Advertisement

ಪ್ರಧಾನಿ ಮುನ್ನೆಚ್ಚರಿಕೆ ವಹಿಸಬೇಕಿತ್ತು

05:48 PM May 06, 2021 | Team Udayavani |

ಮಂಡ್ಯ: “ಪ್ರಧಾನಿ ಮೋದಿ ಅವರು ವಿಶ್ವ ಗುರುವಾಗಲುನಮ್ಮ ಲ್ಲಿದ್ದ ಲಸಿಕೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸಂಗ್ರಹಿಸಿಡದೆ ಅನ್ಯ ದೇಶಗಳಿಗೆ ಕೊಟ್ಟರು. ಈಗ ನಾವೇ ಲಸಿಕೆಗೆ ಪರ ದಾಡುವ ಸ್ಥಿತಿಯನ್ನು ಸೃಷ್ಟಿಸಿಕೊಂಡಿದ್ದೇವೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ಕೊರೊನಾಸೋಂಕನ್ನು ನಿಯಂತ್ರಿಸಲು ನೀಡಲಾಗುತ್ತಿರುವ ಲಸಿಕೆಬಗ್ಗೆಯೂ ಸರ್ಕಾರ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಈಗಾಗಲೇ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಸಿಕೆ ಒಂದು ಡೋಸ್‌ಪಡೆದವರು ಎರಡನೇ ಡೋಸ್‌ ಪಡೆಯುವ ವೇಳೆಗೆ ಲಸಿಕೆ ಖಾಲಿಯಾಗಿದೆ.

ಕೋವಿಶೀಲ್ಡ್‌ ಲಸಿಕೆ ಉತ್ಪಾದನೆಯೂ ಕ್ಷೀಣಿಸಿದ್ದು, ಮುಂದಿನ ಜೂನ್‌-ಜುಲೈವರೆಗೆ ಲಸಿಕೆ ಸಿಗುವುದಿಲ್ಲವೆಂದು ಕಂಪನಿ ಹೇಳುತ್ತಿದೆ. ಯಾವ ಲಸಿಕೆಯನ್ನು ಪಡೆದವರುಎರಡನೇ ಡೋಸ್‌ ಆಗಿ ಅದೇ ಲಸಿಕೆಯನ್ನು ಪಡೆಯಬೇಕೇ,ಇಲ್ಲವೇ ಬೇರೆ ಲಸಿಕೆಯನ್ನೂ ಪಡೆದರೆ ಯಾವ ತೊಂದರೆಇಲ್ಲವೇ ಎಂಬ ಬಗ್ಗೆ ಸರ್ಕಾರ ಸ್ಪಷ್ಟಪಡಿಸದೆ ಜನರನ್ನು ಗೊಂದಲ ದಲ್ಲಿರಿಸಿದೆ. ನಮಗೆ ಈಗ 50 ಕೋಟಿ ವ್ಯಾಕ್ಸಿನ್‌ ತುರ್ತುಅವಶ್ಯಕತೆ ಇದೆ. ಅದು ಉತ್ಪಾದನೆಯಾಗಲು 5 ರಿಂದ 6ತಿಂಗಳು ಬೇಕಿದೆ. ಕೂಡಲೇ ವ್ಯಾಕ್ಸಿನ್‌ ಖರೀದಿಸಿ ಜನರ ಜೀವಉಳಿಸಬೇಕು ಎಂದು ಹೇಳಿದರು.

ತೇಜಸ್ವಿ ಸೂರ್ಯ ಹೇಳಿಕೆಗೆ ಕಿಡಿ: ಬೆಡ್‌ ಬ್ಲಾಕಿಂಗ್‌ಗೆ ಸಂಬಂಧಿಸಿ ದಂತೆ ಕೋವಿಡ್‌ ವಾರ್‌ ರೂಂನ ಮದರಸವಾಗಿಸಲುಹೊರಟಿದ್ದೀರಾ ಎಂಬ ಸಂಸದ ತೇಜಸ್ವಿಸೂರ್ಯ ಹೇಳಿಕೆವಿರುದ್ಧ ಕಿಡಿಕಾರಿದ ಅವರು, ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ 24 ಮಂದಿ ಸಾವನ್ನಪ್ಪಿದ ಅನಾಹುತವನ್ನು ಜನರಿಂದ ಮರೆಮಾಚಲು ಬಿಜೆಪಿ ನಾಯಕರು ಬೆಡ್‌ಬ್ಲಾಕಿಂಗ್‌ ವಿಷಯಕ್ಕೆ ಪುಷ್ಟಿ ನೀಡುತ್ತಿದ್ದಾರೆ ಎಂದುಆರೋಪಿಸಿದರು.

ಜಾತಿ ರಾಜಕಾರಣ: ಬೊಮ್ಮನಹಳ್ಳಿ ಕ್ಷೇತ್ರದ ಸೋಂಕಿತ ವ್ಯಕ್ತಿಗೆಆಕ್ಸಿಜನ್‌ ಕೊಡಿಸಲಾಗದ ಶಾಸಕ ಸತೀಶ್‌ರೆಡ್ಡಿ ಬೆಡ್‌ ಬ್ಲಾಕಿಂಗ್‌ದಂಧೆಯನ್ನು ಎಕ್ಸ್‌ಪೋಸ್‌ ಮಾಡಿದರೆಂದು ಬಿಂಬಿಸಿಕೊಳ್ಳಲುಹೊರಟಿರುವುದು ಅಸಹ್ಯಕರ ಬೆಳವಣಿಗೆ. ಜನರಲ್ಲಿ ವಿಶ್ವಾಸಮೂಡಿ ಸುವ ಕೆಲಸ ಮಾಡಿ. ಸುಮ್ಮನೆ ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬೇಡಿ ಎಂದು ಹೇಳಿದರು.

