Advertisement
ಅವರು ಟಿಎಸ್ಎಸ್, ಟಿಆರ್ಸಿ ಸಹಕಾರಿ ಸಂಸ್ಥೆ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ಹಮ್ಮಿಕೊಂಡ ಅಡಿಕೆ ಕಳವು ಹಾಗೂ ಸಾಮೂಹಿಕ ಜವಾಬ್ದಾರಿ, ಕಾನೂನು ಅರಿವು ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
Related Articles
Advertisement
ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬದರಿನಾಥ ಮಾತನಾಡಿ, ರೈತರ ಬೆಳೆಗಳ ಕಳ್ಳತನದ ಜಾಗೃತಿ ಕಾರ್ಯಕ್ರಮ ಮಾಡಿರಲಿಲ್ಲ. ಯಾವುದೋ ಬೇರೆ ರಾಜ್ಯಗಳಿಂದ ಜನರು ಬರುತ್ತಾರೆ. ನಕಲಿ ವಿಸಿಟಿಂಗ್ ಕಾರ್ಡ್ ತೆಗೆದುಕೊಂಡು ಬೇರೆ ರಾಜ್ಯಗಳಿಂದ ಬಂದು ತಾವು ಅಡಿಕೆ ಖರೀರಿಗೆ ಬಂದಿರುವುದಾಗಿ ಹೇಳಿ ದೋಚುತ್ತಾರೆ. ಈ ಬಗ್ಗೆ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಬಗ್ಗೆ ಜಾಗೃತಿ ಇರಬೇಕು. ಬಂದೂಕು ಪುನರ್ ಬಂದೂಕು ಪರವಾನಗಿ ಕೊಡುತ್ತೇವೆ. ಏನೇ ಘಟನೆ ಆದರೂ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ಕೊಡಬೇಕು ಎಂದರು.
ಶಿರಸಿ ಉಪವಿಭಾಗದ ಡಿಎಸ್ಪಿ ರವಿ ಡಿ ನಾಯ್ಕ, ಅಡಿಕೆಗೆ ಹೆಚ್ಚಿನ ಬೆಲೆ ಬಂದಿದ್ದರಿಂದ ಅದರ ರಕ್ಷಣೆ ರೈತರಿಗೆ ಸವಾಲು. ರಾತ್ರಿ ಗಸ್ತು ಹೆಚ್ಚಿಸಲಾಗಿದೆ. ಅಡಿಕೆ ತೋಟಗಳು ಹೆಚ್ಚಿನ ಭಾಗ ಇದ್ದಲ್ಲಿ ಗಸ್ತುಗಳನ್ನು ಹೆಚ್ಚಿಸಲಾಗಿದೆ. ಹೇರೂರು ಹೆಗ್ಗರಣಿ, ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಚೆಕ್ ಪೋಸ್ಟ್ ಹೆಚ್ಚಿಸಲಾಗಿದೆ. ಅನುಮಾನ ಬಂದರೆ 112 ಗೆ ಕಾಲ್ ಮಾಡಿ ತಕ್ಷಣ ಸ್ಪಂದನೆ ಸಿಗುತ್ತದೆ. ಅಪರಿಚಿತರು ಯಾರೇ ಬಂದರೂ ಅವರೊಟ್ಟಿಗೆ ವ್ಯವಹರಿಸಬೇಡಿ. ಅಧಿಕೃತ ಟ್ರೇಡರ್ಸ್ ಜೊತೆ ಮಾತ್ರ ವ್ಯವಹರಿಸಿ. ಮನೆಯಲ್ಲಿ ಹೆಚ್ಚಿನ ಹಣ ಇರಿಸಿಕೊಳ್ಳಬೇಡಿ. ಎಷ್ಟು ಅವಶ್ಯಕತೆ ಇದೆಯೋ ಅಷ್ಟನ್ನು ಮಾತ್ರ ಮನೆಯಲ್ಲಿಟ್ಟುಕೊಳ್ಳಿ. ಕಳ್ಳತನದ ಬಗ್ಗೆ ಜಾಗೃತಿಯಿಂದ ಇರಬೇಕು. ಯಾರಾದರೂ ಅಪರಿಚಿತರು ಬಂದು ಬೆಳೆಗಳ ಬಗ್ಗೆ ಮೋಸ ಮಾಡಲು ಬಂದಾಗ ರೈತರು ಕಾನೂನು ಕೈಗೆ ತೆಗೆದುಕೊಳ್ಳದೇ ತಕ್ಷಣ ಪೊಲೀಸರಿಗೆ ತಿಳಿಸಿ. ಆನ್ ಲೈನ್ ವಂಚನೆ ಆಗುತ್ತವೆ. ಈ ಬಗ್ಗೆ ಹತ್ತು ಬಾರಿ ಯೋಚನೆ ಮಾಡಿ ವ್ಯವಹರಿಸಿ ಎಂದರು.
ಸಿಪಿಐ ರಾಮಚಂದ್ರ ನಾಯಕ ವಂದಿಸಿದರು. ಶಿರಸಿ, ಯಲ್ಲಾಪುರ, ಮುಂಡಗೋಡ ಭಾಗದ ರೈತರು ಇದ್ದರು. ಪೊಲೀಸರ ಜೊತೆ ಸಂವಾದ ಕೂಡ ನಡೆಯಿತು.