Advertisement

ರೇಣುಕಾಚಾರ್ಯರು ಬೋಧಿಸಿದ ತತ್ವಗಳು ವಿಶ್ವಕ್ಕೆ ಮಾದರಿ

04:00 PM Mar 27, 2018 | |

ಆಳಂದ: ಧರ್ಮ ಸ್ಥಾಪಕ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮಾನವೀಯ ಮೌಲ್ಯಉಳ್ಳ ತತ್ವಗಳು ವಿಶ್ವಕ್ಕೆ
ಮಾದರಿಯಾಗಿವೆ. ಅವುಗಳನ್ನು ಆಚರಣೆಗೆ ತರಬೇಕು ಎಂದು ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು ಹೇಳಿದರು.

Advertisement

ಪಟ್ಟಣದ ಎ.ವಿ. ಪಾಟೀಲ ಕಲ್ಯಾಣ ಮಂಟಪದಲ್ಲಿ ವೀರಮಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಹಾಗೂ ವೀರಶೈವ ಲಿಂಗಾಯತ ಧರ್ಮ ಸಂಘಟನೆಗಾಗಿ ಗುರು ವಿರಕ್ತರ ಸದ್ಭಾವನಾ ಸಮಾವೇಶದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು. 

ರೇಣುಕರು ಯಾವುದೇ ಜಾತಿ, ಮಥ ಮಂಥವನ್ನು ನೋಡದೆ ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ನೀಡಿರುವುದು ದೇಶ ಸಮಾಜಕ್ಕೆ ಅವರು ಮರೆಯಲಾರದ ಕೊಡುಗೆ.

ಆದರೆ ಈಗ ಮೂಗು ಕೊಟ್ಟವರನ್ನು ಬಿಟ್ಟು ಮೂಗುತಿ ಕೊಟ್ಟವರನ್ನೇ ಕೈಗೆತ್ತಿಕೊಂಡು ಜಾತಿಗೆ ಜೈಕಾರ ಹಾಕಿ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರು ವಿರಕ್ತರು ಒಂದಾಗಿದ್ದು, ಧರ್ಮ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು. ಕಡಗಂಚಿ ಕಟ್ಟಿಮಠದ ಶ್ರೀ ವೀರಭದ್ರ ಶಿವಾಚಾರ್ಯರು, ಮಾದನಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ವಿ.ಕೆ. ಸಲಗರ ಮಠದ ದ್ವಿತೀಯ ಸಾಂಬ ಶಿವಯೋಗಿಗಳು, ಸಂಸ್ಥಾನ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ವೀರಶೈವ ಧರ್ಮ ಸಂಕಷ್ಟದಲ್ಲಿದೆ. ಇಂಥ ಪರಿಸ್ಥಿತಿಯಲ್ಲಿ ಧರ್ಮೀಯರು ಗಟ್ಟಿಯಾಗಿ ನಿಂತುಕೊಳ್ಳಬೇಕು. ಧರ್ಮ ಪ್ರಚಾರದಲ್ಲಿ ತೊಡಗಬೇಕು ಎಂದು ಕರೆ ನೀಡಿದರು. 

ಕಾರ್ಯಕ್ರಮ ಉದ್ಘಾಟಿಸಿದ ವೀರಶೈವ ಲಿಂಗಾಯತ ಸಮನ್ವಯ ಸಮಿತಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಮಾತನಾಡಿ, ಹಿಂದೂ ಧರ್ಮಕ್ಕೆ ವೀರಶೈವ ಧರ್ಮ ಆಧಾರಸ್ತಂಭವಾಗಿದೆ. ಪ್ರಾಚೀನ ಪರಂಪರೆ ಮಾನವ ಕಲ್ಯಾಣ ಬಯಸುವ ವೀರಶೈವ ಧರ್ಮವನ್ನು ದುರುದ್ದೇಶದಿಂದ ಒಡೆದಾಳಲು ಮುಂದಾಗುತ್ತಿದ್ದಾರೆ. ಮತ್ತೆ ಧರ್ಮ ಒಗ್ಗೂಡಿಸುವ ಕೆಲಸಕ್ಕೆ ಎಲ್ಲರು ಕೈಜೋಡಿಸಬೇಕು
ಎಂದು ಹೇಳಿದರು.

Advertisement

ಕೇಸರ ಜವಳಗಾ ವೀರಂತೇಶ್ವರ ಮಹಾಸ್ವಾಮಿಗಳು, ಚಿನ್ಮಯಗಿರಿಯ ವೀರಮಹಾಂತ ಶಿವಾಚಾರ್ಯರು, ಕಿಣ್ಣಿಸುಲ್ತಾನ ಮಠದ ಶಿವಶಾಂತಲಿಂಗ ಶಿವಾಚಾರ್ಯರು, ನಿಲೂರದ ಶರಣಯ್ಯ ಸ್ವಾಮಿಗಳು ಮತ್ತು ಮುಖಂಡ ಸಂಗನಬಸವ ಪಾಟೀಲ, ಎಂ.ಸಿ. ಸ್ವಾಮಿ, ಸಿದ್ರಾಮಯ್ಯ ಸ್ವಾಮಿ, ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಶಿವಯ್ಯ ಸ್ವಾಮಿ, ಅಧ್ಯಕ್ಷ ರುದ್ರಯ್ಯ ಎನ್‌. ಹಿರೇಮಠ ಕೊಡಲಹಂಗರಗಾ, ವಿರೂಪಾಕ್ಷಯ್ಯ ಸ್ವಾಮಿ ಹಳ್ಳಿಸಲಗರ, ಷಣ್ಮುಖಯ್ಯ ಸ್ವಾಮಿ, ಮಲ್ಲಯ್ಯ ಸ್ವಾಮಿ ಚೌಕಿಮಠ, ಶಿವಲಿಂಗಯ್ಯ ಸ್ವಾಮಿ ಹೆಬಳಿ, ನೂರಂದಯ್ಯ ಹೊದಲೂರ, ಸಂಗಮೇಶ ಸ್ವಾಮಿ ರುದ್ರವಾಡಿ, ಪಂಚಯ್ಯಸ್ವಾಮಿ ಹೊನ್ನಳ್ಳಿ, ರಾಚಯ್ಯಸ್ವಾಮ ತಡಕಲ್‌ ಇದ್ದರು. ನಾಗಲಿಂಗಯ್ಯ ಮಠಪತಿ ನಿರೂಪಿಸಿದರು. ಶಿವಕಾಂತಯ್ಯ ಸ್ವಾಮಿ ಸ್ವಾಗತಿಸಿದರು.  ಗವಾಯಿ ಮಹಾದೇವಪ್ಪ ಪೂಜಾರಿ ಸಂಗೀತ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next