Advertisement

Switzerland: ಭಾರತೀಯ ದಂಪತಿ ಖರೀದಿಸಿದ ಮನೆ ಬೆಲೆ 1,639 ಕೋ.ರೂ. !

09:52 PM Jun 28, 2023 | Team Udayavani |

ಬರ್ನ್: ಇತ್ತೀಚಿನ ವರ್ಷಗಳಲ್ಲಿ ಭಾರತೀಯರು ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಆಸ್ತಿ ಖರೀದಿಸುತ್ತಿರುವ ಪ್ರಮಾಣ ಹೆಚ್ಚಾಗಿದೆ. ಭಾರತೀಯ ಮೂಲದ ಉದ್ಯಮಿಯೊಬ್ಬರು ವಿಶ್ವದಲ್ಲೇ ಅತ್ಯಂತ ದುಬಾರಿ ವಿಲ್ಲಾಗಳಲ್ಲೊಂದನ್ನು ಖರೀದಿಸಿದ್ದಾರೆ. ಸ್ವಿಜರ್ಲೆಂಡ್‌ನ‌ಲ್ಲಿ ಅವರು ಖರೀದಿಸಿದ ವಿಲ್ಲಾದ ಬೆಲೆ 1,639 ಕೋಟಿ ರೂ…!

Advertisement

ಉದ್ಯಮಿಯಾದ ಪಂಕಜ್‌ ಓಸ್ವಾಲ್‌ ಹಾಗೂ ಅವರ ಪತ್ನಿ ರಾಧಿಕಾ ಓಸ್ವಾಲ್‌ ಅವರು ಇತ್ತೀಚೆಗಷ್ಟೇ 4 ಲಕ್ಷದ 30 ಸಾವಿರ ಚದರ ಅಡಿ ಅಳತೆಯ ವಿಲ್ಲಾ ಒಂದನ್ನು ಖರೀದಿಸಿದ್ದಾರೆ. ಇದು ಗಿಂಗಿನ್ಸ್‌ ಗ್ರಾಮದ ಹಿಮಾವೃತ ಆಲ್ಫ್ಸ್‌ ಪ್ರದೇಶದಲ್ಲಿದ್ದು, ಗ್ರೀಕ್‌ನ ಬಹುದೊಡ್ಡ ಉದ್ಯಮಿ ಅರಿಸ್ಟಾಟಲ್‌ ಒನಾನಿಸ್‌ ಅವರ ಮಗಳು ಕ್ರಿಸ್ಟಿನಾ ಒನಾನಿಸ್‌ ಒಂದು ಕಾಲದಲ್ಲಿ ಈ ಮನೆಯ ಒಡತಿಯಾಗಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೇ, ವಿಶ್ವದ ಅಗ್ರ 10 ದುಬಾರಿ ಭವನಗಳ ಪೈಕಿ ಇದೂ ಒಂದು ಎಂಬ ಹೆಗ್ಗಳಿಕೆಯೂ ಇದೆ.

ಇನ್ನು ಓಸ್ವಾಲ್‌ ಕುಟುಂಬ ವಿಲ್ಲಾವನ್ನು ಖರೀದಿಸಿದ ಬಳಿಕ ಅದನ್ನು ನವೀಕರಣವನ್ನೂ ಮಾಡಲಾಗಿದೆ. ಜಾಫೆರಿ ವಿಲ್ಕರ್ ಎಂಬ ಇಂಟೀರಿಯರ್‌ ಡಿಸೈನರ್‌ ಹೊಸ ವಿನ್ಯಾಸಗಳನ್ನು ಮಾಡಿದ್ದಾರೆ. ಭಾರತೀಯ ಶೈಲಿಯ ವಿನ್ಯಾಸಕ್ಕೆ ಪ್ರಾಧಾನ್ಯ ನೀಡುವ ಮೂಲಕ ಮಾತೃ ಭೂಮಿಯ ಹೊರಗಿದ್ದರೂ, ಇರುವ ನೆಲದಲ್ಲೇ ಭಾರತದ ಕಂಪನ್ನು ಪಸರಿಸಿ, ಅದನ್ನೇ ಜೀವಿಸುವ ಉದ್ದೇಶದೊಂದಿಗೆ ಈ ಮ್ಯಾನ್ಶನ್‌ ಖರೀದಿಸಿದೆವು ಎಂದು ಓಸ್ವಾಲ್‌ ಕುಟುಂಬ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.