Advertisement

ಏರ್‌ ಇಂಡಿಯಾ ವಿಭಜಿಸಿ ಮಾರಲು ಪ್ರಧಾನಿ ಒಲವು

03:05 AM Jul 10, 2017 | Team Udayavani |

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾವನ್ನು ಖಾಸಗಿ ಕಂಪನಿಗಳಿಗೆ ಮಾರಲು ಈಗಾಗಲೇ ಕೇಂದ್ರ ನಿರ್ಧರಿಸಿದೆ. 52 ಸಾವಿರ ಕೋಟಿ ರೂ. ಸಾಲದ ಸುಳಿಯಲ್ಲಿರುವ ಸರಕಾರಿ ಕಂಪನಿಯನ್ನು ವಿಭಜಿಸಿ ಮಾರಾಟಕ್ಕೆ ಖುದ್ದು ಪ್ರಧಾನಿ ಮೋದಿಯೇ ಇಂಗಿತ ವ್ಯಕ್ತಪಡಿಸಿದ್ದಾರೆ.

Advertisement

ಈ ಹಿಂದಿನ ಸಂದರ್ಭಗಳಲ್ಲಿ ಸರಕಾರವೇ ಅದರ ಮಾರಾಟಕ್ಕೆ ಮುಂದಾಗಿದ್ದರೂ ಆ ಪ್ರಯತ್ನ ಯಶಸ್ವಿಯಾ ಗಲಿಲ್ಲ. ಆದರೆ ಮೂಲಗಳು ದೃಢಪಡಿಸಿರುವ ಪ್ರಕಾರ, ಮಾರಾಟ ಪ್ರಕ್ರಿಯೆ ಸುಲಭವಾಗಿಯೇನೂ ಇಲ್ಲ. ಏರ್‌ಇಂಡಿಯಾದ 6 ಉಪ ವಿಭಾಗಗಳು ಹೊಂದಿರುವ ಆಸ್ತಿಯ ಮೌಲ್ಯ ಎಷ್ಟು, ಅದು ಎಲ್ಲೆಲ್ಲಿ ಯಾವ ರೀತಿಯಲ್ಲಿದೆ ಎಂಬು ದರ ದಾಖಲೀಕರಣ ಮತ್ತು ಮೌಲ್ಯ ಮಾಪನವೇ ಆಗಿಲ್ಲ ವೆಂದು ಹೇಳಲಾಗಿದೆ. ಸಂಪೂರ್ಣವಾಗಿ ಏರಿಂಡಿಯಾವನ್ನು ಮಾರಬೇಕೇ ಅಥವಾ ಕೊಂಚ ಪ್ರಮಾಣದಲ್ಲಿಯಾದರೂ ಬಂಡವಾಳ ಹೊಂದಿರಬೇಕೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಮತ್ತೂಂದೆಡೆ ಸಂಸ್ಥೆ ಹೊಂದಿರುವ ಅಮೂಲ್ಯ ಕಲಾಕೃತಿಗಳ ಬಗ್ಗೆ ಸಚಿವ ಜೇಟಿÉ ನೇತೃತ್ವದ ಉನ್ನತ ಮಟ್ಟದ ಸಮಿತಿ ನಿರ್ಧಾರ ಕೈಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next