Advertisement

ಶರತ್‌ ಪತ್ರಕ್ಕೆ ಪ್ರಧಾನಿ ಕಾರ್ಯಾಲಯ ಉತ್ತರ

06:45 AM Aug 11, 2017 | Team Udayavani |

ಶೌಚಾಲಯವಿಲ್ಲದ ಕುಂಬಳೆ ಪೇಟೆ
ಕುಂಬಳೆ: ಪ್ರತಿನಿತ್ಯ ಸಹಸ್ರಾರು ಮಂದಿ ಸಂಪರ್ಕಿಸುವ ಕುಂಬಳೆ ಪೇಟೆಯಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಾಲಯ ಇಲ್ಲ ಎಂಬ ದೂರನ್ನು ನಾಗರಿಕ ಶರತ್‌ ಎಂಬವರು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಗ್ರಾಮ ಪಂಚಾಯತ್‌ ತತ್‌ಕ್ಷಣ ಸ್ಪಂದಿಸಬೇಕೆಂದು ಪಂ. ಕಾರ್ಯದರ್ಶಿ ಅವರಿಗೆ ಪ್ರಧಾನಿ ಕಾರ್ಯಾಲಯದಿಂದ ಪತ್ರ ಬಂದಿದೆ.

Advertisement

ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಕುಂಬಳೆ ಪೇಟೆಯಲ್ಲಿ ಸಾವಿರಾರು ಮಂದಿ ನಿತ್ಯ ನೌಕರರು ಕೆಲಸ ನಿರ್ವಹಿಸುತ್ತಿರುವರು.ಅಲ್ಲದೆ ಕಾಸರಗೋಡು, ಮಂಗಳೂರು, ಬದಿಯಡ್ಕ, ಪೆರ್ಲ, ಪುತ್ತೂರು ಸಹಿತ ಅನೇಕ ಕಡೆಗಳಿಗೆ ತೆರಳುವ ಪ್ರಯಾಣಿಕರು ಕುಂಬಳೆ ಪೇಟೆಯನ್ನು ಆಶ್ರಯಿಸುತ್ತಾರೆ. ಆದರೆ ಪ್ರಾಥಮಿಕ ಅತ್ಯಗತ್ಯಕ್ಕೆ ಸಾರ್ವಜನಿಕ ಶೌಚಾಲಯ ಇಲ್ಲದೆ ಪರದಾಡುವ  ಪುರುಷರ ಮತ್ತು ಮಹಿಳೆಯರ ಸಹಿತ ಯಾತ್ರಾರ್ಥಿಗಳ ಸಂಕಷ್ಟವನ್ನು ವಿವರಿಸಿ ಜೂನ್‌ 11ರಂದು ಪ್ರಧಾನಿ ಅವರಿಗೆ ಶರತ್‌ ಪತ್ರ ಬರೆದಿದ್ದರು. ಇದೀಗ ಪ್ರಧಾನಿ ಕಾರ್ಯಾಲಯದಿಂದ ಪತ್ರಕ್ಕೆ ತತ್‌ಕ್ಷಣ ಸ್ಪಂದನೆ ದೊರಕಿದೆ. 

ಅಗತ್ಯ ತುರ್ತುಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರನ್ನು ಆಗ್ರಹಿಸಿರುವುದು ಭರವಸೆ ಮೂಡಿಸಿದೆ.  ಕೇರಳ ಸರಕಾರದ ಪಬ್ಲಿಕ್‌ ಗ್ರೀವೆನ್ಸ್‌ ವಿಭಾಗದಿಂದ  ಕುಂಬಳೆ ಗ್ರಾಮ ಪಂಚಾಯತ್‌ ಕಾರ್ಯದರ್ಶಿಯವರಿಗೆ ಪತ್ರ ಲಭಿಸಿದ್ದು ಕುಂಬಳೆ ಪೇಟೆಯ ಶೌಚಾಲಯ ಸಮಸ್ಯೆಗೆ ಶಾಶ್ವತ  ಪರಿಹಾರ ಕಾಣಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next