Advertisement
ಪೊಲೀಸ್ ಇಲಾಖೆ ಬಗೆಗಿನ ಪ್ರೀತಿ,ಯುವಶಕ್ತಿಯನ್ನು ಸಕಾರಾತ್ಮಕ ಹಾಗೂ ಮೌಲ್ಯಯುತ ರಾಷ್ಟ್ರದ ಆಸ್ತಿಯಾಗಿಸುವ, ಕೃಷಿ ಕಾಯಕದ ಮಹತ್ವ…ಹೀಗೆ ವಿವಿಧ ವಿಷಯಗಳ ಕುರಿತಾಗಿ ಉದಯವಾಣಿ’ಯೊಂದಿಗೆ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು.
Related Articles
ಕಟ್ಟಿಕೊಡುವುದಾಗಬೇಕಾಗಿದೆ. ಕೃಷಿ ಲಾಭದಾಯಕ ವಲಯ ಎಂಬುದನ್ನು ಮನವರಿಕೆ ಮಾಡಿದರೆ ಯುವಕರು ಖಂಡಿತವಾಗಿಯೂ ಕೃಷಿಗೆ ಆಕರ್ಷಿತರಾಗಲಿದ್ದಾರೆ. ಹಿಂದಿನ ಸಾಧಕರ ಸಾಧನೆ, ಪರಿಶ್ರಮದ ಮನನ, ಉತ್ತಮ ಪುಸ್ತಕಗಳ ಓದಿನ ಅಭಿರುಚಿ, ಸಾಹಿತ್ಯದ ಚಿಂತನೆ ಯುವಕರ ಮನದಲ್ಲಿ ಮೂಡಬೇಕಾಗಿದೆ. ಇದು ಸಾಧ್ಯವಾದರೆ ಯುವಕರು ಕೃಷಿ, ನೌಕರಿ,ಉದ್ಯಮ, ವ್ಯಾಪಾರ ಯಾವುದೇ ಕ್ಷೇತ್ರಕ್ಕೆ ಹೋದರೂ ಅಲ್ಲಿ ಸಾಧನೆ ಮಾಡಬಲ್ಲವರಾಗಲಿದ್ದಾರೆ ಎಂಬ ಅಚಲ ನಂಬಿಕೆ ಹಾಗೂ ಅನುಭವ ನನ್ನದು.
Advertisement
ಸಾಮಾಜಿಕ ಜಾಲತಾಣದ ಹುಚ್ಚು ಬೇಡ: ಸಾಮಾಜಿಕ ಜಾಲತಾಣ ವರವೂ ಹೌದು, ಶಾಪವೂ ಹೌದು. ಸಾಮಾಜಿಕ ಜಾಲತಾಣದಲ್ಲಿ ನೋಡಬಾರದ್ದನ್ನು ನೋಡಬಹುದು. ಜ್ಞಾನವೃದ್ಧಿಯನ್ನು ಮಾಡಿಕೊಳ್ಳಬಹುದು. ನಿಜ ಹೇಳುತ್ತೇನೆ. ನಾನು ಫೇಸ್‌ಬುಕ್ ಖಾತೆ ಹೊಂದಿಲ್ಲ. ಇದ್ದ ಖಾತೆಯನ್ನು ರದ್ದುಪಡಿಸಿದ್ದೇನೆ. ಯುವ ಸ್ನೇಹಿತರಿಗೆ ನನ್ನ ಸಲಹೆ ಇಷ್ಟೆ. ಕಲಿಯುವ ವಯಸ್ಸಿನಲ್ಲಿ ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್ ಗಳಿಂದ ದೂರ ಇರುವುದು ಒಳ್ಳೆಯದು.
