Advertisement

ರೋಮ್‌ ತಲುಪಿದ ಪ್ರಧಾನಿ

11:11 AM Oct 30, 2021 | Team Udayavani |

ರೋಮ್‌: ಜಿ20 ರಾಷ್ಟ್ರಗಳ ಸಮ್ಮೇಳನದಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇಟಲಿ ರಾಜಧಾನಿ ರೋಮ್‌ ತಲುಪಿದ್ದಾರೆ. ಕಳೆದ 12 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ರೋಮ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.

Advertisement

ತಮ್ಮ ಪ್ರವಾಸದ ಮೊದಲ ದಿನವೇ ಮೋದಿ ಅವರು ಯುರೋಪಿಯನ್‌ ಕೌನ್ಸಿಲ್‌ ಮತ್ತು ಯುರೋಪಿಯನ್‌ ಕಮಿಷನ್‌ನ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತ-ಐರೋಪ್ಯ ಬಾಂಧವ್ಯ ವೃದ್ಧಿ, ವ್ಯಾಪಾರ, ವಾಣಿಜ್ಯ, ಸಂಸ್ಕೃತಿ ಮತ್ತು ಪರಿಸರ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ.

ಅ.29ರಿಂದ 31ರವರೆಗೆ ಅವರು ರೋಮ್‌ ಮತ್ತು ವ್ಯಾಟಿಕನ್‌ ಸಿಟಿಯಲ್ಲಿರಲಿದ್ದಾರೆ. ಶನಿವಾರ ಮೋದಿ ವ್ಯಾಟಿಕನ್‌ ಸಿಟಿಗೆ ತೆರಳಿ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ:- ಮನುಷ್ಯ ಪ್ರಸಿದ್ದ ನಾಗಲು ವಿಶ್ವಾಸ ಗಳಿಸಿ: ಡಾ| ಶಿವಕುಮಾರ ಶ್ರೀ

ಗಾಂಧೀಜಿ ಪುತ್ಥಳಿಗೆ ನಮನ ರೋಮ್‌ ತಲುಪುತ್ತಿದ್ದಂತೆ ಪ್ರಧಾನಿ ಮೋದಿ ಅವರು ಮಹಾತ್ಮ ಗಾಂಧೀಜಿಯ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ರೋಮ್‌ ನಲ್ಲಿ ನನಗೆ ಮಹಾತ್ಮನಿಗೆ ನಮನ ಸಲ್ಲಿಸುವ ಅವಕಾಶ ದೊರೆಯಿತು. ಅವರ ಆದರ್ಶಗಳು ಜಗತ್ತಿನ ಕೋಟ್ಯಂತರ ಮಂದಿಗೆ ಧೈರ್ಯ ಮತ್ತು ಸ್ಫೂರ್ತಿ ನೀಡುವಂಥದ್ದು’ ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ, ಅಲ್ಲಿ ನೆರೆದಿದ್ದ ಭಾರೀ ಸಂಖ್ಯೆಯ ಭಾರತೀಯ ಸಮುದಾಯ, ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಾ ಮೋದಿ ಅವರನ್ನು ಸ್ವಾಗತಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next