Advertisement
ಇದು ಬಹುಭಾಷಾ ನಟ ಪ್ರಕಾಶ್ ರೈ ಅವರ ಖಡಕ್ ನುಡಿ. ಬೆಂಗಳೂರು ಪ್ರಸ್‌ಕ್ಲಬ್ ಹಾಗೂ ವರದಿಗಾರರ ಕೂಟ ಭಾನುವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.
Related Articles
Advertisement
ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳು ಸಾಯುತ್ತಿದ್ದರೆ, ಅಲ್ಲಿನ ಮುಖ್ಯಮಂತ್ರಿ ಕೇರಳದಲ್ಲಿಪ್ರಚಾರದಲ್ಲಿರುತ್ತಾರೆ. ಈ ಬಗ್ಗೆ ಪ್ರಶ್ನಿಸಿದಾಗ, ನನ್ನ ಪಕ್ಷದ ಬಲವರ್ಧನೆಗಾಗಿ ತೆರಳಿದ್ದೇನೆಂದು ಹೇಳುವ ಕನಿಷ್ಠ ವ್ಯವಧಾನವೂ ಇಲ್ಲ. ಅದಕ್ಕೆ ಉತ್ತರಿಸುವ ಬದಲು ನನ್ನ ತಂದೆ ಮುಸ್ಲಿಂ, ನನ್ನ ತಾಯಿ ಕ್ರಿಶ್ಚಿಯನ್, ನನ್ನ ಪತ್ನಿ ಹಿಂದು, ನಾನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದೇನೆ. ಪಾಕಿಸ್ತಾನಕ್ಕೆ ಹೋಗಬೇಕೆಂದು ಮಾತನಾಡಿದರೆ ಏನು ಹೇಳ ಬೇಕು ಎಂದು ಬೇಸರ ವ್ಯಕ್ತಪಡಿಸಿದರು. “ನಾನು ಯಾವುದೇ ಅಭಿಪ್ರಾಯ, ಹೇಳಿಕೆಯನ್ನು ಪ್ರಚಾರದ ಉದ್ದೇಶಕ್ಕೆ ನೀಡಿದ್ದಲ್ಲ. ಹಾಗಿದ್ದರೂ ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಾರೆ ಎಂದಾಗ ನೋವಾಗುತ್ತದೆ. ಪ್ರಶ್ನೆಗೆ ಉತ್ತರ ನೀಡುವುದಿರಲಿ, ಕನಿಷ್ಠ ಮರು ಪ್ರಶ್ನೆ ಕೇಳದೆ ಅಸಭ್ಯ, ಅಸಹ್ಯವಾಗಿ ಮಾತನಾಡುವುದು ಕೇಳಿದಾಗ ನೋವಾಗುತ್ತದೆ. ಹಾಗೆಂದು ಎದೆಗುಂದುವುದಿಲ್ಲ’ ಎಂದು ಹೇಳಿದರು. ನನಗೀಗ 52 ವರ್ಷ. ರಂಗಭೂಮಿ, ಸಿನಿಮಾ ನಟನಾಗಿ, ಬಹುಭಾಷಾ ನಟನಾಗಿ, ನಿರ್ಮಾಪಕ,ನಿರ್ದೇಶಕನಾಗಿ ವೃತ್ತಿ ಜೀವನದ ಎಲ್ಲ ಹಂತ ದಾಟಿ ದ್ದೇನೆ. ಜೀವನಕ್ಕೆ ಸಾಕಾಗುವಷ್ಟೂ ಹಣವನ್ನೂಗಳಿಸಿ ದ್ದೇನೆ. ಈಗ ಯಾವು ದರ ಮೇಲೂ ವ್ಯಾಮೋಹವಿಲ್ಲ. ಈವರೆಗಿನ ಅನುಭವದಿಂದಲಾದರೂ ಮಾತನಾಡ ಬೇಕು. ಕಂಫರ್ಟ್ ಜೋನ್‌ಗೆ ಬಂದು ಮೌನವಾಗಿ ರುವುದು ಸತ್ತಂತೆ. ಹಾಗಾಗಿ ಮಾತನಾಡುತ್ತಿದ್ದೇನೆ. ಕಂಫರ್ಟ್ ಜೋನ್‌ಗೆ ಬಂದ ಮೇಲೆ ಮಾತನಾಡ ಬಾರದೆಂದೇನೂ ಇಲ್ಲವಲ್ಲ. ಪ್ರಶ್ನಿಸುವುದನ್ನು ಮುಂದು ವರಿಸುತ್ತೇನೆ ಎಂದು ಹೇಳಿದರು. ಟ್ರೋಲ್‌ಗಳಿಂದ ಸ್ಟ್ರಾಂಗ್ ಆಗುತ್ತೇನೆ: ಇತ್ತೀಚೆಗೆ ನಾನು ಅಭಿಪ್ರಾಯ ಹೇಳಿದಾಗಷ್ಟೇ ಅಲ್ಲ, ಮಗಳೊಂದಿನ ಚಿತ್ರ ಹಾಕಿದರೂ ಸಾಮಾಜಿಕ ಜಾಲ ತಾಣ ದಲ್ಲಿ ಟ್ರೋಲ್ ಮಾಡಲಾಗುತ್ತದೆ. ಟ್ರೋಲ್ ಮಾಡುವವರಿದ್ದಾಗ ಇನ್ನಷ್ಟು ಎಚ್ಚರದಿಂದಿರಲು ಸಾಧ್ಯವಾಗುತ್ತದೆ. ನಾನು ಹೆಚ್ಚು ಸ್ಟ್ರಾಂಗ್ ಆಗುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿದರು. ಪ್ರಮುಖ ವಿಚಾರಗಳಿಗೆ ಪ್ರತಿಕ್ರಿಯೆ
– ನಾನು ಜಿಎಸ್‌ಟಿ ಬಗ್ಗೆ ಮಾತನಾಡಿದರೆ ಪ್ರಧಾನಿ ಮೋದಿ ಅವರ ವಿರುದ್ಧ ಮಾತನಾಡಿದೆ ಎನ್ನಲಾಗುತ್ತದೆ. ಇದರಲ್ಲಿ ಪ್ರಧಾನಿ,ಕೇಂದ್ರ ಸರ್ಕಾರ ಮಾತ್ರವಲ್ಲ, ಜಿಎಸ್‌ಟಿ ಜಾರಿಗೆ ಒಪ್ಪಿದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಸಮಾನ ಜವಾಬ್ದಾರರು ಎಂಬುದನ್ನು ಅರಿಯಬೇಕು.
– ಗೌರಿ ಹತ್ಯೆ ಪ್ರಕರಣ ಕುರಿತು ಗೃಹ ಸಚಿವರು ಹೇಳುವುದನ್ನು ಸದ್ಯಕ್ಕೆ ನಂಬಬೇಕಾಗುತ್ತದೆ.ಇದನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ಆದರೆ ಒತ್ತಡ ಹೇರುವ ಕೆಲಸ ಮುಂದುವರಿದಿದೆ.
– ಗೌರಿ ಹತ್ಯೆ ಬಗ್ಗೆ ಮಾತನಾಡಿದಾಗ ಅದಕ್ಕೆ ಉತ್ತರಿಸುವ ಬದಲು ಸಂಸದ ಪ್ರತಾಪ ಸಿಂಹ, ಅವಹೇಳನಕಾರಿಯಾಗಿ ನನ್ನ ವಿರುದ್ಧ ಬರೆದ. ಪ್ರಧಾನಿಯವರು ಸಮರ್ಥವಾಗಿದ್ದು, ಉತ್ತಮವಾಗಿ ಕೆಲಸ ಮಾಡುತ್ತಾರೆಂದು ಹೇಳಿದ್ದರೂ ಸಾಕಿತ್ತು.ಇಂತಹ ಮನಸ್ಥಿತಿಯವರು ಜನತೆಯನ್ನು ಹೇಗೆ ಪ್ರತಿನಿಧಿಸುತ್ತಾರೋ ಗೊತ್ತಾಗುತ್ತಿಲ್ಲ.
– ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ಟ್ರೋಲ್‌ಗಳು ಇಡೀ ದೇಶದ ಜನರ ಅಭಿಪ್ರಾಯವಲ್ಲ. 300-400 ಜನರಿಗೆ ಸಂಬಳ ನೀಡಿ ಪ್ರತಿನಿತ್ಯ ತಮ್ಮ ಪರವಾಗಿ ಹಾಗೂ ತಮ್ಮ ವಿರುದಟಛಿ ಮಾತನಾಡುವವರಿಗೆ ಪ್ರತಿಯಾಗಿ ಟ್ರೋಲ್ ಮಾಡುವ ವ್ಯವಸ್ಥೆ ಮಾಡಿಕೊಂಡಿರುವುದನ್ನು ಕಾಣಬಹುದು.
– ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡದೆ ಅಶ್ಲೀಲ ಭಾಷೆ ಬಳಸಿ ಟೀಕಿಸಿದರೆ ತಲೆ ಕೆಡಿಸಿಕೊಳ್ಳುವುದಿಲ್ಲ. ಶಾರುಖ್ ಖಾನ್, ಅಮೀರ್ ಖಾನ್ ಅವರಿಗೂ ಇದೇ ರೀತಿ ಟ್ರೋಲ್ ಮಾಡಲಾಗಿದೆ. ಅಮ್ಮ, ಪತ್ನಿ, ಪುತ್ರಿಯರು ಆತಂಕಕ್ಕೆ ಒಳಗಾಗುತ್ತಾರೆ. ನಾನು ತಲೆ ತಗ್ಗಿಸುವ ಕೆಲಸ ಮಾಡಿದರೆ ಹೆದರಬೇಕು. ಇದಕ್ಕೆಲ್ಲಾ ಆತಂಕ ಪಟ್ಟು ಕೊಳ್ಳಬೇಡಿ ಎಂದು ಧೈರ್ಯ ಹೇಳುತ್ತೇನೆ.
– ನಾನು ಪ್ರಚಾರ ರಾಯಭಾರಿಯಾಗಿರುವ ಉತ್ಪನ್ನ ಗಳ ಜಾಹೀರಾತುಗಳ ಪ್ರಸಾರಕ್ಕೂ ಅಡ್ಡಿಪಡಿಸಲಾ ಗಿದೆ. ಆದರೆ ಸಂಸ್ಥೆ ಹಿತದೃಷ್ಟಿಯಿಂದ ನಾನು ಅದನ್ನು ಬಹಿರಂಗಪಡಿಸುವಂತಿಲ್ಲ.
– ಇಂದು ಮಾತನಾಡುವುದಕ್ಕೂ ಹೆದರಿಕೆಯಾಗುತ್ತದೆ ಎಂಬುದು ನಿಜ. ಆದರೆ ಈ ಸಂದರ್ಭವನ್ನು ಕಾಂಗ್ರೆಸ್ ತುರ್ತು ಪರಿಸ್ಥಿತಿಗೆ ಹೋಲಿಸಲಾಗದು. ಏಕೆಂದರೆ 1975ರಲ್ಲಿ ತುರ್ತು ಪರಿಸ್ಥಿತಿ ಹೇರುವುದರ ಹಿಂದೆ ಅಧಿಕಾರ ದಾಹವಿತ್ತು.
ಆದರೆ ಇಂದು ಸೈದಾಟಛಿತಿಕ ಕಾರಣಕ್ಕೆ ಪ್ರಶ್ನಿಸುವವರ ದನಿಯನ್ನು ಹತ್ತಿಕ್ಕಲಾಗುತ್ತಿದೆ.
– ಕನ್ನಡ ಧ್ವಜ ಹೊಂದುವುದರಿಂದ ಐಡೆಂಟಿಟಿ ಸಿಗುವುದಾದರೆ ಹೊಂದುವುದರಲ್ಲಿ ತಪ್ಪಿಲ್ಲ.