Advertisement
ಕಲ್ಸಂಕವಾಗಿ ಅಂಬಾಗಿಲಿನ ಕಡೆ ಹಾದು ಹೋಗುವ ರಸ್ತೆಯ ದಾರಿ ದೀಪಗಳು ಪರ್ಯಾಯ ಸಮಯದಲ್ಲಿ ನಿರ್ವಹಣೆ ಆಗಬೇಕಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಕೆಲಸಗಳು ಕಂಡಿಲ್ಲ. ಕಲ್ಸಂಕ-ಅಂಬಾಗಿಲಿನ ಭಾಗದಲ್ಲಿ ದಿನನಿತ್ಯ ರಾತ್ರಿ ಹೊತ್ತು ಕತ್ತಲಿನಿಂದಲೇ ಜನರು ಸಂಚರಿಸುವಂತಾಗಿದೆ. ಈ ಸಮಸ್ಯೆಗೆ ಪರಿಹಾರ ಇಂದಲ್ಲ ನಾಳೆ ಆಗಬಹುದೆಂಬ ನಿರೀಕ್ಷೆಯಲ್ಲೆ ಜನ ಕಾಲ ಕಳೆಯುವಂತಾಗಿದ್ದು ಆದರೆ ಇಲ್ಲಿಯವರೆಗೆ ಯಾವುದೇ ಕ್ರಮಗಳು ಕೈಗೊಳ್ಳದಿರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತಾಗಿದೆ.
ನಗರ ಸಭೆಯ ವ್ಯಾಪ್ತಿಯಲ್ಲಿ ಒಟ್ಟು 17 ಸಾವಿರಕ್ಕೂ ಮಿಕ್ಕ ಬೀದಿ ದೀಪಗಳಿದ್ದು ಈಗ ಒಂದೊಂದೇ ದೀಪಗಳು ನಿರ್ವಹಣೆ ಇಲ್ಲದೆ ನಿಷ್ಕ್ರಿಯಗೊಳ್ಳುತ್ತಿದೆ. ಜೋಡುಕಟ್ಟೆಯಿಂದ ಬ್ರಹ್ಮಗಿರಿ ಮಾರ್ಗದಲ್ಲಿರುವ ಕೆಲ ದೀಪಗಳು ಈಗಾಗಲೇ ನಿಷ್ಕ್ರಿಯಗೊಂಡಿವೆ. ಇಲ್ಲಿ ಅಜ್ಜರಕಾಡು ಪಾರ್ಕ್, ಟೌನ್‌ಹಾಲ್, ಸರಕಾರಿ ಕ್ರೀಡಾಂಗಣ ಸೇರಿದಂತೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ಮಂದಿಗೆ ಇದರಿಂದ ಸಮಸ್ಯೆ ಉಂಟಾಗಿದೆ. ಜಿಲ್ಲಾಸ್ಪತ್ರೆ ಸೇರಿದಂತೆ ಸುತ್ತಲ ಪ್ರದೇಶದ ಜನರಿಗೆ ಸಮಸ್ಯೆ ಬ್ರಹ್ಮಗಿರಿ- ಜೋಡುಕಟ್ಟೆ ಮಾರ್ಗದಲ್ಲಿ ಜಿಲ್ಲಾಸ್ಪತ್ರೆ, ಅಜ್ಜರಕಾಡು ಸಾರ್ವಜನಿಕ ಪಾರ್ಕ್‌ಗಳಿಗೆ ದಿನನಿತ್ಯ ಸಹಸ್ರಾರು ಮಂದಿ ಭೇಟಿ ಕೊಡುತ್ತಾರೆ ಕಳೆದ 2 ರಿಂದ 3 ತಿಂಗಳು ಇಲ್ಲಿನ ಕೆಲವು ದಾರಿ ದೀಪಗಳು ಉರಿಯದೆ ಜನರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಲಿಖೀತ ರೂಪದಲ್ಲೂ ದೂರು ನೀಡಿದ್ದು ಪ್ರಯೋಜ ಮಾತ್ರ ಇಲ್ಲಿಯವರೆಗೆ ಕಂಡಿಲ್ಲ.
-ರಶ್ಮಿ ಚಿತ್ತರಂಜನ್ ಭಟ್, 33ನೇ ಅಜ್ಜರಕಾಡು ನಗರಸಭೆ ಸದಸ್ಯೆ
Related Articles
ಉಡುಪಿ ಪರ್ಯಾಯ ಸಮಯದಿಂದಲೂ ಈ ಭಾಗದಲ್ಲಿ ಬೀದಿ ದೀಪದ ಸಮಸ್ಯೆ ಇದ್ದು, ಜನರಿಂದಲೂ ಅನೇಕ ದೂರುಗಳು ಸಲ್ಲಿಕೆ ಆಗಿವೆ. ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು ವಾರದೊಳಗೆ ಸರಿಪಡಿಸುವ ಭರವಸೆ ನೀಡಿದ್ದಾರೆ.
-ಪ್ರಭಾಕರ್ ಪೂಜಾರಿ, ಗುಂಡಿಬೈಲು
27ನೇ ಗುಂಡಿಬೈಲು ನಗರಸಭೆ ಸದಸ್ಯ
Advertisement