Advertisement
ಇಲ್ಲಿ ಫ್ಲೈಓವರ್ ನಿರ್ಮಿಸಲಾಗಿದೆ (ಇದು ನಗರದ ಮೊದಲ ಸೇತುವೆ). ನೆಲದಡಿ ಮೆಟ್ರೋ ಮಾರ್ಗ ಹಾದುಹೋಗಿದೆ. ಬಿಎಂಟಿಸಿಯಿಂದ ಅತಿ ಹೆಚ್ಚು ಬಸ್ ಸೇವೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ, ಸಂಚಾರ ದಟ್ಟಣೆ ಸಮಸ್ಯೆ ಮಾತ್ರ ಹಾಗೇ ಇದೆ. ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ, ಸಂಚಾರ ಪೊಲೀಸರು ಕೂಡ ಅಸಹಾಯಕರಾಗಿದ್ದಾರೆ. ಪರಿಣಾಮ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವುದು ತಪ್ಪಿಲ್ಲ.
Related Articles
Advertisement
ಸಮಸ್ಯೆಯ ಮೂಲ ಇಲ್ಲಿದೆ: ಕಿರಿದಾದ ರಸ್ತೆಗಳು, ಹೆಚ್ಚು ವಾಹನಗಳಿಂದ ಮಾತ್ರವಲ್ಲ; ಸಾರ್ವಜನಿಕರ ಓಡಾಟದಿಂದಲೂ ಸಂಚಾರದಟ್ಟಣೆ ಉಂಟಾಗುತ್ತಿದೆ. ಪಾದಚಾರಿಗಳಿಗೆ ಪ್ರತ್ಯೇಕ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ. ಆದರೆ, ಸಾರ್ವಜನಿಕರು ಅವುಗಳನ್ನು ಬಳಸದೆ ಏಕಾಏಕಿ ವಾಹನಗಳ ಮಧ್ಯೆಯೇ ನುಗ್ಗುತ್ತಾರೆ. ಈ ಕುರಿತು ಧ್ವನಿ ವರ್ಧಕಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ.
ಈ ಬಗ್ಗೆ ತಿಳಿವಳಿಕೆ ನೀಡಿದರೆ ಸುರಂಗ ಮಾರ್ಗದ ಸ್ವಚ್ಛತೆ ಹಾಗೂ ಸುರಕ್ಷತೆ ಬಗ್ಗೆ ಪ್ರಶ್ನಿಸುತ್ತಾರೆ. ಇನ್ನು ತರಾಕಾರಿಗಳನ್ನು ಹೊತ್ತು ತರುವ ವಾಹನಗಳ ಮಾಲಿಕರು ಮಾರುಕಟ್ಟೆಯ ಕಟ್ಟಡಗಳಲ್ಲಿ ನಿಲ್ಲಿಸಿ ವ್ಯಾಪಾರ ನಡೆಸಬೇಕು. ಆದರೆ, ರಸ್ತೆ ಬದಿಯೇ ನಿಲ್ಲಿಸಿ ವ್ಯಾಪಾರ ಮಾಡುತ್ತಾರೆ. ಅಂತಹ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದರೆ ಅಮಾಯಕರು, ಕಾರ್ಮಿಕ ವರ್ಗದವರ ಮೇಲೆ ದೌರ್ಜನ್ಯ ಮಾಡುತ್ತಿರಾ ಎಂದೆಲ್ಲ ನಿಂದಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸಂಚಾರ ಪೊಲೀಸರು.
ಸಿದ್ದಿಕಟ್ಟೆಯಾಯ್ತು ಸಿಟಿ ಮಾರ್ಕೆಟ್!: ಶತಮಾನಗಳ ಹಿಂದೆ ಸಿದ್ಧಿಕಟ್ಟೆ ಮಾರುಕಟ್ಟೆ ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶದಲ್ಲಿ ಸಂತೆ ನಡೆಯುತ್ತಿತ್ತು. ನಂತರದ ದಿನಗಳಲ್ಲಿ ಕೃಷ್ಣರಾಜ ಮಾರುಕಟ್ಟೆಯಾಗಿ ಬದಲಾಯಿತು. ಈ ಮೊದಲು ಜನಸಂದಣಿ ಕೇಂದ್ರವಾಗಿದ್ದ ಈ ಪ್ರದೇಶ, ಇತ್ತೀಚಿನ ವರ್ಷಗಳಲ್ಲಿ ವಾಹನ ಸಂಚಾರ ದಟ್ಟಣೆಯ ಕೇಂದ್ರವಾಗಿ ಪರಿವರ್ತನೆಯಾಗಿದೆ. ಸಾಮಾನ್ಯ ವಾಹನಗಳಿಗಿಂತ ವಾಣಿಜ್ಯೋದ್ಯಮದ ಭಾರೀ ವಾಹನಗಳು ಹೆಚ್ಚಾಗಿ ಈ ಮಾರ್ಗದಲ್ಲಿ ಸಂಚಾರ ಮಾಡುವುದರಿಂದ ಸಂಚಾರ ದಟ್ಟಣೆ ಜತೆಗೆ ಶಬ್ದಮಾಲಿನ್ಯ ಕೂಡ ಅಧಿಕವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇತಿಹಾಸ ತಜ್ಞರು.
