಂಡ ವಸೂಲಾಗಿದೆ ಎಂದು ತಿಳಿಸಿದರು. 

ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಕೆ
ವಿಧಾನಸಭೆ: ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.  ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಗೋಪಾಲಯ್ಯ ಪ್ರಶ್ನೆಗೆ ಲಿಖೀತ ಉತ್ತರ ನೀಡಿರುವ ಅವರು, 2016-17 ನೇ ಸಾಲಿನಲ್ಲಿ ಬೆಂಗಳೂರಿಗೆ 80,207 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

Advertisement

2015-16 ನೇ ಸಾಲಿನಲ್ಲಿ 1,20903 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರು. ಹಿಂದಿನ  ವರ್ಷಕ್ಕೆ ಹೋಲಿಸಿದರೆ, ಶೇಕಡಾ 33 ರಷ್ಟು ವಿದೇಶಿ ಪ್ರವಾಸಿಗರ ಭೇಟಿ ಕಡಿಮೆಯಾಗಿದೆ. ಇದಕ್ಕೆ ಕಾರಣ ತಿಳಿದು ಬಂದಿಲ್ಲ. ಬೆಂಗಳೂರಿಗೆ ವಿದೇಶಿ ಪ್ರವಾಸಿಗರನ್ನುಸೆಳೆಯಲು ಬೆಂಗಳೂರು ಟೂರಿಸಂ ಸಲಹಾ ಸಮಿತಿ ರಚಿಸಲಾಗಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next