ಉಡುಪಿ: ಓದಿನಲ್ಲಿ ಆಸಕ್ತಿ ಇಲ್ಲದೆ, ಹಾಸ್ಟೆಲ್‌ನಲ್ಲಿ ಇರಲು ಮನಸ್ಸು ಕೇಳದ ಕಾರಣ 9ನೇ ತರಗತಿಯ ಬಾಲಕನೋರ್ವ ಬೆಂಗಳೂರಿನಿಂದ ಓಡಿಬಂದಿದ್ದು, ಉಡುಪಿಯಲ್ಲಿ ಪತ್ತೆಯಾಗಿ ಮರಳಿ ಮನೆ ಸೇರಿದ್ದಾನೆ.
ಬೆಂಗಳೂರು ಯಲಹಂಕ ಮೂಲದ ಬಾಲಕ ವಿಘ್ನೇಶ (15) ಓಡಿ ಬಂದಿದ್ದ ಬಾಲಕ. ಈತ ಬೆಂಗಳೂರಿನಲ್ಲಿ 9ನೇ ತರಗತಿ ಕಲಿಯುತ್ತಿದ್ದ. ತಂದೆ, ತಾಯಿ ಕೆಲಸದಲ್ಲಿದ್ದ ಕಾರಣ ಹಾಸ್ಟೆಲ್‌ಗೆ ಸೇರಿಸಿದ್ದರು. ಆತನಿಗೆ ಗಣಿತ ಮತ್ತು ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಬಹಳ ಕಡಿಮೆ ಇತ್ತು. ಆ ವಿಷಯಗಳಲ್ಲಿ ಅಂಕವೂ ಕಡಿಮೆ ಬಂದಿತ್ತು. ಅದರಿಂದಾಗಿ ಹಾಸ್ಟೆಲ್ ತೊರೆದ ಬಾಲಕ ಬಸ್ಸಿನಲ್ಲಿ ಸೀದಾ ಉಡುಪಿಗೆ ಬಂದಿಳಿದಿದ್ದ.
ಅನಂತರ ರೈಲಿನಲ್ಲಿ ಎಲ್ಲಿಗೋ ತೆರಳಲು ಇಂದ್ರಾಳಿಯ ರೈಲ್ವೇ ಫ್ಲ್ಯಾಟ್ ಫಾರಂಗೆ ಬಂದಿದ್ದ. ಅಲ್ಲಿ ಬಾಲಕನ ಚಲನವಲನಗಳಲ್ಲಿ ಅನುಮಾನ ಕಂಡುಬಂದ ಹಿನ್ನೆಲೆಯಲ್ಲಿ ಆರ್‌ಪಿಎಫ್ ಪೊಲೀಸರು ಬಾಲಕನನ್ನು ವಿಚಾರಣೆ ನಡೆಸಿದರು. ಆಗ ಆತ ಎಲ್ಲ ವಿಷಯ ತಿಳಿಸಿದ. ಆತನ ಮನೆಮಂದಿಯ ಫೋನ್ ನಂಬರ್ ಸಂಗ್ರಹ ಮಾಡಿದ ಆರ್‌ಪಿಎಫ್ ಪೊಲೀಸರು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು.
ಉಡುಪಿ, ಮಲ್ಪೆ ಸುತ್ತಾಡಿಸಿದ ಪೊಲೀಸರು: ತನ್ನ ಸಮಸ್ಯೆಗಳನ್ನು ಬಾಲಕ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಅಧಿಕಾರಿ ಶಿವರಾಮ ರಾಠೊಡ್, ಸಿಬಂದಿ ವೇಣು ಸಿ.ಎಚ್. ಅಶ್ವತ್ ಕೆ.ಎಸ್. ಅವರ ಮುಂದೆ ಹೇಳಿದಾಗ ಅವರ ಮನವೂ ಕರಗಿತ್ತು.
ಆರ್‌ಪಿಎಫ್ ಇನ್ಸ್‌ಪೆಕ್ಟರ್ ಶಿವರಾಮ್ ರಾಠೊಡ್ ಬಾಲಕನನ್ನು ಮಲ್ಪೆ ಬೀಚ್‌ಗೆ ಕರೆದೊಯ್ದು ಒಂಟೆ ಸಫಾರಿ, ಶ್ರೀಕೃಷ್ಣ ಮಠ ಸಹಿತ ಉಡುಪಿಯ ಹಲವೆಡೆಗಳನ್ನು ಸುತ್ತಾಡಿಸಿದ್ದು, ಬಳಿಕ ಸೀಬರ್ಡ್ ಬಸ್ಸಿನ ಸಿಬಂದಿ ಚಂದ್ರು, ಚೆಲುವ ಮತ್ತು ವಾಸುದೇವ ಸುಪರ್ದಿಯಲ್ಲಿ ಬಾಲಕನನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಯಿತು. ತಾಯಿ ಮನೆ ಸೇರಿದ ಕೂಡಲೇ ಅಲ್ಲಿಂದ ಆರ್‌ಪಿಎಫ್ ಪೊಲೀಸರಿಗೆ ಸಂದೇಶ ಬಂದಿದೆ. ಆರ್‌ಪಿಎಫ್ ಪೊಲೀಸರ ಕಾರ್ಯವನ್ನು ಬಾಲಕನ ತಾಯಿ ಗೌರಿ, ತಂದೆ ಹರೀಶ್ ಶ್ಲಾ ಸಿದ್ದಾರೆ