Advertisement
ಖಾಸಗಿ ವೈದ್ಯರೆಲ್ಲ ಮುಷ್ಕರ ಕೈಗೊಂಡ ಪರಿಣಾಮ ರೋಗಿಗಳು ವೈದ್ಯಕೀಯ ಸೇವೆ ಸಿಗದೇ ಪರದಾಡಿದರು. ಆಸ್ಪತ್ರೆಗಳ ಓಪಿಡಿ ಬೀಕೋ ಎನ್ನುತ್ತಿದ್ದವು. ಮುಷ್ಕರದಲ್ಲಿ ವೈದ್ಯಕೀಯ ಸಂಸ್ಥೆಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ದಂತ ವೈದ್ಯರ ಒಕ್ಕೂಟ, ಪ್ರಯೋಗಾಲಯಗಳು, ಕರ್ನಾಟಕ ಖಾಸಗಿ ಅಸ್ಪತ್ರೆಗಳ ಒಕ್ಕೂಟ, ವಿವಿಧ ತಜ್ಞ ವೈದ್ಯರ ಸಂಘಟನೆಗಳು, ನರ್ಸಿಂಗ್ ಹೋಮ್ಸ್ ಅಸೋಶಿಯೇಶನ್, ರಕ್ತನಿಧಿಗಳು ಸೇರಿದಂತೆ ಇತರರೆಲ್ಲರೂ ಪಾಲ್ಗೊಂಡಿದ್ದರಿಂದ ಖಾಸಗಿ ಆಸ್ಪತ್ರೆಗಳು ರೋಗಿಗಳು ಇಲ್ಲದೇ ಭಣಗುಡುತ್ತಿದ್ದವು.
ಸಾರ್ವಜನಿಕ ಆಸ್ಪತ್ರೆ, ಸಂಗಮೇಶ್ವರ್ ಆಸ್ಪತ್ರೆ, ಯುನೈಟೆಡ್ ಆಸ್ಪತ್ರೆ ಸೇರಿದಂತೆ ಬಹುತೇಕ ಜಿಲ್ಲೆಯಾದ್ಯಂತ ಇರುವ ಎಲ್ಲ 700 ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದವು. ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯ ನೇತೃತ್ವದಲ್ಲಿ ಖಾಸಗಿ ವೈದ್ಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಿದರಲ್ಲದೇ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಭಾರತೀಯ ವೈದ್ಯ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಡಾ| ಕಿರಣ ದೇಶಮುಖ, ಹಿರಿಯ ವೈದ್ಯರಾದ ಡಾ| ಎಸ್. ಎಸ್. ಪಾಟೀಲ, ಡಾ| ಇಂದಿರಾ ಶಕ್ತಿ, ಡಾ| ಜಗನ್ನಾಥ ಬಿಜಾಪುರ, ಡಾ| ಎನ್.ಜಿ ಗಚ್ಚಿನಮನಿ, ಡಾ| ಆಂದೋಲಾ, ಡಾ| ಸಂತೋಷ ಮಂಗಶೆಟ್ಟಿ, ಡಾ| ಅಲೋಕ ಸಿ. ಪಾಟೀಲ ರೇವೂರ, ಡಾ| ಸಚೀನ ಶಹಾ ಇದ್ದರು.
Related Articles
Advertisement
ಭಾರತೀಯ ವೈದ್ಯಕೀಯ ಸಂಘದೊಂದಿಗೆ ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸಿದ ಅನೇಕ ವೈದ್ಯರು ತಮ್ಮ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಎಸಿ ಡಾ| ಸುಶೀಲಾ ಅವರಿಗೆ ಸಲ್ಲಿಸಿದರು.
ಹಿರಿಯ ವೈದ್ಯ ಡಾ| ಎಸ್.ಬಿ. ಸುಂಕದ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ಸದಾನಂದ ಬೂದಿ, ಕುಟುಂಬ ವೈದ್ಯರ ಸಂಘದ ಅಧ್ಯಕ್ಷ ಡಾ| ಮೋಹನರೆಡ್ಡಿ ರುದ್ರವಾರ, ಡಾ| ಶ್ರೀನಿವಾಸರೆಡ್ಡಿ ಕೋಲಕುಂದಾ, ಡಾ| ಶಿವಶಂಕರ ತಳ್ಳಳ್ಳಿ, ಡಾ| ಉದಯಕುಮಾರ ಶಹಾ, ಡಾ| ಶರತಕುಮಾರ ದೇಸಾಯಿ, ನಿಸರ್ಗ ಆಸ್ಪತ್ರೆ ನಿರ್ದೇಶಕ ಡಾ| ಶ್ರೀನಿವಾಸ ಮೊಕದಮ್, ಡಾ| ರಾಜಕುಮಾರ ಬಿರಾದಾರ, ಡಾ| ಎಸ್.ಎಚ್. ಲಗಶೆಟ್ಟಿ ಇವಣಿ, ಡಾ| ಜಗನ್ನಾಥ ಗಡ್ಡದ ಡಾ| ಶ್ರೀನಿವಾಸ ರಂಜೋಳಕರ್, ಡಾ| ಸಲ್ಲಾವುದ್ದಿನ್, ಡಾ| ಸಂಗಪ್ಪ ಮುಧೋಳ, ಡಾ| ಸಂತೋಷ ಚವ್ಹಾಣ, ಡಾ| ಮೋಯಿನ್, ಸಿದ್ಧರಾಜ ತೊಟೇಂದ್ರ ಪಾಲ್ಗೊಂಡಿದ್ದರು.