Advertisement

ಸರ್ಕಾರ ಎಡವಿದೆ: ಕೊರೊನಾ ಸೋಂಕು ನಿಯಂತ್ರಣಮಾಡು ವಲ್ಲಿ ಸರ್ಕಾರ ಸಂಪೂರ್ಣವಾಗಿ ಎಡವಿದೆ. ಆಕ್ಸಿಜನ್‌ಕೊರತೆ ಯನ್ನೇ ಮುಂದಿಟ್ಟುಕೊಂಡು ರಾಜಕೀಯಮಾಡುವುದು ಸರಿಯಲ್ಲ ಎಂದು ಹೇಳಿದರು.ಸರ್ಕಾರಕ್ಕೆ ಸಲಹೆ ನೀಡಿದ್ದೆ: ಮಾ.15ರಂದೇ ಸರ್ಕಾರಕ್ಕೆಲಾಕ್‌ ಡೌನ್‌ ಮಾಡುವಂತೆ ಎಚ್ಚರಿಕೆ ನೀಡಿದ್ದೆ.

ಒಂದೊಂದುವಿಷಯಗಳಿಗೆ ಸಂಬಂಧಿ ಸಿದಂತೆ ಒಬ್ಬೊಬ್ಬ ಸಚಿವರನ್ನುನೇಮಿಸಿ ಕೆಲಸ ಮಾಡುವಂತೆ ಸಲಹೆ ನೀಡಿದ್ದೆ. 2ನೇ ಅಲೆಎದು ರಿಸುವುದಕ್ಕೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆಯೂ ಹೇಳಿದ್ದೆ. ಆಗ ನಮ್ಮ ಮಾತನ್ನು ಯಾರೂ ಕೇಳಲಿಲ್ಲ. ಈಗ ಸಿಎಂ ಯಡಿಯೂರಪ್ಪನವರು ಐವರು ಸಚಿವರಿಗೆಜವಾ ಬ್ದಾರಿ ವಹಿಸಿದ್ದಾರೆ. ಅವರೇನು ಮಾಡುತ್ತಾರೋನೋಡೋಣ. ಕಾಲಹರಣ ಮಾಡದೇ ಅಧಿಕಾರಿಗಳಿಗೆ ನಿಖರಜವಾಬ್ದಾರಿ ವಹಿಸಿ ಕೆಲಸ ಮಾಡುವುದಕ್ಕೆ ಅವಕಾಶ ಕೊಡಿಎಂದು ಹೇಳಿದರು.

1500 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಅವಶ್ಯಕತೆ: ಮುಂಬರುವದಿನಗಳಲ್ಲಿ ರಾಜ್ಯಕ್ಕೆ 1500 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಅವಶ್ಯಕತೆಇದೆ. 70 ಸಾವಿರ ಆಕ್ಸಿಜನ್‌ ಬೆಡ್‌ ಅಗತ್ಯವಿರುವುದಾಗಿ ಕೇಂದ್ರಹೇಳುತ್ತಿದೆ. ಇದಕ್ಕೆ ಸರ್ಕಾರ ಏನು ಏರ್ಪಾಟು ಮಾಡಿಕೊಂಡಿದೆ ಎನ್ನುವುದನ್ನು ಹೇಳಬೇಕು. ಜನರ ಜೀವದ ಜೊತೆಹುಡುಗಾಟವಾಡಬೇಡಿ ಎಂದರು.

ಚಿನ್ನದ ಗಣಿ ಉಪಯೋಗಿಸಿಕೊಳ್ಳಿ: ಕರ್ನಾಟಕದ ಕೆಜಿಎಫ್‌ನಲ್ಲಿ ಬ್ರಿಟಿಷರ ಕಾಲದ ಮೂರು ಆಕ್ಸಿಜನ್‌ ಉತ್ಪಾದನಾ ಘಟಕ ತುಕ್ಕು ಹಿಡಿದಿದೆ. ಅವುಗಳನ್ನು ದುರಸ್ತಿಗೊಳಿಸಿದ್ದಲ್ಲಿ ದೇಶಕ್ಕೆಆಮ್ಲಜನಕ ಪೂರೈಸಬಹುದು. ಅದೇ ರೀತಿ ರಾಯಚೂರಿನಹಟ್ಟಿ ಚಿನ್ನದ ಗಣಿಯಲ್ಲೂ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿಆಮ್ಲಜನಕ ಉತ್ಪಾದನೆಗೆ ಪ್ರಾಮುಖ್ಯತೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು. ಸ್ಟೀಲ್‌ ರೀ-ಪ್ರೊಡಕ್ಷನ್‌ ಘಟಕಗಳು ನಷ್ಟದಿಂದ ಮುಚ್ಚಿಹೋಗಿವೆ. ಅವುಗಳಿಗೆ ಸರ್ಕಾರ ಉಚಿತವಾಗಿ ವಿದ್ಯುತ್‌ ಒದಗಿಸಿ ಮತ್ತೆ ತೆರೆದು ಆಮ್ಲಜನಕ ಉತ್ಪಾದನೆಗೆ ಪ್ರೋತ್ಸಾಹ ನೀಡಿದರೆ ಆಕ್ಸಿಜನ್‌ ಕೊರತೆ ನಿವಾರಿಸಬಹುದೆಂದರು.ಗೋಷ್ಠಿಯಲ್ಲಿ ಶಾಸಕರಾದ ಕೆ.ಸುರೇಶ್‌ಗೌಡ, ರವೀಂದ್ರಶ್ರೀಕಂಠಯ್ಯ, ಕೆ.ಅನ್ನದಾನಿ, ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್‌ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next