Advertisement

ಅಂಚೆ ಇಲಾಖೆ ಅಸ್ತಿತ್ವ ಉಳಿಸಿ ಬೆಳೆಸಲು ಹೋರಾಟ: ಶಿವಕುಮಾರ್‌

10:47 PM Mar 14, 2021 | Team Udayavani |

ಉಡುಪಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸರಕಾರಿ ಸ್ವಾಮ್ಯದ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಿದ್ದು, ಅಂಚೆ ಇಲಾಖೆಯ ಭವಿಷ್ಯ ಸವಾಲಿನಿಂದ ಕೂಡಿದೆ. ನೂರಾರು ವರ್ಷಗಳ ಇತಿಹಾಸವುಳ್ಳ ಇಲಾಖೆಯ ಅಸ್ತಿತ್ವ  ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆ ಹಾಕಿಕೊಳ್ಳಲಾಗುವುದು ಎಂದು ಫೆಡರೇಶನ್‌ ಆಫ್‌ ನ್ಯಾಷನಲ್‌ ಪೋಸ್ಟಲ್‌ ಆರ್ಗನೈಸೇಶನ್‌ (ಎಫ್‌ಎನ್‌ಪಿಒಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಗ್ರೂಪ್‌ “ಸಿ’ಯ ರಾಷ್ಟ್ರೀಯ ಅಧ್ಯಕ್ಷ ಬಿ. ಶಿವಕುಮಾರ ಹೇಳಿದರು.

Advertisement

ರಾಷ್ಟ್ರೀಯ ಅಂಚೆ ನೌಕರರ ಸಂಘ ಗ್ರೂಫ್‌ “ಸಿ’ ಪೋಸ್ಟ್‌ಮನ್‌ ಎಂಟಿಎಸ್‌ ಮತ್ತು ಗ್ರಾಮೀಣ ಅಂಚೆ ಸೇವಕರ ಸಂಘ ಉಡುಪಿ ವಿಭಾಗೀಯ ಶಾಖೆ ವತಿಯಿಂದ ಬನ್ನಂಜೆ ಶ್ರೀನಾರಾಯಣ ಗುರು ಮಂದಿರದ ಶಿವಗಿರಿ ಸಭಾಗೃಹದಲ್ಲಿ ರವಿವಾರ ನಡೆದ 16ನೇ ಜಂಟಿ ದ್ವೈವಾರ್ಷಿಕ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

7ನೇ ವೇತನ ಆಯೋಗಕ್ಕೆ ಸಂಬಂಧಿಸಿ ಈತನಕವೂ ಯಾವುದೇ ಪ್ರಗತಿ ಇಲ್ಲ. ಕ್ಯಾಬಿನೆಟ್‌ ಸಮಿತಿಗೆ ವರದಿ ಸಲ್ಲಿಕೆಯಾಗಿದೆಯೋ ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಗ್ರೂಫ್‌ “ಸಿ’ ನಲ್ಲಿ ಸಿಬಂದಿ ಕೊರತೆ ಬಹಳಷ್ಟಿದೆ ಎಂದರು.

