Advertisement

ಯೋಜಿತ ಗುರಿ, ಛಲದಿಂದ ಯಶಸ್ಸು : ಬಿಷಪ್‌

01:08 PM Apr 02, 2017 | Team Udayavani |

ಮಂಗಳೂರು: ಯೋಜಿತ ಗುರಿ ಮತ್ತು ಅದನ್ನು ಸಾಧಿಸುವ ಛಲವಿದ್ದಾಗ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ಮಂಗಳೂರು ಬಿಷಪ್‌ ಹಾಗೂ ಫಾದರ್‌ ಮುಲ್ಲರ್‌ ಸಂಸ್ಥೆಗಳ ಅಧ್ಯಕ್ಷ ರೆ| ಡಾ| ಅಲೋಶಿಯಸ್‌ ಪಾವ್‌ ಡಿ’ಸೋಜಾ ಹೇಳಿದರು.

Advertisement

ಫಾ| ಮುಲ್ಲರ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶನಿವಾರ ಜರಗಿದ ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಮತ್ತು
ಇತರ ಆರೋಗ್ಯ ವಿಜ್ಞಾನ ಸಂಸ್ಥೆಗಳ ಹಾಗೂ ಫಾದರ್‌ ಮುಲ್ಲರ್‌ ವಾಕ್‌ ಶ್ರವಣ ಕಾಲೇಜಿನ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಣಿಪಾಲ ವಿಶ್ವವಿದ್ಯಾನಿಲಯ ಸಹ ಕುಲಪತಿ ಡಾ| ಜಿ.ಕೆ. ಪ್ರಭು ಅವರು ಪದವಿಪ್ರದಾನ ಮಾಡಿದರು.
ಫಾದರ್‌ ಮುಲ್ಲರ್‌ ಸಂಸ್ಥೆಗಳ ಪ್ರಭಾರ ನಿರ್ದೇಶಕ ಫಾ| ರಿಚರ್ಡ್‌ ಅಲೋಶಿಯಸ್‌ ಕುವೆಲ್ಲೊ ಸ್ವಾಗತಿಸಿದರು. ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಮತ್ತು ಇತರ ಆರೋಗ್ಯ ವಿಜ್ಞಾನ ಸಂಸ್ಥೆಗಳ ಡೀನ್‌ ಡಾ| ಜೆ.ಪಿ. ಆಳ್ವ , ಫಾದರ್‌ ಮುಲ್ಲರ್‌ ವಾಕ್‌ಶ್ರವಣ ಕಾಲೇಜಿನ ಪ್ರಾಂಶುಪಾಲ ಅಖೀಲೇಶ್‌ ಪಿ.ಎಂ. ಅವರು ಪದವೀಧರರ ವಿವರ ನೀಡಿ ಪ್ರತಿಜ್ಞಾವಿಧಿ ಬೋಧಿಸಿದರು.

ಫಾ| ಮುಲ್ಲರ್‌ ಮೆಡಿಕಲ್‌ ಕಾಲೇಜು ಆಡಳಿತಾಧಿಕಾರಿ ಫಾ| ರುಡೋಲ್ಫ್ ರವಿ ಡೇಸಾ ಉಪಸ್ಥಿತರಿದ್ದರು. ಫಾದರ್‌ ಮುಲ್ಲರ್‌ ಆಸ್ಪತ್ರೆ ತುಂಬೆ ಇದರ ಆಡಳಿತಾಧಿಕಾರಿ ಫಾ| ರೋಶನ್‌ ಕ್ರಾಸ್ತಾ, ಫಾದರ್‌ ಮುಲ್ಲರ್‌ ಸಂಸ್ಥೆಗಳ ಸಹಾಯಕ ಆಡಳಿತಾಧಿಕಾರಿ ಫಾ| ಅಜಿತ್‌ ಮಿನೇಜಸ್‌, ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ| ಸಂಜೀವ ರೈ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ | ಉದಯ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

2016ನೇ ಸಾಲಿನ ಅತ್ಯುತ್ತಮ ನಿರ್ಗಮನ ಪದವೀಧರೆ ಡಾ| ಸಹನಾಗೆ ಫಾದರ್‌ ಮುಲ್ಲರ್‌ ಸಂಸ್ಥೆಗಳ ಅಧ್ಯಕ್ಷರ ಚಿನ್ನದ ಪದಕ ಪುರಸ್ಕಾರ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. 294 ಮಂದಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next