Advertisement
ವಿಶ್ವದಾದ್ಯಂತ ಪ್ರೇಕ್ಷಕರು ಮತ್ತು ಕ್ರೀಡಾಪಟುಗಳು ಪಾಲ್ಗೊಳ್ಳುವ ಈ ಮಹೋನ್ನತ ಕೂಟ ಆಯೋಜಿಸುವ ವೇಳೆಗೆ ಈ ಸಾಂಕ್ರಾಮಿಕ ರೋಗವು ನಿಯಂತ್ರಣಕ್ಕೆ ಬರುವುದು ಸಂಶಯವೆಂದು ವೈದ್ಯಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಯಲ್ಲಿ ಸಮಿತಿ ಅಧ್ಯಕ್ಷರು ಈ ರೀತಿ ಪ್ರತಿಕ್ರಿಯೆ ನೀಡಿದರು. ಕೋವಿಡ್-19 ರೋಗ ವ್ಯಾಪಕವಾಗಿ ಹರಡುತ್ತಿರುವ ಕಾರಣದಿಂದಾಗಿ ಟೋಕಿಯೊ ಒಲಿಂಪಿಕ್ಸ್ ಈಗಾಗಲೇ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿದ್ದು 2021ರ ಜುಲೈ 23ರಂದು ಆರಂಭವಾಗಲಿದೆ.
Related Articles
ಗೇಮ್ಸ್ ರದ್ದಾಗಬಹುದೆಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಟೋಕಿಯೊ 2020ರ ವಕ್ತಾರ ಮಾಸ ಟಕಾಯ ನಿರಾಕರಿಸಿದ್ದಾರೆ. ಮೋರಿ ಅವರ ಹೇಳಿಕೆಯು ಅವರ ಸ್ವಂತ ನಿರ್ಧಾರದ ಆಧಾರದಲ್ಲಿ ಬಂದಿದೆ ಎಂದರು. ಆದರೆ ಅಧ್ಯಕ್ಷರ ಈ ಹೇಳಿಕೆಯಿಂದ ಗೇಮ್ಸ್ ಬಗ್ಗೆ ಬಹಳಷ್ಟು ಪ್ರಶ್ನೆಗಳು ಉದ್ಭವಿಸಿವೆ. ಕೋವಿಡ್-19 ರೋಗಕ್ಕೆ ಮದ್ದು ಹುಡುಕದೇ ಇದ್ದಲ್ಲಿ ಮುಂದಿನ ವರ್ಷವೂ ಗೇಮ್ಸ್ ಸಂಘಟಿಸುವುದು ಕಷ್ಟವೆಂದು ಜಪಾನ್ ವೈದ್ಯಕೀಯ ಸಂಸ್ಥೆ ಹೇಳಿರುವುದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ.
Advertisement