ಸಾಮಾಜಿಕ ಜಾಲತಾಣದಿಂದ ಏಕಾಗ್ರತೆಗೆ ಧಕ್ಕೆಯಾಗಲಿದೆ. ಗೊತ್ತಿಲ್ಲದ, ಎಲ್ಲಿಂದಲೋ ಬಂದ ವಿಷಯ-ಮಾಹಿತಿಯನ್ನು ಎಡಿಟ್ ಮಾಡುವ, ವಿಕೃತಗೊಳಿಸಿ ಇನ್ನೊಬ್ಬರಿಗೆ ಕಳುಹಿಸುವುದರಿಂದ ಮಾನಸಿಕ ಮಾಲಿನ್ಯ ಸೃಷ್ಟಿ ಮಾಡಲಿದೆ. ಏಕಾಗ್ರತೆ ಕುಗ್ಗಿ ಓದು ಹಾಗೂ ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ. ಅಂತರ್ಜಾಲ, ಸಾಮಾಜಿಕ ಜಾಲತಾಣದಿಂದ ಜ್ಞಾನ ಪಡೆಯುವ ಕೆಲಸ ಮಾಡಿದರೆ ಒಳಿತು. ಇಲ್ಲವಾದರೆ ಅದರಿಂದ ದೂರವಿರುವುದು ಇನ್ನೂ ಒಳಿತು. ಒಳ್ಳೆಯ ಪುಸ್ತಕ ಓದುವ, ಅದ್ಭುತ ಕನಸು ಕಾಣುವ ಕಾರ್ಯಕ್ಕೆ ಮುಂದಾಗಲಿ. ಪಾಲಕರು ಸಹ ಮಕ್ಕಳ ಹವ್ಯಾಸ, ವರ್ತನೆಗಳ ಬಗ್ಗೆ ಗಮನ ಹರಿಸುವುದು ಸೂಕ್ತ.
ಕೀಳರಿಮೆ, ಹಿಂಜರಿಕೆ ತೊರೆಯಲಿಯುವಕರು, ಅದರಲ್ಲೂ ಉತ್ತರ ಕರ್ನಾಟಕದ ಯುವಕರು ಮೊದಲು ಕೀಳರಿಮೆ, ಹಿಂಜರಿಕೆ, ನನಗೆ ಇಂಗ್ಲಿಷ್ ಬಾರದು ಎಂಬ ಭಾವನೆ ತೊರೆಯಲಿ. ಕನ್ನಡ ಮಾಧ್ಯಮದಲ್ಲಿ ಓದಿದವರೂ ಅತ್ಯುತ್ತಮ ಸಾಧನೆ ಮಾಡಬಹುದು ಎಂಬುದಕ್ಕೆ ಅನೇಕರ ಉದಾಹರಣೆ ಇದೆ.ಮಾತೃಭಾಷೆಯಲ್ಲಿನ ಕಲಿಕೆ ಜ್ಞಾನಾರ್ಜನೆ, ಸುಲಭ ಅರ್ಥೈಸಿಕೊಳ್ಳುವಿಕೆ,ವ್ಯಾಖ್ಯಾನಕ್ಕೆ ಸುಲಭವಾಗಲಿದೆ. ಉತ್ತರ ಕರ್ನಾಟಕದಲ್ಲಿ ಉತ್ತಮ ಸಂಪತ್ತಿದೆ, ಪ್ರತಿಭೆ ಇದೆ. ಆದರೆ, ಕೀಳರಿಮೆ, ಹಿಂಜರಿಕೆ ಬ್ಯಾರಿಕೇಡ್‌ಗಳನ್ನು ತೆಗೆದು ಹಾಕಬೇಕಾಗಿದೆ. ನಾನೊಬ್ಬ ಬೆಳೆದರೆ ಸಾಲದು, ನನ್ನ ಭಾಗವೂ ಅಭಿವೃದ್ಧಿ ಹೊಂದಬೇಕೆಂಬ ಭಾವನೆ ತೋರಬೇಕಾಗಿದೆ. ಜನ್ಮತಳೆದ ಊರನ್ನು ನಾವ್ಯಾರು ಮರೆಯಬಾರದು. – ಅಮರೇಗೌಡ ಗೋನವಾರ