Advertisement

ಮುಂಗಾರು ಹಳಿ ತಪ್ಪಲು ಗ್ರಹೀಯ ತರಂಗಗಳೇ ಕಾರಣ

12:21 AM Dec 18, 2020 | mahesh |

ಹೊಸದಿಲ್ಲಿ: ಭಾರತದಲ್ಲಿ ಆಗಸ್ಟ್‌ ತಿಂಗಳ ಮುಂಗಾರು ಹಳಿ ತಪ್ಪಲು ಉತ್ತರ ಅಟ್ಲಾಂಟಿಕ್‌ನ ಗ್ರಹೀಯ ತರಂಗವೇ ಕಾರಣ!

Advertisement

ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸಸ್‌(ಐಐಎಸ್‌ಸಿ)ನ ಸಂಶೋಧಕರ ತಂಡ ನಡೆಸಿದ ಅಧ್ಯಯನದಿಂದ ಈ ವಿಚಾರ ಬಹಿರಂಗವಾಗಿದೆ. ಐಐಎಸ್‌ಸಿಯ ಸೆಂಟರ್‌ ಫಾರ್‌ ಅಟ್ಮಾಸ್ಪಿರಿಕ್‌ ಆ್ಯಂಡ್‌ ಓಷಿಯನಿಕ್‌ ಸೈನ್ಸಸ್‌ನ ತಂಡವು ಈ ಸಂಶೋಧನೆ ನಡೆಸಿದೆ.

ಕಳೆದ ಶತಮಾನದಲ್ಲಿ, ಎಲ್‌-ನಿನೋ ಪ್ರಭಾವ ಇರದಂತಹ ವರ್ಷಗಳಲ್ಲಿ ಭಾರತದಲ್ಲಿ ಕಂಡುಬಂದ ಮುಂಗಾರಿನ ಕೊರತೆಯು ಋತುಕಾಲಿಕವಾಗಿದ್ದರೆ, ಎಲ್‌-ನಿನೋ ಪ್ರಭಾವ ಇದ್ದಂತಹ ವರ್ಷದಲ್ಲಿ ಇಡೀ ಮುಂಗಾರುಪೂರ್ತಿ ಮಳೆಯ ಕೊರತೆಯಿತ್ತು. ಈ ಎರಡೂ ರೀತಿಯ ಮಳೆ ಕೊರತೆಯನ್ನು ಮನಗಂಡು ಸಂಶೋಧಕರ ತಂಡವು 1900ರಿಂದ 2015ರವರೆಗೆ ಪ್ರತಿದಿನ ಬಿದ್ದ ಮಳೆಯ ಕುರಿತು ಅಧ್ಯಯನ ನಡೆಸಿದೆ.

ಆಗಸ್ಟ್‌ ಅಂತ್ಯದ ವೇಳೆಗೆ ಮಳೆಯಲ್ಲಿ ತೀವ್ರ ಕೊರತೆ ಕಂಡುಬಂದಿರುವುದನ್ನು ಪತ್ತೆ ಹಚ್ಚಿದ ತಂಡ, ಭಾರತದ ಮುಂಗಾರಿನ ಮೇಲೆ ಪ್ರಭಾವ ಬೀರುತ್ತಿರುವಂಥ ಅಂಶ ಯಾವುದು ಎಂಬ ಬಗ್ಗೆ ಸಂಶೋಧನೆ ನಡೆಸಿತು. ಉತ್ತರ ಅಟ್ಲಾಂಟಿಕ್‌ನಲ್ಲಿ ಆಗಸ್ಟ್‌ ಕೊನೆಯಿಂದ ಸೆಪ್ಟಂಬರ್‌ ಆರಂಭದ ವರೆಗೆ ಸೃಷ್ಟಿಯಾಗುವ ಗ್ರಹೀಯ ತರಂಗಗಳಿಂದಾಗಿ ಭಾರತದಲ್ಲಿ ಆಗಸ್ಟ್‌ನಲ್ಲಿ ಮುಂಗಾರು ಏರುಪೇರಾಗುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂತು ಎಂದು ಸಂಶೋಧಕರು ತಿಳಿಸಿದ್ದಾರೆ. ಗ್ರಹದ ಅಥವಾ ಭೂಮಿಯ ಪರಿಭ್ರಮಣೆಯ ಸಮಯದಲ್ಲಿ ನೈಸರ್ಗಿಕವಾಗಿ ಏಳುವ ಅಲೆಯನ್ನು “ಗ್ರಹೀಯ ತರಂಗ’ ಎಂದು ಕರೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next