Advertisement

ಸಮ್ಮೇಳನಕ್ಕೆ ಹಣ ಬಿಡುಗಡೆ ಆಗದಿರುವುದೇ ಸಮಸ್ಯೆ

10:34 PM Jan 25, 2020 | Team Udayavani |

ಕಲಬುರಗಿ: ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹನ್ನೊಂದು ದಿನಗಳು ಬಾಕಿ ಉಳಿದಿದ್ದು, ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಆಗದಿರುವುದು ಸಮಸ್ಯೆಯಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಹಾಗೂ ಅಖೀಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ವೀರಭದ್ರ ಸಿಂಪಿ ವಿಷಾದ ವ್ಯಕ್ತಪಡಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನಕ್ಕೆ 10 ಕೋಟಿ ರೂ.ಬಿಡುಗಡೆಯಾಗಲಿದೆ. ಸಿಎಂ ಅವರು ಅನುಮೋದನೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೆರಡು ದಿನದೊಳಗೆ ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ ಎಂದರು. ಸರ್ಕಾರದ ಅನುದಾನ ಬಾರದ ಹಿನ್ನೆಲೆಯಲ್ಲಿ ಕಲಾವಿದರು-ಸಾಂಸ್ಕೃತಿಕ ತಂಡಗಳಿಗೆ ಹಣ ನೀಡಲಾಗುತ್ತಿಲ್ಲ. ಅಂದಾಜು ಎರಡು ಕೋಟಿ ರೂ.ಗಳನ್ನು ಕಲಾವಿದರಿಗೆ ನೀಡಬೇಕಿದೆ.

ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಡಾ|ಮನು ಬಳಿಗಾರ ಅವರು 10 ಲಕ್ಷ ರೂ.ಗಳನ್ನು ಜಿಲ್ಲಾ ಕಸಾಪಗೆ ಬಿಡುಗಡೆ ಮಾಡಿದ್ದಾರೆ. ಇದು ಕೆಲವು ಸಣ್ಣ-ಪುಟ್ಟ ಚಟುವಟಿಕೆಗಳಿಗೆ ಸಹಾಯಕವಾಗಿದೆ. ಅದೇ ರೀತಿ, ದೇಣಿಗೆ ಸಂಗ್ರಹವೂ ನಡೆದಿದೆ ಎಂದು ವಿವರಿಸಿದರು. ಸಮ್ಮೇಳನದ ಮೆರವಣಿಗೆ ಡಾ|ಎಸ್‌.ಎಂ ಪಂಡಿತ ರಂಗಮಂದಿರದಿಂದ ಆರಂಭವಾಗುತ್ತಾದರೂ ವಿದ್ಯಾರ್ಥಿಗಳೆಲ್ಲ ಮಾರ್ಗದ ನಡುವೆ ಚಂದ್ರಕಾಂತ ಪಾಟೀಲ್‌ ಶಾಲಾ ಆವರಣದಲ್ಲಿ ಬಂದು ಸೇರುತ್ತಾರೆ.

ಮೆರವಣಿಗೆ ಮಾರ್ಗ ಆರು ಕಿ.ಮೀ ಆಗುವುದರಿಂದ ನಡುವೆ ಮೂರು ಕಿ.ಮೀ ಅಂತರದಲ್ಲಿ ಎಲ್ಲರೂ ಬಂದು ಸೇರಲಿದ್ದಾರೆ. ಸಮ್ಮೇಳನ ಯಶಸ್ವಿಯಾಗಲಿದೆ. ಇದಕ್ಕೆ ಸ್ಥಳೀಯ ಮಣ್ಣಿನ ಗುಣಧರ್ಮ ಅಂತಹದ್ದು. ಸಮ್ಮೇಳನಾಧ್ಯಕ್ಷ ಡಾ| ಎಚ್‌.ಎಸ್‌.ವೆಂಕಟೇಶಮೂರ್ತಿ ಅವರು ಫೆ.4ರಂದು ಬೆಳಗ್ಗೆ ರೈಲಿನ ಮೂಲಕ ಆಗಮಿಸುವರು ಎಂದು ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈತನಕ 21,030 ಪ್ರತಿನಿ ಧಿಗಳ ನೋಂದಣಿಯಾಗಿದೆ. ಇದು ಹಿಂದಿನ ಸಮ್ಮೇಳನಗಳ ಎಲ್ಲ ದಾಖಲೆ ಮುರಿದಿದೆ. ಇದರಲ್ಲಿ 15,178 ಪುರುಷರು ಮತ್ತು 5,852 ಮಹಿಳೆಯರು ಸೇರಿದ್ದಾರೆ.
-ವೀರಭದ್ರ ಸಿಂಪಿ, ಕನ್ನಡ ಸಾಹಿತ್ಯ ಸಮ್ಮೇಳನದ ಪ್ರ.ಕಾರ್ಯದರ್ಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next