Advertisement
ಜಿಲ್ಲೆಯತ್ತ ಆಗಮನಕರಾವಳಿ ಕರ್ನಾಟಕದಲ್ಲಿ ಮಡಕೆ ತಯಾರಿಸುವ ಕಲೆಯು ಕುಂಬಾರ ಜನಾಂಗದವರಿಗೆ ರಕ್ತಗತವಾಗಿ ಬಂದಿದ್ದು, ತಲೆಮಾರಿನಿಂದ ತಲೆಮಾರಿಗೆ ಮುಂದುವರಿದುಕೊಂಡು ಬಂದಿದೆ. ಆದರೆ ಬದಲಾದ ವೇಗದ ಬದುಕಿನಲ್ಲಿ ಇಂತಹ ಗ್ರಾಮೀಣ ಕಲೆಗಳು ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಕರಾವಳಿ ಗ್ರಾಮದಲ್ಲಿನ ಪ್ರತಿ ಮನೆ ಮನೆಗೆ ಹೊರ ರಾಜ್ಯಗಳಿಂದ ಮಣ್ಣಿನ ಮಡಕೆಯ ವ್ಯಾಪಾರಸ್ಥರು ವ್ಯಾಪಾರಕ್ಕಾಗಿ ಜಿಲ್ಲೆಯತ್ತ ಆಗಮಿಸುತ್ತಿದ್ದು ಇದೀಗ ಮಣ್ಣಿನ ಮಡಕೆಗೆ ಬೇಡಿಕೆ ಹೆಚ್ಚಾಗ ತೊಡಗಿದೆ.
ಕೇರಳದ ತಿರುವನಂತಪುರದಿಂದ ಕರಾವಳಿ ಜಿಲ್ಲೆಗಳ ಗ್ರಾಮಗಳೆಡೆಗೆ ಈ ಆವಿಮಣ್ಣಿನಿಂದ ರಚಿಸಿದ ವಿವಿಧ ವಿನ್ಯಾಸದಲ್ಲಿ ಮಡಕೆಗಳನ್ನು ತಲೆಯ ಮೇಲಿರಿಸಿಕೊಂಡು ಬಂದಾಕ್ಷಣವೇ ಈ ಮಣ್ಣಿನ ಮಡಕೆಯನ್ನು ಕೇಳಿ ಪಡೆಯುವುದು ಒಂದೆಡೆಯಾದರೆ ಅಪರೂಪವಾಗುತ್ತಿರುವ ಆಕರ್ಷಕವಾದ ಮಣ್ಣಿನ ಮಡಕೆ ಬೇಡಿಕೆಗೆ ಸರಿಯಾಗಿ ಪೂರೈಸುವುದೆ ಕಷ್ಟ ಸಾಧ್ಯವಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ . ಮಡಕೆಯ ಉಪಯೋಗ
ಹಲವು ದಶಕಗಳ ಹಿಂದೆ ನಮ್ಮ ಗ್ರಾಮೀಣ ಬದುಕು ಮತ್ತು ಭಾವನೆಗಳಿಗೆ ಪೂರಕವಾಗಿ ಇಂತಹ ಮಣ್ಣಿನ ಮಡಕೆಗಳ ಬಳಕೆಯಾಗುತ್ತಿದ್ದು ದವಸ ಧಾನ್ಯಗಳ ಶೇಖರಣೆಯಿಂದ ಹಿಡಿದು ಆಹಾರ ಪದಾರ್ಥಗಳನ್ನು ಬೇಯಿಸಲು ಬಳಸುವ ಕಾಲವೊಂದಿತ್ತು. ಆದರೆ ಬದಲಾದ ವೇಗದ ಬದುಕಿನಲ್ಲಿ ಪಾಶ್ಚಿಮಾತ್ಯ ಫಾಸ್ಟ್ ಫುಡ್ ಸಂಸ್ಕೃತಿಗಳ ಪ್ರಭಾವದಿಂದಾಗಿ ಇಂತಹ ಪರಿಸರ ಸ್ನೇಹಿ ಮಡಕೆಗಳ ಬಳಕೆಯ ಬಗ್ಗೆ ಆಸಕ್ತ ಹೀನವಾಗುತ್ತಿರುವ ಯುವ ಸಮುದಾಯಕ್ಕೆ ಮಡಕೆಯ ಉಪಯೋಗದ ಬಗೆಗಿನ ಅರಿವು ಮೂಡಿಸುವ ಮಹತ್ವ ಕಾರ್ಯವಾಗಬೇಕಾಗಿದೆ.
Related Articles
– ಪೌಲ್ ರಾಜ್ ತಿರುವನಂತಪುರಂ, ಮಡಕೆ ವ್ಯಾಪಾರಸ್ಥ ರು.
Advertisement
ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕ ವಾಗಿ ಗುಡಿಕೈಗಾರಿಕೆಯನ್ನೇ ನಂಬಿ ಜೀವನ ನಿರ್ವಹಿಸುತ್ತಿದ್ದ ಅದೆಷ್ಟೋ ಗ್ರಾಮೀಣ ಕುಂಬಾರ ಸಮುದಾಯದವರ ಕಲೆ ಆಧುನಿಕತೆಯ ಭರಾಟೆಗೆ ಸಿಲುಕಿ ನಲುಗಿ ಹೋಗಿದೆ . ನಶಿಸುತ್ತಿರುವ ಗುಡಿಕೈಗಾರಿಕೆಯ ಉಳಿವಿಗಾಗಿ ಸರಕಾರ ಕೆಲವು ಮಹತ್ವಾಕಾಂಕ್ಷಿ ಯೋಜನೆ ಗಳನ್ನು ರೂಪಿಸಿದ್ದು, ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವ ಕಾರ್ಯವಾಗಬೇಕು.– ಹರೀಶ್ ಕುಲಾಲ್ ಕೆದೂರು.
ಅಧ್ಯಕ್ಷರು ಕರಾವಳಿ ಕುಲಾಲ ಯುವ ವೇದಿಕೆ ಕುಂದಾಪುರ. – ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