Advertisement
ಮಾರಣಕಟ್ಟೆ ಜಾತ್ರೆ ವೇಳೆಗೆ ಸಿದ್ಧವಾಗ ಬೇಕಿದ್ದ ಹೆಮ್ಮಾಡಿ ಸೇವಂತಿಗೆ ಈಗ ಕೊಯ್ಲುಗೆ ಸಿಗುತ್ತಿದೆ. ಆದರೆ ಈಗಾಗಲೇ ಹೆಚ್ಚಿನ ದೇವಸ್ಥಾನಗಳ ಜಾತ್ರೋತ್ಸವ, ಕೆಂಡ ಸೇವೆ ಮುಗಿದಿದ್ದು, ಇದರಿಂದ ಅವಧಿಯಲ್ಲದ ಅವಧಿಯಲ್ಲಿ ಹೂವು ಅರಳಿದ್ದರಿಂದ ನಿರೀಕ್ಷೆಯಷ್ಟು ಬೆಲೆ ಸಿಗದಂತಾಗಿದೆ.
ಕಟ್‌ಬೆಲೂ¤ರು ಗ್ರಾಮದ 6 ಮಂದಿ ಹಾಗೂ ಕನ್ಯಾನ ಗ್ರಾಮದ 6 ಮಂದಿ ಈ ಹೆಮ್ಮಾಡಿ ಸೇವಂತಿಗೆ ಹೂವನ್ನು ಬೆಳೆಯುತ್ತಾರೆ. 80-90 ರೂ. ಅಷ್ಟೇ
ಹೂವುಗಳನ್ನು ಕೊಯ್ದು ಸಾವಿರಕ್ಕೆ ಇಂತಿಷ್ಟು ಎನ್ನುವ ದರದಲ್ಲಿ ಬೆಳೆಗಾರರು ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ. ಈಗ ಹೂವಿನ ಪ್ರಮಾಣ ಹೆಚ್ಚಿದ್ದರೂ, 1 ಸಾವಿರ ಹೂವಿಗೆ 80-90 ರೂ. ಅಷ್ಟೇ ಸಿಗುತ್ತಿದೆ. ಹೂವು ಚೆನ್ನಾಗಿಲ್ಲದ ಕಾರಣ ಅದಕ್ಕೂ ಹೆಚ್ಚಿನ ಬೇಡಿಕೆಯಿಲ್ಲ. ಕಳೆದ ಬಾರಿ ಇದೇ ಸಮಯದಲ್ಲಿ 1 ಸಾವಿರ ಹೂವಿಗೆ ಕನಿಷ್ಠ 200 ರೂ. ಇತ್ತು. ಒಳ್ಳೆಯ ಹೂವಿಗೆ ಅದಕ್ಕಿಂತಲೂ ಹೆಚ್ಚಿನ ಬೆಲೆ ಸಿಗುತ್ತಿತ್ತು. ಇನ್ನು ಮಾರಣಕಟ್ಟೆ ಜಾತ್ರೆ ವೇಳೆ ಹೂವು ಕಡಿಮೆ ಇದ್ದುದರಿಂದ 400 ರೂ.ವರೆಗೂ ಮಾರಾಟವಾಗಿತ್ತು.
Related Articles
ಈ ಬಾರಿ ಚಳಿ ಕಡಿಮೆ ಇದ್ದುದರಿಂದ ನಿಗದಿತ ವೇಳೆಗೆ ಹೂವು ಅರಳಲಿಲ್ಲ. ಈಗ ಅರಳದ ಹೂವುಗಳು ವಿಪರೀತ ಸೆಕೆ ಹಾಗೂ ಮೋಡದಿಂದಾಗಿ ಕರಟಿ ಹೋಗುತ್ತಿದೆ. ಇದರಿಂದ ಕೆಲವು ಗದ್ದೆಗಳಲ್ಲಿ ಅರ್ಧಕರ್ಧ ಹೂವು ಕರಟಿ ಹೋಗಿದೆ. ಇನ್ನು ನುಸಿಬಾಧೆಯಿಂದಾಗಿಯೂ ಉತ್ತಮ ರೀತಿಯ ಹೂವು ಸಿಗದಂತಾಗಿದೆ.
Advertisement
ನಷ್ಟ ಪರಿಹಾರ ನೀಡಲಿಮೋಡ, ಸೆಕೆ, ನುಸಿಬಾಧೆಯಿಂದಾಗಿ ಈ ಬಾರಿ ಅರ್ಧಕ್ಕರ್ಧ ಬೆಳೆ ಕಡಿಮೆಯಾಗಿದೆ. ಈಗ ಬೆಳೆ ಇದ್ದರೂ, ಹೂವಿಗೆ ಮಾತ್ರ ಬೇಡಿಕೆಯಿಲ್ಲ. ಇದರಿಂದ ಬೆಳೆಗಾರರಿಗೆ ಕಳೆದ ಬಾರಿ ಎಕರೆಗೆ 6 ಸಾವಿರ ರೂ. ಅಂತೆ ಪರಿಹಾರವನ್ನು ತೋಟಗಾರಿಕಾ ಇಲಾಖೆಯವರು ಕೊಟ್ಟಿದ್ದರು. ಈ ಬಾರಿಯೂ ನಷ್ಟ ಪರಿಹಾರವನ್ನು ನೀಡಲಿ. -ಮಹಾಬಲ ದೇವಾಡಿಗ, ಅಧ್ಯಕ್ಷರು, ಹೆಮ್ಮಾಡಿ ಸೇವಂತಿಗೆ ಬೆಳೆಗಾರರ ಸಂಘ ನಷ್ಟ ಪರಿಹಾರ ನೀಡಲಿ
ಜಾತ್ರೆ ಎಲ್ಲ ಮುಗಿಯುತ್ತ ಬಂದಿದೆ. ಈಗ ಹೂವು ಕೊಯ್ಯುತ್ತಿದ್ದೇವೆ. ಇನ್ನು ಹೆಚ್ಚಿನ ಭಾಗ ಮೋಡ, ಬಿಸಿಲು ಜಾಸ್ತಿಯಾಗಿ ಕರಟಿ ಹೋಗಿದೆ. ಈ ಬಾರಿ ಏನಿಲ್ಲ. ಲಾಭಕ್ಕಿಂತ ಬೆಳೆದ ಅಸಲು ಕೂಡ ಸಿಗುವುದು ಕಷ್ಟ ಅನ್ನುವಂತಾಗಿದೆ.
-ಗಿರಿಜಾ ಕಟ್ಟು, ಸೇವಂತಿಗೆ ಬೆಳೆಗಾರರು