Advertisement

ಇಂದಿನಿಂದ ಪೋಲಿಯೋ ಅಭಿಯಾನ

03:29 PM Jan 19, 2020 | Suhan S |

ಕೆ.ಆರ್‌.ಪೇಟೆ: ನಮಗೆ ರೋಗಗಳು ಬರುವ ಮುನ್ನವೇ ಎಚ್ಚರಿಕೆ ವಹಿಸಿದರೆ, ಜೀವನ ಪೂರ್ತಿ ರೋಗಮುಕ್ತರಾಗಿ ನೆಮ್ಮದಿ ಜೀವನ ನಡೆಸಬಹುದಾಗಿದೆ. ಎಲ್ಲರೂ ಮುಂಜಾಗ್ರತೆ ಕ್ರಮವಹಿಸಿ ಆರೋಗ್ಯವಂತ ಜೀವನ ನಡೆಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್‌.ಟಿ. ಹರೀಶ್‌ ಮನವಿ ಮಾಡಿದರು.

Advertisement

ಪಟ್ಟಣದಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಿದ್ದ ಜಾಥಾ ಉದ್ಘಾಟಿಸಿ ಮಾತನಾಡಿದರು.

ವಿಶ್ವಸಂಸ್ಥೆಯ ವರದಿಯಂತೆ ನಮ್ಮ ದೇಶ ಈಗ ಪೋಲಿಯೋ ಮುಕ್ತ ದೇಶವಾಗಿದೆ. ಆದರೂ ನಾವು ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆಹಾಕಿಸಿಕೊಳ್ಳಬೇಕು. ಏಕೆಂದರೆ ಸಮಸ್ಯೆ ಎದುರಾದಮೇಲೆ ಜೀವನಪೂರ್ತಿ ನೋವು ಅನುಭವಿಸುವ ಬದಲಿಗೆ ಸಮಸ್ಯೆ ಬಾರದಂತೆ ಎರಡು ಹನಿ ಲಸಿಕೆ ಹಾಕಿಸುವುದು ಒಳ್ಳೆಯದು.ಈ ಹಿಂದೆ ಎಷ್ಟು ಸಾರಿ ಪೋಲಿಯೋ ಹನಿ ಹಾಕಿಸಿದ್ದರೂ, ಮತ್ತೂಮ್ಮೆ ಕಡ್ಡಾಯವಾಗಿ ಈಗಹುಟ್ಟಿದ ಮಗು ಸೇರಿದಂತೆ ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಹಾಕಿಸಬೇಕು. ಕಳೆದ ಅವಧಿಯಲ್ಲಿ ನಾವುಗಳು ನಿರೀಕ್ಷೆಗೂ ಮೀರಿ ಶೇ.104ರಷ್ಟು ಮಕ್ಕಳಿಗೆ ಲಸಿಕೆ ಹಾಕಿದ್ದೆವು. ಈಗಲೂ ನಾವು ತಾಲೂಕಿನಲ್ಲಿರುವ ಪ್ರತಿಯೊಂದು ಮಗುವಿಗೂ ಲಸಿಕೆಯನ್ನು ಹಾಕುತ್ತೇವೆ ಎಂದು ಹೇಳಿದರು.

ತಾಲೂಕಿನಲ್ಲಿ ನಮ್ಮ ಸಮೀಕ್ಷೆಯ ಪ್ರಕಾರ ಐದು ವರ್ಷದ ಒಳಗಿನ 17,075 ಮಕ್ಕಳಿದ್ದಾರೆ. ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ತಾಲೂಕಿನಲ್ಲಿ 110 ಬೂತ್‌ಗಳನ್ನು ಆರಂಭಿಸಿಸದ್ದೇವೆ. 21 ವಾಹನಗಳವ್ಯವಸ್ಥೆ ಮಾಡಿಕೊಂಡಿದ್ದ 448 ಸಲಿಕೆ ಹಾಕುವ ಸಿಬ್ಬಂದಿ ಸಿದ್ಧಮಾಡಿಕೊಂಡಿದೆ. ಬೆಳಗ್ಗೆ ಎಂಟು ಗಂಟೆಯಿಂದ ಸಂಜೆ ಐದು ಗಂಟೆಯವರೆಗೂ ಲಸಿಕೆ ಹಾಕುತ್ತೇವೆ. ಆದರೆ ಅಲೆಮಾರಿ ಕುಟುಂಬದ ಮಕ್ಕಳು, ನಿರ್ಜನ ಅಥವಾ ಕಬ್ಬಿನಗದ್ದೆ ಮತ್ತಿತರುಸ್ಥಳಗಳಲ್ಲಿ ವಾಸಿಸುತ್ತಿರುವ ಮಕ್ಕಳು ಪೋಲಿಯೋ ಲಸಿಕೆ ಹಾಕಿಸಿಕೊಳ್ಳುವುದರಿಂದ ವಂಚಿತರಾಗುವ ಸಾಧ್ಯತೆಗಳು ಇರುವುದರಿಂದ ಅಲ್ಲಿನ ಸ್ಥಳೀಯ ನಿವಾಸಿಗಳು, ಪ್ರಜ್ಞಾವಂತರು, ಶಿಕ್ಷಕರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಅಲೆಮಾರಿಗಳು, ಕೂಲಿಕಾರ್ಮಿಕರಿಗೆ ಪೋಲಿಯೋ ಲಸಿಕೆ ಮಹತ್ವ ತಿಳಿಸಿಕೊಟ್ಟು, ಕಡ್ಡಾಯವಾಗಿ ಬೂತ್‌ಗೆ ಬಂದು ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಬೇಕು ಎಂದು ಡಾ. ಹರೀಶ್‌ ಮನವಿಮಾಡಿದರು.

ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಸತೀಶ್‌, ವಿನೋದ್‌,ಮತ್ತಿತರು ಹಾಜರಿದ್ದರು. ಶಾಲಾ ಮಕ್ಕಳು, ಆಶಾ ಕಾರ್ಯಕರ್ತೆ ಯರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಪೋಲಿಯೋ ಹನಿ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next