Advertisement
1. ಮುಖವನ್ನು ದಿನಕ್ಕೆ ನಾಲ್ಕೈದು ಬಾರಿ ತೊಳೆಯಿರಿ.2. ತಲೆಯಲ್ಲಿ ಹೊಟ್ಟು ಆಗದಂತೆ ನೋಡಿಕೊಳ್ಳಿ.
3. ಕೂದಲಿಗೆ ರಾಸಾಯನಿಕ ಶ್ಯಾಂಪೂಗಳನ್ನು ಬಳಸದಿರುವುದು ಒಳಿತು.
4. ಮೊಡವೆಗಳನ್ನು ಕೈಯಿಂದ ಹಿಸುಕುತ್ತಾ, ಉಗುರಿನಿಂದ ಮುಟ್ಟುತ್ತಾ ಇರಬಾರದು. ಹಾಗೆ ಮಾಡುವುದರಿಂದ ಮೊಡವೆ ಒಣಗಿದ ನಂತರ, ಕಲೆ ಉಳಿದುಕೊಳ್ಳುತ್ತದೆ.
5. ಕೊತ್ತಂಬರಿ ಸೊಪ್ಪಿನ ರಸಕ್ಕೆ, ಲಿಂಬೆರಸ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಮತ್ತು ಕಲೆಗಳು ಮಾಯವಾಗುತ್ತವೆ.
6. ಲಿಂಬೆಹಣ್ಣಿನ ಸಿಪ್ಪೆ ಅಥವಾ ಲಿಂಬೆ ಎಲೆಯನ್ನು, ಅರಿಶಿಣದ ಜೊತೆಗೆ ಸೇರಿಸಿ ನುಣ್ಣಗೆ ಅರೆದು ಪೇಸ್ಟ್ ಮಾಡಿ, ಅದನ್ನು ಮುಖಕ್ಕೆ ಹಚ್ಚುವುದೂ ಮೊಡವೆಗಳಿಗೆ ರಾಮಬಾಣ.
7. ಪ್ರತಿದಿನ ಮುಖವನ್ನು ಎಳನೀರಿನಿಂದ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚಿ, ಮೊಡವೆಗಳು ಮಾಯವಾಗುತ್ತವೆ.
8. ಕಿತ್ತಳೆ ಹಣ್ಣಿನ ರಸ ಮತ್ತು ಸಿಪ್ಪೆಯನ್ನು ಮುಖಕ್ಕೆ ಹಚ್ಚಿ ಮೊಡವೆಗಳನ್ನು ತಡೆಯಬಹುದು.
9. ಸೌತೆಕಾಯಿಯ ರಸ ಅಥವಾ ಸೌತೆಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮುಖಕ್ಕೆ ಹಚ್ಚುವುದು, ತುಂಡುಗಳಿಂದ ಮುಖವನ್ನು ತಿಕ್ಕುವುದರಿಂದ ಮೊಡವೆಗಳು ದೂರವಾಗುತ್ತದೆ. ಮುಖದ ಮೇಲೆ ಇರುವ ಕಪ್ಪು ಕಲೆಗಳು ದೂರವಾಗುವುದು.
10. ಹಾಲಿನ ಕೆನೆ, ಕಡಲೆಹಿಟ್ಟು, ಅರಿಶಿನ, ಲಿಂಬೆರಸ ಬೆರೆಸಿ ಪೇಸ್ಟ್ ತಯಾರಿಸಿ, ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುವುದಲ್ಲದೆ, ಮೊಡವೆಗಳು ದೂರವಾಗುತ್ತದೆ.
11. ಹಸಿ ತರಕಾರಿ, ತಾಜಾ ಹಣ್ಣು, ಹಸಿರು ಸೊಪ್ಪುಗಳ ಸೇವನೆಯಿಂದಲೂ ಮೊಡವೆಯನ್ನು ದೂರವಿಡಬಹುದು.
12. ಕರಿದ ತಿಂಡಿ, ಕೊಬ್ಬಿನಾಂಶವಿರುವ ಪದಾರ್ಥಗಳಿಂದ ಆದಷ್ಟು ದೂರವಿದ್ದರೆ ಮೊಡವೆಗಳು ಬರುವುದಿಲ್ಲ.