Advertisement
ಜುಲೈ 1ರಂದು ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಹೊನ್ನಾವರ, ಶಿವಾನಂದ ಕಳವೆ ಶಿರಸಿ, ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ ಮುಂಡಗೋಡ ಹಾಗೂ ಸಂಘದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅವರನ್ನು ಆಯ್ಕೆ ಸಮಿತಿ ಒಳಗೊಂಡ ಆಯ್ಕೆ ಸಮಿತಿ ಅಶೋಕ ಹಾಸ್ಯಗಾರ ಅವರನ್ನು ಪ್ರಶಸ್ತಿಗೆ ಆಯ್ಕೆಗೊಳಿಸಿದೆ.
ಕೆಲಸನಿರ್ವಹಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಕಷ್ಟು ವೈಚಾರಿಕ ಲೇಖನ, ವಿಮರ್ಶೆ, ಸಂಪಾದನೆ ಮಾಡಿದ್ದಾರಲ್ಲದೆ, ತುಡುಗುಣಿ ತಾಳಮದ್ದಲೆ ಪರಂಪರೆ, ಹೂತನ ಚಿರನೂತನ, ಜನಮನದಲ್ಲಿ ಜಯರಾಮ, ಫ್ರೋ ಧರಣೇಂಧ್ರ ಕುರಕುರಿ ಅಭಿನಂದನಾ ಗ್ರಂಥ, ಸುವರ್ಣಸೇತು, ಕರ್ಮಯೋಗಿ ವೈದ್ಯರತ್ನ ಬಾಳುರಾಯರು ಮುಂತಾದ ಕೃತಿಗಳು ಇವರ ಸಂಪಾದನೆಯಲ್ಲಿ ಪ್ರಕಟಗೊಂಡಿವೆ. ಕವಿಯೆಡೆಗೆ ಬಂದ ಕವಿತೆ ಎನ್ನುವ ಕವನ ಸಂಕಲನ ಪ್ರಕಟಿಸಿದ್ದಾರೆ. ಇದಕ್ಕೆ ಮೈಸೂರಿನ ಎಚ್‌ಎಸ್‌ಕೆ ಪ್ರಶಸ್ತಿ ಬಂದಿದೆ. ಸಾಹಿತ್ಯ ಸೇವೆಗಾಗಿ ಶಿರಸಿ ಕಸಾಪ, ಕದಂಬಸೇನೆ ಪ್ರಶಸ್ತಿ, ಪತ್ರಿಕೋದ್ಯಮ ಸೇವೆಗಾಗಿ ಮುಂಬೈನ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ, ಕಾರವಾರ ಪತ್ರಕರ್ತರ ಸಂಘ ದಿಂದ ಠಾಗೂರ್ ಪ್ರಶಸ್ತಿ, ಶಿರಸಿಯ ಕಾರ್ಯನಿರತ ಪತ್ರಕರ್ತರದಿಂದ ಸಂಘದ ಮಾಧ್ಯಮ ಶ್ರೀ ಪ್ರಶಸ್ತಿ, ಯಲ್ಲಾಪುರ ಶ್ರೀಮಾತಾ ಟ್ರಸ್ಟ್ ನಿಂದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
Related Articles
Advertisement