ಕೇವಲ 10-14 ಕಿ.ಮೀಟರ್ ವೇಗ: ಈ ರಸ್ತೆಗಳಲ್ಲೇ ಪಾದಚಾರಿ ಮಾರ್ಗದಲ್ಲೇ ಕೆಲ ವ್ಯಾಪಾರಿಗಳು ಅಂಗಡಿಗಳನ್ನು ತೆರೆದಿದ್ದು, 3-4 ಅಡಿಗಳಷ್ಟು ರಸ್ತೆ ಜಾಗವನ್ನು ಬಳಸಿಕೊಂಡಿದ್ದಾರೆ. ವ್ಯಾಪಾರಿಗಳನ್ನು ತೆರವುಗೊಳಿಸಿ ಎಂದು ಬಿಬಿಎಂಪಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಖುದ್ದು ಸಂಚಾರ ಪೊಲೀಸರು ತೆರವುಗೊಳಿಸಲು ಮುಂದಾದರೆ, ರಾಜಕೀಯ ಪ್ರಭಾವ ಎದುರಾಗುತ್ತದೆ. ಪೀಕ್ ಅವರ್‌ನಲ್ಲಿ ಇದು ಇನ್ನಷ್ಟು ಕ್ಷಿಣ.
ಶಬ್ದಮಾಲಿನ್ಯ ಜತೆಗೆ ಪರಿಸರ ಮಾಲಿನ್ಯ: ಈ ಜಂಕ್ಷನ್‌ಗಳಲ್ಲಿ ವಾಹನಗಳು ಉಗುಳುವ ಹೊಗೆಯ ಜತೆಗೆ ಕಸದ ವಾಸನೆಯಿಂದ ಈ ಮಾರ್ಗದಲ್ಲಿ ಸಾರ್ವಜನಿಕ ಓಡಾಡವೇ ದುಸ್ತರವಾಗಿದೆ. ತಡರಾತ್ರಿ ತರಕಾರಿ ಹೊತ್ತು ತರುವ ವಾಹನಗಳು ಸಿಗ್ನಲ್ ಸಮೀಪವೇ ತಾಜ್ಯ ಎಸೆದಿರುತ್ತಾರೆ. ಮತ್ತೂಂದೆಡೆ ಬಿಬಿಎಂಪಿಯ ಕಸದ ಲಾರಿಗಳು ರಸ್ತೆ ಬದಿಯೇ ನಿಲ್ಲುವುದರಿಂದಲೂ ಕೆಟ್ಟವಾಸನೆ ಬರುತ್ತದೆ.
ಪರ್ಯಾಯವೇನು?* ವಾಹನ ಸವಾರರು ಶಿಸ್ತುಬದ್ಧವಾಗಿ ವಾಹನ ಚಾಲನೆ ಮಾಡಬೇಕು.
* ಪಾದಚಾರಿ ಮಾರ್ಗ ತೆರವುಗೊಳಿಸಿ, ಸುರಂಗ ಮಾರ್ಗ ಬಳಸಲು ಸೂಚಿಸಬೇಕು. ಇದಕ್ಕೂ ಮುನ್ನ ಸುರಂಗಗಳ ನಿರ್ವಹಣೆ ಸಮರ್ಪಕವಾಗಬೇಕು.
* ರಸ್ತೆ ಬದಿಯಲ್ಲಿ ನಡೆಯುತ್ತಿರುವ ಮಾರುಕಟ್ಟೆಯನ್ನು ಸಂಪೂರ್ಣವಾಗಿ ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರಿಸಬೇಕು. ಸುರಂಗ ಮಾರ್ಗದಲ್ಲಿ ಸ್ವಚ್ಛತೆ ಇರುವುದಿಲ್ಲ. ಹೀಗಾಗಿ ವಾಹನಗಳ ಮಧ್ಯೆಯೇ ರಸ್ತೆ ದಾಟುತ್ತಾರೆ. ಸಮೀಪದಲ್ಲೇ ಬಸ್ ನಿಲ್ದಾಣ ಇದ್ದು, ಅದನ್ನು ಬೇರೆಡೆ ಸ್ಥಳಾಂತರಿಸಿದಾಗ ಮಾತ್ರ ಸಂಚಾರ ದಟ್ಟಣೆ ಜತೆಗೆ ಮಾಲಿನ್ಯ ಕೂಡ ಕಡಿಮೆ ಆಗುತ್ತದೆ.
-ಪ್ರೊ.ಎಂ.ಎನ್.ಶ್ರೀಹರಿ, ಸಂಚಾರ ತಜ್ಞ ಅವಿನ್ಯೂ ರಸ್ತೆ, ಟಿಪ್ಪು ಸುಲ್ತಾಲ್, ಮೈಸೂರು ರಸ್ತೆ ಸೇರಿ ಐದು ರಸ್ತೆಗಳು ಕೂಡುವ ಜಂಕ್ಷನ್‌ನಲ್ಲಿ ಮೊದಲಿನಿಂದಲೂ ಜನಸಂದಣಿ ಹೆಚ್ಚು. ಜತೆಗೆ ಭಾರೀ ವಾಹನಗಳ ಓಡಾಟದಿಂದ ಸಂಚಾರ ದಟ್ಟಣೆ ಜತೆಗೆ ಶಬ್ಧ ಮಾಲಿನ್ಯ ಕೂಡ ಅಧಿಕ.
-ಎಸ್.ಕೆ.ಅರುಣಿ, ಐಸಿಎಚ್‌ಆರ್, ಬೆಂಗಳೂರು * ಮೋಹನ್ ಭದ್ರಾವತಿ