ರಾಷ್ಟ್ರೀಯ ಅಂಚೆ ನೌಕರರ ಸಂಘ ಗ್ರೂಪ್‌ “ಸಿ’ ಉಡುಪಿ ವಿಭಾಗದ ಅಧ್ಯಕ್ಷ ಹೇಮಂತ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್‌ ಚಂದರ್‌, ರಾಷ್ಟ್ರೀಯ ಅಂಚೆ ನೌಕರರ ಸಂಘ ಗ್ರೂಪ್‌ “ಸಿ’
ಕರ್ನಾಟಕ ವಲಯ ಕಾರ್ಯದರ್ಶಿ ಎಸ್‌. ಖಂಡೋಜಿ ರಾವ್‌, ರಾಷ್ಟ್ರೀಯ ಅಂಚೆ ನೌಕರರ ಸಂಘ ಪೋಸ್ಟ್‌ ಮನ್‌ ಎಂಟಿಎಸ್‌ ಕರ್ನಾಟಕ ವಲಯ ಕಾರ್ಯದರ್ಶಿ ಆರ್‌. ಮಹದೇವ, ರಾಷ್ಟ್ರೀಯ ಗ್ರಾಮೀಣ ಅಂಚೆ ಸೇವಕರ ಸಂಘದ ಕೇಂದ್ರಸ್ಥಾನ ಹೊಸದಿಲ್ಲಿ ಅಧ್ಯಕ್ಷ ಎಂ.ಪಿ. ಚಿತ್ರಸೇನ, ಎಫ್‌ಎನ್‌ಪಿಒ ದಿಲ್ಲಿ ಸಹಾಯಕ ವಿತ್ತೀಯ ಕಾರ್ಯದರ್ಶಿ ಬಾಲಚಂದ್ರ ಕೆ.ಆರ್‌., ವಿಶ್ರಾಂತ ಅಂಚೆ ಪಾಲಕರು ಹಾಗೂ ರಾಷ್ಟ್ರೀಯ ಅಂಚೆ ನೌಕರರ ಸಂಘಗಳ ಹಿರಿಯ ಮಾರ್ಗದರ್ಶಕ ಎನ್‌. ದಯಾನಂದ, ಅಂಚೆ ಅಧೀಕ್ಷಕ ಧನಂಜಯ ಆಚಾರ್ಯ, ಪೋಸ್ಟ್‌ಮನ್‌ ಎಂಟಿಎಸ್‌ ಅಧ್ಯಕ್ಷ ಹಾಗೂ ವಲಯ ಉಪಾಧ್ಯಕ್ಷ ವಾಸುದೇವ ತೊಟ್ಟಂ, ರಾಷ್ಟ್ರೀಯ ಗ್ರಾಮೀಣ ಅಂಚೆ ಸೇವಕರ ಸಂಘದ ಅಧ್ಯಕ್ಷ ಹಿರಿಯಣ್ಣ ಮಡಿವಾಳ ಉಪಸ್ಥಿತರಿದ್ದರು. ಸಹಾಯಕ ವಲಯ ಕಾರ್ಯದರ್ಶಿ ಹಾಗೂ ಗ್ರೂಪ್‌ “ಸಿ’ ವಿಭಾಗೀಯ ಕಾರ್ಯದರ್ಶಿ ಸುರೇಶ್‌ ಕೆ. ನಿರೂಪಿಸಿದರು.

ಬೇಡಿಕೆಗೆ ಸ್ಪಂದನೆ ದೊರೆತಿಲ್ಲ
ಎನ್‌ಡಿಎ ಸರಕಾರದ ಮೇಲೆ ನಂಬಿಕೆ ಇಲ್ಲ. ಅಂಚೆ ನೌಕರರು ಹಿಂದೊಮ್ಮೆ 14 ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರ ಕೈಗೊಂಡಿದ್ದು, ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ನಮ್ಮನ್ನು ಮಾತುಕತೆಗೆ ಆಹ್ವಾನಿಸಿದ್ದರು. ಮುಷ್ಕರ ಕೈ ಬಿಟ್ಟು ಒಂದು ತಿಂಗಳೊಳಗೆ ನಿಮ್ಮ ಬೇಡಿಕೆಗೆ ಸ್ಪಂದಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಇಲಾಖೆಯ ಸಚಿವರ ಖಾತೆ ಬದಲಾವಣೆ ಆಗಿದೆ ಹೊರತು ನಮ್ಮ ಯಾವ ಬೇಡಿಕೆಗೂ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಎನ್‌ಡಿಎ ಸರಕಾರದ ಬಗ್ಗೆ ನಮಗೆ ನಂಬಿಕೆ ಇಲ್ಲ ಎಂದು 7ನೇ
ವೇತನ ಆಯೋಗದಿಂದ ಅಂಚೆ ನೌಕರರಿಗೆ ಆಗಿರುವ ಅನ್ಯಾಯದ ಬಗ್ಗೆ ಚರ್ಚಿಸಲು ಕರೆದ ಸಭೆಯಲ್ಲಿ ಹೇಳಿದ್ದೇನೆ ಎಂದು ಎಂದು ಫೆಡರೇಶನ್‌ ಆಫ್‌ ನ್ಯಾಷನಲ್‌ ಪೋಸ್ಟಲ್‌ ಆರ್ಗನೈಸೇಶನ್‌ (ಎಫ್‌ಎನ್ ಪಿಒ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಗ್ರೂಪ್‌ “ಸಿ’ಯ ರಾಷ್ಟ್ರೀಯ ಅಧ್ಯಕ್ಷ ಬಿ. ಶಿವಕುಮಾರ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next