Advertisement

ಸೇವೆ ಜನರಿಗೆ ತಲುಪಿದರಷ್ಟೇ ಯೋಜನೆ ಸಫ‌ಲ

11:52 AM Jul 26, 2017 | Team Udayavani |

ಬೆಂಗಳೂರು: ಸರ್ಕಾರ ರೂಪಿಸಿದ ಯಾವುದೇ ಕಾರ್ಯಕ್ರಮ ಫ‌ಲಾನುಭವಿಗಳಿಗೆ ತಲುಪಿದಾಗ ಮಾತ್ರ ಸರ್ಕಾರದ ಆಶಯಗಳು ಸಫ‌ಲವಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

Advertisement

ಮಂಗಳವಾರ ಸರ್ವಜ್ಞನಗರದ ಕಮ್ಮನಹಳ್ಳಿ ವಾರ್ಡ್‌ನಲ್ಲಿ ಪಾಲಿಕೆಯಿಂದ ಆಯೋಜಿಸಿದ್ದ ವಿವಿಧ ಕಲ್ಯಾಣ ಯೋಜನೆಗಳ ಸವಲತ್ತು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜನತೆಗೆ ತಲುಪುವಂತಹ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಮಾಡಿದೆ. ಆ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಶಾಸಕರು, ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಮಾಡಿದಾಗ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದರು. 

ಮೇಯರ್‌ ಜಿ.ಪದ್ಮಾವತಿ ಮಾತನಾಡಿ, ನಾಲ್ಕು ವರ್ಷಗಳ ಹಿಂದೆ ನಗರದ ಎಲ್ಲೆಂದರಲ್ಲಿ ರಾಶಿ ರಾಶಿ ತ್ಯಾಜ್ಯ ಕಾಣುತ್ತಿತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ 7 ಹೊಸ ಘಟಕಗಳನ್ನು ತೆರೆದು ತ್ಯಾಜ್ಯ ಸಮಸ್ಯೆಗೆ ಮುಕ್ತಿ ಹಾಡಲಾಗಿದೆ ಎಂದರು. ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡಿರುವ ಮುಖ್ಯಮಂತ್ರಿಗಳು ಕಳೆದ ನಾಲ್ಕು ವರ್ಷಗಳಲ್ಲಿ ನಗರದ ಅಭಿವೃದ್ಧಿಗಾಗಿ 11 ಸಾವಿರ ಕೋಟಿ ನೀಡಿದ್ದಾರೆ ಎಂದು ಹರ್ಷವ್ಯಕ್ತಪಡಿಸಿದರು.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ಸಾಮಾಜಿಕ ಮತ್ತು ಆರ್ಥಿಕ ಸ್ವಾವಲಂಬನೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಆಶಯದಂತೆ ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ. ಎಲ್ಲ ಧರ್ಮದವರಿಗೂ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಅವರು ಜಾರಿಗೊಳಿಸಿದ್ದಾರೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಎ.ಬಸವರಾಜು, ಎನ್‌.ಎ.ಹ್ಯಾರಿಸ್‌, ಎಸ್‌.ಟಿ.ಸೋಮಶೇಖರ್‌, ಉಪಮೇಯರ್‌ ಎಂ.ಆನಂದ್‌, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೇರಿದಂತೆ ಪ್ರಮುಖರು ಹಾಜರಿದ್ದರು. 

Advertisement

2015-16ನೇ ಸಾಲಿನ ವಿವಿಧ ಕಲ್ಯಾಣ ಕಾರ್ಯಕ್ರಮ ಫ‌ಲಾನುಭವಿಗಳ ವಿವರ: ಆರ್ಥಿಕ ಸ್ವಾವಲಂಬನೆಗಾಗಿ 892 ಕಾರು ವಿತರಣೆ, ಸಾರಥಿ ಯೋಜನೆಯಡಿ 665 ಆಟೋರಿಕ್ಷಾ, ವಿಕಲಚೇತನರಿಗೆ ಹೆಚ್ಚುವರಿ ಚಕ್ರವಿರುವ 258 ದ್ವಿಚಕ್ರ ವಾಹನ, 23 ಮಂದಿ ಮಾನಸಿಕ ಅಸ್ವಸ್ಥರಿಗೆ ಪ್ರೋತ್ಸಾಹಧನ, 136 ಜನರಿಗೆ ಪ್ಲಂಬರ್‌ ಕಿಟ್‌, 146 ಮಂದಿಗೆ ಎಲೆಕ್ಟ್ರಾನಿಕ್‌ ಕಿಟ್‌, 128 ಮಂದಿಗೆ ಬಡಗಿ ಕಿಟ್‌, 171 ಜನರಿಗೆ ಕೌÒರ ಪರಿಕರಗಳ ಕಿಟ್‌, 292 ಫ‌ಲಾನುಭವಿಗಳಿಗೆ ದೋಬಿ ಕಿಟ್‌, 171 ಫ‌ಲಾನುಭವಿಗಳಿಗೆ ತಳ್ಳುವ ಗಾಡಿ ವಿತರಣೆ, 5 ಮಂದಿಗೆ ಚಮ್ಮಾರ ಕಿಟ್‌ ವಿತರಣೆ ಮತ್ತು 584 ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ನೀಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next