Advertisement
ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ವೇಳೆ ಪತ್ರಕರ್ತನೋರ್ವ ಲಾಹೋರ್ ಮೃಗಾ ಲಯದಿಂದ ಒಂಟೆಯೊಂದರ ಮೂಲಕ ಭವಿಷ್ಯ ತಿಳಿಯುವ ಕೆಲಸಕ್ಕೆ ಇಳಿದಿದ್ದಾನೆ. ಆದರೆ ಈ ಒಂಟೆ ನುಡಿದ ಮೊದಲ ಭವಿಷ್ಯವೇ ಸುಳ್ಳಾಗಿದೆ. ರವಿವಾರದ ಭಾರತದೆದುರಿನ ಪಂದ್ಯದಲ್ಲಿ ಪಾಕ್ ಗೆಲ್ಲುತ್ತದೆಂಬುದು ಈ ಒಂಟೆಯ ಭವಿಷ್ಯವಾಗಿತ್ತು!ಒಂಟೆಯ ಮುಂದೆ ಭಾರತ ಮತ್ತು ಪಾಕಿಸ್ಥಾನ ಹೆಸರಿನ ಭಿತ್ತಿಪತ್ರ (ಪ್ಲ್ರಾಕಾರ್ಡ್) ಹಿಡಿದಾಗ ಅದು ಪಾಕಿಸ್ಥಾನ ಹೆಸರಿನ ಭಿತ್ತಿಪತ್ರವನ್ನೇ ಆಯ್ಕೆ ಮಾಡಿತು. ಇದನ್ನು ನೋಡಿದ ಪಾಕ್ ಅಭಿಮಾನಿಗಳು “ಜೀತೇಗಾ ಭಾç ಜೀತೇಗಾ ಪಾಕಿಸ್ಥಾನ್ ಜೀತೇಗಾ…’ ಎಂದು ಬೊಬ್ಬಿರಿದು ಕುಣಿದದ್ದೇ ಕುಣಿದದ್ದು! ಇದರ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿ ಆನಂದಿಸಬಹುದಾಗಿದೆ.
ಅಂದಹಾಗೆ ಒಂಟೆ ಮೂಲಕ ಕ್ರಿಕೆಟ್ ಭವಿಷ್ಯ ಹೇಳಲು ಹೊರಟ ಆ ಪತ್ರಕರ್ತ ಸಾಮಾನ್ಯದವನೇನೂ ಅಲ್ಲ, ತನ್ನ ಆಕರ್ಷಕ ವರದಿ, ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ವಿದ್ಯಮಾನಗಳಿಂದ ಹೆಚ್ಚು ಸುದ್ದಿಯಲ್ಲಿರುವ “ಜಿಯೋ ನ್ಯೂಸ್’ ವರದಿಗಾರ ಅಮೀನ್ ಹಫೀಜ್ !