ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬಿಡುವಿಲ್ಲದ ಕೆಲಸ-ಕಾರ್ಯಕ್ರಮಗಳ ಮಧ್ಯೆಯೂ ಇದೀಗ ಒಂದು ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ. ಯುವಕರಿಗಾಗಿಯೇ ಇರುವ ಪುಸ್ತಕವೊಂದನ್ನು ಬರೆಯಲು ಅವರು ಮುಂದಾಗಿದ್ದಾರೆ. ಪರೀಕ್ಷೆಯ ಒತ್ತಡ ನಿಭಾಯಿಸುವುದು, ಮಾಡಬೇಕಾದ ಕೆಲಸಗಳು, ಪರೀಕ್ಷೆಗಳು ಮುಗಿದ ಬಳಿಕ ಏನು ಮಾಡಬೇಕು ಎಂದು ತಿಳಿಸುವ ಪುಸ್ತಕ ಇದಾಗಿದೆಯಂತೆ.
ಬಹುಭಾಷೆಗಳಲ್ಲಿ ಈ ಪುಸ್ತಕ ಪ್ರಕಟವಾಗಲಿದ್ದು, ಮುಂದಿನ ವರ್ಷ ಲೋಕಾರ್ಪಣೆಯಾಗಲಿದೆ. ಪೆಂಗ್ವಿನ್ ರಾಂಡಮ್ ಹೌಸ್ (ಪಿಆರ್‌ಎಚ್) ಇಂಡಿಯಾ ಈ ಪುಸ್ತಕ ಪ್ರಕಟಿಸಲಿದೆ.
ವಿದ್ಯಾರ್ಥಿಗಳಿಗೆ ಅಗತ್ಯವಾದ ಹಲ ಮಾಹಿತಿಗಳನ್ನು ಇದು ಹೊಂದಿದ್ದು, ವಿಶೇಷವಾಗಿ ಎಸ್ಸೆಸ್ಸೆಲ್ಸಿ, ಪಿಯುಸಿಯಂತಹ ನಿರ್ಣಾಯಕ ಘಟ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಉಪಯುಕ್ತ ವಾಗಿರಲಿದೆ. ಅಂಕಕ್ಕಿಂತಲೂ ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನಗಳಲ್ಲಿ ಗಳಿಸಬೇಕಾದ ಅರಿವು, ಭವಿಷ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಜವಾ ಬ್ದಾರಿ ಬಗ್ಗೆ ಅನೌಪಚಾರಿಕವಾಗಿ ಮತ್ತು ಸಂವಾದ ರೀತಿಯಲ್ಲಿ ಪುಸ್ತಕದಲ್ಲಿ ಬರೆಯ ಲಾಗುತ್ತದೆ. ಈ ಪುಸ್ತಕದ ಮೂಲಕ ಪ್ರಧಾನಿ ಅವರು ವಿದ್ಯಾರ್ಥಿಗಳಿಗೆ ಮತ್ತಷ್ಟು ಆಪ್ತವಾಗ ಲಿದ್ದು, ಅವರನ್ನು ಬೆಂಬಲಿಸುವಂತೆ ಆಗಲಿದೆ ಎಂದು ನಂಬಿದ್ದಾರೆ. “ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದ, ನನ್ನ ಯುವ ದೃಷ್ಟಿಕೋನದ ಬಗ್ಗೆ ಮತ್ತು ಯುವಕರ ನೇತೃತ್ವದ ನಾಳೆಗಳಿಗಾಗಿ ನಾನು ಈ ಪುಸ್ತಕ’ ಬರೆಯಲಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮೋದಿ ಚಹಾ ಮಾರಿದ್ದ ಜಾಗವಿನ್ನು ಪ್ರವಾಸಿತಾಣ
ಪ್ರಧಾನಿ ನರೇಂದ್ರ ಮೋದಿ ಅವರು ಬಾಲ್ಯದಲ್ಲಿ ಚಹಾ ಮಾರುತ್ತಿದ್ದರು ಎನ್ನಲಾದ ಗುಜರಾತ್‌ನ ವಡ್ನಾಗರ್‌ನ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಲು ಕೇಂದ್ರ ಸರ್ಕಾರ ಮುಂ ದಾಗಿದೆ. ವಡ್ನಾಗರ್ ರೈಲು ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಈ ಟೀ ಸ್ಟಾಲ್ ಇದೆ. ಈ ಚಹಾ ಅಂಗಡಿಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಮೂಲಕ, ಮೋದಿ ಅವರ ಹುಟ್ಟೂರು ವಡ್ನಾಗರ್ ಅನ್ನು ವಿಶ್ವ ಪ್ರವಾಸೋದ್ಯಮದ ನಕ್ಷೆಯಲ್ಲಿ ಮಿಂಚುವಂತೆ ಮಾಡುವುದು ಸರ್ಕಾರದ ಉದ್ದೇಶ. ಭಾನುವಾರ ಇಲ್ಲಿಗೆ ಭೇಟಿ ನೀಡಿರುವ ಕೇಂದ್ರ ಸಂಸ್ಕೃತಿ ಮತ್ತು ಪ್ರವಾ ಸೋದ್ಯಮ ಇಲಾಖೆ ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ಪರಿ ಶೀಲನೆ ನಡೆಸಿದ್ದಾರೆ. ಟೀ ಅಂಗಡಿಯ ಅಸಲಿಯ ತ್ತನ್ನು ಹಾಗೆಯೇ ಉಳಿಸಿ ಕೊಂಡು, ಅಲ್ಲಿಗೆ ಸ್ವಲ್ಪ ಆಧುನಿಕ ಸ್ಪರ್ಶ ನೀಡುವುದು ಸರ್ಕಾರದ ಉದ್ದೇಶ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ.