Advertisement
ಯುವ ಗಾಯಕರಾದ ಅಮಿತ್ ಶೇಖರ್, ಅನುಷಾ ಸತೀಶ್, ಕರ್ನಾಟಕ ಬರೀ ನಾಡಲ್ಲ… ನಮ್ಮ ಸಂಸ್ಕೃತಿಯ ಧಾತು…, ಸುಬ್ಬಭಟ್ಟರೆ ಮಗಳೆ ಇದೆಲ್ಲ ನಂದೆ ತಗೊಳ್ಳೆ…, ಒಳಗೊಂಡಂತೆ ನಾಡಿನ ಹಿರಿಯ ಕವಿಗಳಾದ ಬಿ.ಆರ್. ಲಕ್ಷ್ಮಣರಾವ್, ಎಚ್. ಡುಂಡಿರಾಜ್ ರವರ ವಿವಿಧ ಕವಿತೆಗಳನ್ನು ಸುಶ್ರಾವ್ಯ, ಮಧುರವಾಗಿ ಪ್ರಸ್ತುತಪಡಿಸಿದರು. ಹಾಡಿನ ಮೂಲಕವೇ ಕವಿ ನೋಡು… ಕವಿತೆ ಹಾಡು… ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಬಿ.ಆರ್. ಲಕ್ಷಣರಾವ್ ಇಡೀ ಕಾರ್ಯಕ್ರಮಕ್ಕೆ ಒಳ್ಳೆಯ ಚಾಲನೆ ಕೊಟ್ಟರು.
ನಗಿಸಿದ್ದಕ್ಕೆ ಚಪ್ಪಾಳೆ… ಗಂಭೀರ ಕವಿತೆ ಓದಿ ಮುಗಿಸಿದ್ದಕ್ಕೆ ಚಪ್ಪಾಳೆ… ಎನ್ನುವ ಚುಟುಕ ಹೇಳುವ ಮೂಲಕ ತಾವು ಹಾಸ್ಯ ಹನಿಗವನ ಬರೆಯಲಾರಂಭಿಸಿದ್ದನ್ನು ತಿಳಿಸಿದರು. ಮದುವೆಯಾಗುವ ಮುನ್ನ ಎಲ್ಲ ಗಂಡು ಮಕ್ಕಳು ನರೇಂದ್ರ ಮೋದಿ… ಮದುವೆ ಆದ ಮೇಲೆ ಎಲ್ಲ ಗಂಡು ಮಕ್ಕಳು ಮನಮೋಹನ್ ಸಿಂಗ್… ಎನ್ನುವ ಚುಟುಕದ ಮೂಲಕ ಮದುವೆ, ಸಂಸಾರದ ಎಳೆ ಬಿಡಿಸಿಟ್ಟರು. ಕಾಲು ನೋವು ಹೇಗಿದೆ… ಹಾಗೆಯೇ ಇದೆ… ಬೆನ್ನು ನೋವು… ಬೀಗಿದೆ…
ಎಂಬ ಚುಟುಕದ ಮೂಲಕ ಕೆಲಸದಿಂದ ನಿವೃತ್ತಿಯ ನಂತರ ಎದುರಾಗುವ ಪರಿಸ್ಥಿತಿಯ ಬಿಡಿಸಿಟ್ಟರು.
Related Articles
Advertisement
ಕನ್ನಡದ ಒಂದೊಂದು ಪದಕ್ಕೂ 12 ಅರ್ಥ, ಶ್ಲೇಷೆ ಇವೆ ಎನ್ನುವ ಕಾರಣಕ್ಕೆ ಬರೆಯುತ್ತಿದ್ದೇನೆ. ಹಾಗೆ ಬರೆಯುತ್ತಿರುವ ಕಾರಣಕ್ಕೆ ದಾವಣಗೆರೆ ಅಲ್ಲ ವಿದೇಶದಲ್ಲೂ ತಮ್ಮ ಕವಿತೆ ವಾಚಿಸುವ ಅವಕಾಶ ಬಂದಿದೆ. ಇದು ಕನ್ನಡದಲ್ಲಿ ಓದಿದರೆ ಏನು ಲಾಭ ಇದೆ ಎಂದು ಪ್ರಶ್ನಿಸುವರು ಅರಿಯಬೇಕು. ಕನ್ನಡಕ್ಕೆ ತನ್ನದೇ ಶಕ್ತಿ ಇದೆ.ಸಾಹಿತ್ಯದ ಶಕ್ತಿಯ ಮೂಲಕ ಜನರ ಪ್ರೀತಿ, ವಿಶ್ವಾಸ ದೊರೆಯುತ್ತದೆ. ಅದು ಯಾವುದೇ ಪ್ರಶಸ್ತಿ, ಹಣ, ಸನ್ಮಾನಕ್ಕಿಂತಲೂ ಮಿಗಿಲು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ್‌ಕುರ್ಕಿ ಮಾತನಾಡಿ, ಸಾಹಿತ್ಯ ಮನಕ್ಕೆ ಸಂತೋಷ ಕೊಡುತ್ತದೆ. ನಮ್ಮದೇ ಆದ ಸಮಸ್ಯೆಯಿಂದ ನಮ್ಮನ್ನು ಹೊರ ತರುತ್ತದೆ. ಅಂತಹ ಶ್ರೇಷ್ಠ ಮಟ್ಟದ ಸಾಹಿತ್ಯ ಸೇವೆ ಮಾಡುತ್ತಿರುವ ಬಿ.ಆರ್. ಲಕ್ಷ್ಮಣರಾವ್, ಡುಂಡಿರಾಜ್ ಅವರಿಗೆ ಅವರೇ ಸಾಟಿ. ಇಬ್ಬರು ಸಾಹಿತ್ಯ ಕ್ಷೇತ್ರದ ಸೂರ್ಯ-ಚಂದ್ರರು ಎಂದು ಬಣ್ಣಿಸಿದರು.
ದಾವಣಗೆರೆ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ಜಗಳೂರು ಅಧ್ಯಕ್ಷ ಹಜರತ್ ಅಲಿ, ಹರಿಹರ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಇತರರು ಇದ್ದರು. ಜಿ.ಎಚ್. ರಾಜಶೇಖರ್ ಗುಂಡಗಟ್ಟಿ ನಿರೂಪಿಸಿದರು.