ಪ್ರವಾಸಿ ಕಾರುಗಳ ಆವಶ್ಯಕತೆ ಇದೆ. ಆದರೆ, ಸರಕಾರ ಖಾಸಗಿ ಹಾಗೂ ಪ್ರವಾಸಿ ಕಾರುಗಳ ಮಾಲಕರಿಗೆ ಬಾಡಿಗೆ ಸರಿಯಾಗಿ ನೀಡುವುದಿಲ್ಲ ಎಂಬ ನೆಪವೊಡ್ಡಿ ಕೆಲವರು ಬಾಡಿಗೆಗೆ ಮುಂದಾಗದ ಹಿನ್ನೆಲೆಯಲ್ಲಿ ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆ ಕೆಲವು ಪ್ರವಾಸಿ, ಬಾಡಿಗೆ ಕಾರುಗಳನ್ನು ವಶಪಡಿಸಿಕೊಂಡಿದೆ.
Advertisement
ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ ಅವರು ಸುಮಾರು 20 ಕಾರುಗಳನ್ನು ‘ಅಗತ್ಯ ಬಳಕೆ ಕಾಯ್ದೆ’ಯನಿಯಮದಂತೆ ವಶಕ್ಕೆ ಪಡೆದು ಪ್ರಧಾನಿ ಕಾರ್ಯಕ್ರಮಕ್ಕೆ ಬಳಸಲು ವ್ಯವಸ್ಥೆ ಮಾಡಿದ್ದಾರೆ.
ಮಾಲಕರ ಸಂಘಕ್ಕೆ ಕರೆ ಮಾಡಿ ವಿಚಾರಿಸಿದಾಗ ಕೆಲವರು ನಿರಾಕರಿಸಿದ್ದಾರೆ. ಈ ಹಿಂದೆ ಸರಕಾರಿ ಓಡಾಟಕ್ಕೆಂದು
ಕಾರು ಬಾಡಿಗೆ ಪಡೆದು ಬಾಡಿಗೆ ಹಣ ದೊರೆಯುವಾಗ ಸಾಕಷ್ಟು ಸಮಯ ಆಗಿತ್ತು. ಸೂಕ್ತ ರೀತಿಯಲ್ಲಿ ಬಾಡಿಗೆ
ಕೂಡ ನೀಡುತ್ತಿಲ್ಲ. ಸಾಲ ಮಾಡಿ ವಾಹನ ಪಡೆದು ಮಾಸಿಕವಾಗಿ ಬ್ಯಾಂಕಿಗೆ ಪಾವತಿ ಮಾಡುವ ಕಾಲಕ್ಕೆ ಬಾಡಿಗೆ ಹಣವೇ ಆಧಾರವಾಗುತ್ತದೆ. ಆದರೆ, ಬಾಡಿಗೆ ಸೂಕ್ತ ಸಮಯದಲ್ಲಿ ದೊರೆಯದಿದ್ದರೆ ಕಷ್ಟವಾಗುತ್ತದೆ ಎಂದು ಆರೋಪಿಸಿ ಕೆಲವು ವಾಹನ ಮಾಲಕರು ಬಾಡಿಗೆ ಹೋಗಲು ನಿರಾಕರಿಸಿದ್ದರು ಎನ್ನಲಾಗಿದೆ.