Advertisement
ಬಜಪೆ ಊರಿನ ತರಕಾರಿಗೆ ಪ್ರಸಿದ್ದಿ ಪಡೆದಿದ್ದು, ಅದ ರಲ್ಲೂ ಬಜಪೆ ಬೆಂಡೆ ಹೆಚ್ಚು ಪ್ರಸಿದ್ದಿ ಪಡೆದಿದೆ. ಇಲ್ಲಿನ ಪರಿಸರದಲ್ಲಿ ಎಕರೆಗಟ್ಟೆಲೆ ಬೆಂಡೆಕಾಯಿ ಬೆಳೆ ಯುವ ಕೃಷಿಕರೇ ಹೆಚ್ಚು. ಇದಕ್ಕೆ ಬೆಲೆಯೂ ಉತ್ತ ಮ ವಾಗಿ ಸಿಗುವ ಕಾರಣ ಊರಿನ ಬೆಂಡೆಯನ್ನು ಹೆಚ್ಚಿನ ಎಲ್ಲಕೃಷಿಕರು ಬೆಳೆಸುತ್ತಿದ್ದಾರೆ. ಈ ಬಾರಿಯೂ ಮಳೆ ತಡವಾಗಿ ಬಂದರೂ ಊರಿನ ಬೆಂಡೆ ಬೀಜದ ಬಿತ್ತನೆಯೂ ಜೂನ್ ಮೊದಲವಾರದಲ್ಲಿ ನಡೆದಿದೆ.
Related Articles
Advertisement
ಗಿಡ ಬೆಳವಣಿಗೆ ಕುಂಠಿತ
ಮಳೆ ಜಾಸ್ತಿಯಾದ ಕಾರಣ ಬೆಂಡೆ ಗಿಡಗಳ ಬೆಳವಣಿಗೆ ಕುಂಠಿತಗೊಂಡಿದೆ. ಬಿಟ್ಟ ಹೂಗಳು ಕೊಳೆತು ಹೋಗಿವೆ.ಇದರಿಂದ ಈ ಬಾರಿ ಈಗ ನಾಗರಪಂಚಮಿಗೆ ಹೆಚ್ಚು ಬೆಂಡೆ ಸಿಗದು, ಇನ್ನೂ ಬಿಸಿಲು ಇದ್ದರೆ ಗಿಡಗಳ ಬೆಳವಣಿಗೆ ಸಾಧ್ಯ. ಅಷ್ಟಮಿ ಹಬ್ಬಕ್ಕಾದರೂ ಬೆಂಡೆ ಸಿಗಬಹುದು ಎಂಬುವುದು ಅಡ್ಕಬಾರೆಯ ಕೃಷಿಕ ರಿಚಾರ್ಡ್ ಡಿ’ಸೋಜಾ ಅವರ ನಂಬಿಕೆ.
ಹರಿವೆ ಗಿಡಬೆಳವಣಿಗೆಯೂ ಕುಂಠಿತ ವಾಗಿದೆ. ಊರಿನ ಬೆಂಡೆ ಕೆ.ಜಿ.ಗೆ 200 ರೂ.ಯಲ್ಲಿ ಮಾರಾಟವಾಗುತ್ತಿದೆ. ಆದರೆ ಕೃಷಿಕರಿಗೆ 80 ರೂ.ಸಿಗುತ್ತಿದೆ. ಇತರ ಜಿಲ್ಲೆಯ ಬೆಂಡೆ ಕೆ.ಜಿಗೆ 80 ರೂ. ಯಲ್ಲಿ ಮಾರಾಟ ವಾಗುತ್ತಿದೆ. ಊರಿನ ಪೀರೆಗೆ ಕೆ.ಜಿಗೆ 80 ರೂ. ಮಾರಾಟವಾಗುತ್ತಿದ್ದರೆ. ಕೃಷಿಕರಿಗೆ 50 ರೂ. ಸಿಗುತ್ತಿದೆ. ಊರಿನ ಮುಳ್ಳು ಸೌತೆ ಕೆ.ಜಿಗೆ 120 ರೂ.ಮಾರಾಟವಾಗುತ್ತಿದೆ. ಕೃಷಿಕರಿಗೆ 60 ರೂ.ಸಿಗುತ್ತಿದೆ. ಬಜಪೆಯ ಅಡ್ಕಬಾರೆ, ಹಳೆ ವಿಮಾನ ನಿಲ್ದಾಣ, ಕರಂಬಾರು, ಪಡುಪೆರಾರ ಪಡೀಲ್ ಪ್ರದೇಶಗಳು ತರಕಾರಿ ಬೆಳೆಗೆ ಪ್ರಸಿದ್ಧಿ ಪಡೆದಿದೆ.